ನಾನಾ ವಿಧದ ನವರಾತ್ರಿ ~ 6 : ನೆರೆಯ ದೇಶಗಳಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ ನೆರೆಯ ದೇಶಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ.  ನೇಪಾಳದ ದಶೈನ್ ನೇಪಾಳದ ಜನತೆ ನಮ್ಮ ಹಾಗೆಯೆ ಹತ್ತು ದಿನಗಳ ದಸರೆ ಹಬ್ಬವನ್ನು ‘ದಶೈನ್’ ಎಂಬುದಾಗಿ ಆಚರಿಸುತ್ತಾರೆ. ಅದು ಅಲ್ಲಿಯ ರಾಷ್ಟ್ರೀಯ ಹಬ್ಬ. ಅಲ್ಲಿಯೂ ಹತ್ತನೆಯ ದಿನ ‘ವಿಜಯದಶಮಿ’. ಅಂದು ಮನೆಯ ಹಿರಿಯರು ಕಿರಿಯರ ಹಣೆಗೆ ‘ಟೀಕಾ’ (ತಿಲಕ) ಇಟ್ಟು ‘ಜಮರಾ’ ಹಚ್ಚುತ್ತಾರೆ. ಜಮರಾ ಅಲ್ಲಿಯ ಒಂದು ಸಸ್ಯ. ಅದರ ಬೀಜಗಳನ್ನು […]

ನಾನಾ ವಿಧದ ನವರಾತ್ರಿ ~ 5 : ಗುಜರಾತಿನ ರಾಸಗರ್ಬಾ, ಮಹಾರಾಷ್ಟ್ರದ ಖಂಡೇ ನವಮಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ  ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ.  ಗುಜರಾತಿನ ದಾಂಡಿಯಾ ದಸರೆ! ನವರಾತ್ರಿ ಎಂದಾಕ್ಷಣ ನಮಗೆ ನೆನಪಾಗುವುದು ಗುಜರಾತಿ ಬಂಧುಗಳ ‘ರಾಸ-ಗರ್ಬಾ’ ಮತ್ತು ’ದಾಂಡಿಯಾ ರಾಸ’ ನೃತ್ಯಗಳು. ಇದರ ವೈಭವವನ್ನು ನೋಡಬೇಕೆಂದರೆ ನೀವು ಅಹಮದಾಬಾದಿಗೆ ಬರಬೇಕು. ಆಗ ಊರಿಗೆ ಊರೇ ನರ್ತಿಸುತ್ತಿದೆಯೇನೋ ಎಂಬಷ್ಟು ಸಂಭ್ರಮದ ವಾತಾವರಣ. ನವರಾತ್ರಿಯಲ್ಲಿ  ಗುಜರಾತಿನ ಯಾವ ಮೂಲೆಗೆ ಹೋದರೂ ನೀವು […]

ನಾನಾ ವಿಧದ ನವರಾತ್ರಿ ~ 4 : ಈಶಾನ್ಯ ರಾಜ್ಯಗಳಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ.  ಮಾತಾ ತ್ರಿಪುರೇಶ್ವರಿ ಮಂದಿರದಲ್ಲಿ…      ಈಶಾನ್ಯ ಭಾರತದ ರಾಜ್ಯಗಳಲ್ಲೊಂದು ತ್ರಿಪುರಾ. ಮೂರು ಕಡೆ ಬಾಂಗ್ಲಾ ದೇಶ ಮತ್ತು ಒಂದು ಕಡೆ ಅಸ್ಸಾಮ್ ಹಾಗೂ ಮಿಜೊರಾಮ್  ಈ ರಾಜ್ಯವನ್ನು ಸುತ್ತುವರಿದಿವೆ. ಮಾತಾ ತ್ರಿಪುರೇಶ್ವರಿ ಅಥವಾ ಮಾತಾ ತ್ರಿಪುರಸುಂದರಿ ದೇವಿಯ ನೆಲೆಯಾದ್ದರಿಂದ ಈ ರಾಜ್ಯಕ್ಕೆ ತ್ರಿಪುರಾ ಎಂಬ ಹೆಸರು ಬಂತು.  ‘ಮಾತಾಬಾರಿ’ ಮಂದಿರ ಎಂದೂ ಕರೆಯಲ್ಪಡುವ ಮಾತಾ ತ್ರಿಪುರೇಶ್ವರಿ ದೇವಾಲಯ ಭಾರತದ […]

ನಾನಾ ವಿಧದ ನವರಾತ್ರಿ ~ 3 : ಬಸ್ತಾರ್ ಮತ್ತು ಬಂಗಾಳದಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ ಬಸ್ತಾರ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ.  ಬಂಗಾಲಿಗಳ ಅತಿ ದೊಡ್ಡ ಹಬ್ಬ! ದುರ್ಗಾ ಮಾತೆ… ಬಂಗಾಲಿಗಳ ಮಾತೃ ದೇವತೆ.  ನಮ್ಮಲ್ಲಿ ಗಲ್ಲಿ-ಗಲ್ಲಿಗೆ ಸಾರ್ವಜನಿಕ ಗಣೇಶನನ್ನು ಕೂರಿಸುವ ಹಾಗೆ, ಪಶ್ಚಿಮ ಬಂಗಾಳ ಮತ್ತು ಬಂಗಾಲಿಗಳು ಇರುವಲ್ಲೆಲ್ಲ ಸಾರ್ವಜನಿಕ ದುರ್ಗಾ ವಿಗ್ರಹದ ಪೂಜೆ  ನಡೆಯುತ್ತದೆ. ಇದೇ ‘ಸರ್ಬೋಜನೀನ ದುರ್ಗಾ ಪೂಜಾ.’ ಮೊದಮೊದಲು ಕೇವಲ ಜಮೀನುದಾರರು, ಶ್ರೀಮಂತರು ತಮ್ಮ ಮನೆಯಂಗಣದಲ್ಲಿ ವಿಜ್ರಂಭಣೆಯಿಂದ ದುರ್ಗಾ ಪೂಜೆ ನಡೆಸುತ್ತಿದ್ದರು. ಇಂಥಾ ಪೂಜೆಗೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. 1606 ರಲ್ಲಿ ಒಮ್ಮೆ ಹೂಗ್ಲಿ ಜಿಲ್ಲೆಯ 12 ಜನ  […]

ರಾಮಲೀಲಾ, ರಾವಣ ದಹನ, ಇತ್ಯಾದಿ : ನಾನಾ ವಿಧದ ನವರಾತ್ರಿ ~ 2

ಕರ್ನಾಟಕದಲ್ಲಿ ನಾವು ನವರಾತ್ರಿಯನ್ನು ಹೇಗೆ ಆಚರಿಸುತ್ತೇವೆ ಎಂಬುದು ನಮಗೆ ಗೊತ್ತಿದೆ. ಇದು ನಾಡಹಬ್ಬ ಎಂಬ ಸಂಭ್ರಮಕ್ಕೆ ಪಾತ್ರವಾದ ವೈಭವದ ಉತ್ಸವ. ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನಾಲ್ಕು ಕಂತುಗಳಲ್ಲಿ ನೀಡಲಿದೆ. ಈ ಕಂತಿನಲ್ಲಿ ಉತ್ತರ ರಾಜ್ಯಗಳ ನವರಾತ್ರಿ ಉತ್ಸವ ಮಾಹಿತಿ ಇದೆ. ಉತ್ತರ ಭಾರತದಲ್ಲಿ… ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ‘ದಶ-ಹರ’ (ಹತ್ತು ತಲೆಯವನ ನಿರ್ನಾಮ) […]

ನಾನಾ ವಿಧದ ನವರಾತ್ರಿ : ದಕ್ಷಿಣ ರಾಜ್ಯಗಳಲ್ಲಿ

ಕರ್ನಾಟಕದಲ್ಲಿ ನಾವು ನವರಾತ್ರಿಯನ್ನು ಹೇಗೆ ಆಚರಿಸುತ್ತೇವೆ ಎಂಬುದು ನಮಗೆ ಗೊತ್ತಿದೆ. ಇದು ನಾಡಹಬ್ಬ ಎಂಬ ಸಂಭ್ರಮಕ್ಕೆ ಪಾತ್ರವಾದ ವೈಭವದ ಉತ್ಸವ. ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನಾಲ್ಕು ಕಂತುಗಳಲ್ಲಿ ನೀಡಲಿದೆ. ಮೊದಲ ಕಂತು, ದಕ್ಷಿಣ ರಾಜ್ಯಗಳ ನವರಾತ್ರಿ ಉತ್ಸವ ಮಾಹಿತಿ ಇದೆ.  ಅವಿಭಜಿತ ಆಂಧ್ರದಲ್ಲಿ ತೆಲುಗು ಭಾಷಿಕರ ಪಾಲಿನ ಅತಿ ಮಹತ್ವದ ಹಬ್ಬ ದಸರಾ. ಬದುಕು ಕಟ್ಟಿಕೊಡುವ ವೃತ್ತಿಗಳ […]

ಸೂಫಿ ಪರಂಪರೆ : ಪ್ರೇಮದ ಹಾದಿಯ ಆತ್ಮಾನುಭೂತಿ

ಸೂಫಿ ಪರಂಪರೆ ಪ್ರೇಮದ ಹಾದಿಯ ಆತ್ಮಾನುಭೂತಿಯನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡು ಬೆಳೆದದ್ದು. ಯಾರು ಪ್ರೇಮದಲ್ಲಿ ಮತ್ತನಾಗಿರುತ್ತಾನೋ ಅವನೇ ಸೂಫಿ. ಎದೆಯಲ್ಲಿ ಪ್ರೇಮ, ಅದನ್ನು ಅಭಿವ್ಯಕ್ತಿಸುವ ಕಾವ್ಯಗಳನ್ನು ಬರೆಯದ ಯಾರೊಬ್ಬರೂ ಈ ಪರಂಪರೆಯಲ್ಲಿ ಕಾಣಸಿಗುವುದಿಲ್ಲ! ಅಷ್ಟರಮಟ್ಟಿಗೆ ಸೂಫಿಗಳ ಅಧ್ಯಾತ್ಮ ಪ್ರೇಮ ಮತ್ತು ಕಾವ್ಯಗಳೊಂದಿಗೆ ಹೆಣೆದುಕೊಂಡಿದೆ ~ ಚೇತನಾ  “ಪ್ರಾಣ ನೀನು. ನಿನ್ನನ್ನು ಮನುಷ್ಯ ಎಂದೇಕೆ ಅಂದುಕೊಂಡಿದ್ದೀಯ? ನೀನು ನೀರು. ಆದರೆ ಗಡಿಗೆ ಎಂದುಕೊಂಡುಬಿಟ್ಟಿದ್ದೀಯ. ಬೇರೆ ವಸ್ತುಗಳು ಹುಡುಕುವುದರಿಂದ ಸಿಗುತ್ತವೆ. ಆ ಪ್ರಿಯತಮನ ವಿಷಯದಲ್ಲಿ ಒಂದು ಸೋಜಿಗ. ಅವನನ್ನು ಪಡೆಯುವ ಮುನ್ನ […]

ವಲಸೆಯನ್ನೇ ಅರಿಯದ ನವಾಹೋ ಜನಾಂಗ : ಸೃಷ್ಟಿ ಕಥನಗಳು

“ನಮ್ಮ ಸಂಪ್ರದಾಯದಲ್ಲಿ ವಲಸೆ ಅನ್ನುವ ಅರ್ಥ ಹೊಂದಿರುವ ಯಾವ ಪದವೂ ಇಲ್ಲ. ನಮ್ಮಲ್ಲಿ ವಲಸೆ ಹೋಗುವುದು ಅಂದರೆ ಇಲ್ಲವಾಗುವುದು ಎಂದೇ ಅರ್ಥ” ~ ಇದು ನವಾಹೋಗಳ ಮಾತು.  ಕೊಲರಾಡೋದ ಸಿಸ್ನಾಜಿನಿ (ಬ್ಲಾಂಕಾ ಶಿಖರ) ಹಾಗೂ ಡಿಬೆ ನಿಸಾ (ಹೆಸ್ಪಿರಸ್ ಶಿಖರ), ನ್ಯೂ ಮೆಕ್ಸಿಕೋದ ಸೂಡ್ಜಿ (ಮೌಂಟ್ ಟೇಲರ್ ಶಿಖರ), ಆರಿಜೋನಾದ ಡೂಕ್ ‘ಒ ಊಸ್ಲಿಡ್ (ಸ್ಯಾನ್‍ಫ್ರಾನ್ಸಿಸ್ಕೋ ಶಿಖರ) – ಈ ನಾಲ್ಕು ಬೆಟ್ಟಗಳ ನಡುವೆ ಜೀವಿಸುವ ಜನಾಂಗವೇ ನವಾಹೋ ಜನಾಂಗ. ನವಾಹೋ ಜನಗಳು ತಮ್ಮ ನೆಲವನ್ನು ಅತ್ಯಂತ ಪೂಜ್ಯ […]

ಬಾವುಲ್ : ಭಕ್ತಿಯಲಿ ಉನ್ಮತ್ತ ಪರಂಪರೆ

ಬಾವುಲ್ ಪಂಗಡ ಅತ್ಯಂತ ಸಂಕೀರ್ಣವಾದುದು. ಇಲ್ಲಿ ಹಲವು ಮೂಲಗಳಿಂದ ಬಂದು ಸೇರಿದ ಜನರಿದ್ದಾರೆ. ತಲೆಮಾರುಗಳ ಹಿಂದೆ ಬಾವುಲ್‍ಪಂಥದತ್ತ ಆಕರ್ಷಿತರಾಗಿ ಬಂದ ಬೇರೆ ಬೇರೆ ಜಾತಿ ಮತಗಳವರು ಸೇರಿ ಈ ವಿಶಿಷ್ಟವಾದ ಪಂಗಡ ಬೆಳೆದುಕೊಂಡಿದೆ. ಇವರ ಸಂಖ್ಯೆ ಬಹಳ ಕಡಿಮೆ ಇರುವುದಾದರೂ ಬಂಗಾಳ ಪ್ರಾಂತ್ಯದಲ್ಲಿ ಬಾವುಲ್‍ಗಳು ಬೀರಿರುವ ಪರಿಣಾಮ ಗಣನೀಯವಾದುದು ~ ಚೇತನಾ ತೀರ್ಥಹಳ್ಳಿ   ಬಾವುಲ್‍ಗಳು ಅಪ್ಪಟ ಮಣ್ಣಿನ ಮಕ್ಕಳು. ದೇಸೀತನ ಇವರಲ್ಲಿ ನೂರಕ್ಕೆ ನೂರು ಮೇಳೈಸಿರುತ್ತದೆ. ಅವರ ನಡೆ ನುಡಿಗಳೆಲ್ಲವೂ ಅತ್ಯಂತ ಪ್ರಾಮಾಣಿಕ, ನೇರ ಮತ್ತು […]

ಜೀವನಶೈಲಿಯಾದ ಮತಪಂಥಗಳು…

ಮೂಲಧರ್ಮದಿಂದ ಕವಲೊಡೆದ ಕೆಲವು ಮತಪಂಥಗಳು ಕಾಲಕ್ರಮದಲ್ಲಿ ಒಂದು ಧರ್ಮಕ್ಕಿಂತ ಹೆಚ್ಚು ಜೀವನಶೈಲಿಯಾಗಿ ರೂಪುಗೊಂಡಿವೆ. ಮತ್ತಿವು ತಾವು ಕವಲಾಗಿ ಬಂದ ಧರ್ಮಗಳನ್ನು ಸಹನೀಯವೂ ಸುಂದರವೂ ವಿಶಾಲವೂ ಆಗಿಸುತ್ತ ಬಂದಿವೆ. ಬಾವುಲ್, ಸೂಫೀ, ಝೆನ್, ತಾವೋ, ಹಸೀದ್ ಮೊದಲಾದವುಗಳು ಇದಕ್ಕೆ ಸದ್ಯದ ಉದಾಹರಣೆಗಳು.. ಧರ್ಮ ಎಂದರೆ ಶಾಶ್ವತತೆಯನ್ನು ಸಮಯದೊಳಕ್ಕೆ ಅನುವಾದಿಸುವುದು ಅನ್ನುತ್ತಾರೆ ಓಶೋ. ನಿತ್ಯಸತ್ಯವಾದ, ಬದಲಾಗದ ಸಂಗತಿಯೊಂದು ಕಾಲದ ಹರಿವಿನ ಜೊತೆ ವಿಸ್ತಾರಗೊಳ್ಳುತ್ತ, ಇಲ್ಲವೇ ವಿಘಟನೆಗೊಳ್ಳುತ್ತ ಸಾಗುವ ಪ್ರಕ್ರಿಯೆಯನ್ನು ನಾವು ಧರ್ಮವೆಂದು ಕರೆಯುತ್ತೇವೆ. ಒಂದಷ್ಟು ಚಿಂತನೆಗಳು, ವಿಧಿವಿಧಾನಗಳು, ನಂಬಿಕೆಗಳು ಒಗ್ಗೂಡಿ ಒಂದು […]