ಶ್ರೀ ಕೃಷ್ಣ ಸೂಕ್ತಿ : ಬೆಳಗಿನ ಹೊಳಹು

ಜನನ ಮರಣಗಳನ್ನು ದಾಟಿ ಅಮೃತತ್ವದ ದಡವನ್ನು ಸೇರುವುದೇ ಇಹಜೀವನದ ಗುರಿ. ~ ರಾಜ್ಯವೇ ಮೊದಲಾದ ಬಾಹ್ಯ ವಸ್ತುಗಳನ್ನು ತ್ಯಜಿಸುವುದರಿಂದ ಮೋಕ್ಷವು ಲಭಿಸಲಾರದು; ಇಂದ್ರಿಯಸುಖವನ್ನು ತಣಿಸುವ ವಿಷಯಗಳನ್ನು ತ್ಯಜಿಸುವುದರಿಂದ ಅದರ ಲಾಭವುಂಟಾಗುವುದು. ~ ಮಾನವ ದೇಹವು ದೋಣಿ ಇದ್ದಂತೆ. ಜನನ ಮರಣವೆಂಬ ಸಾಗರವನ್ನು ದಾಟಿಸಿ ಅಮೃತತ್ವದ ದಡವನ್ನು ತಲುಪಿಸುವುದೇ ಅದರ ಮೊದಲನೆಯ ಹಾಗೂ ಅತ್ಯತ್ತಮವಾದ ಉಪಯೋಗ. ~ ಗುರು ಸಮರ್ಥನಾದ ಅಂಬಿಗ; ಭಗವತ್ ಕೃಪೆ ಸಹಕಾರಿಯಾದ ಗಾಳಿ. ಇವೆರಡೂ ಇರುವಾಗ ಮನುಷ್ಯನು ಸಂಸಾರ ಸಾಗರವನ್ನು ದಾಟಲು ಯತ್ನಿಸದಿದ್ದರೆ, ಅವನು […]

ಪ್ರಜಾಪತಿಗಳು ಮತ್ತು ಸಂತಾನ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #39

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 2ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/11/12/sanatana/ ಪುತ್ರರಲ್ಲಿ ಮತ್ತು ಪುತ್ರವಂತರಲ್ಲಿ ಶ್ರೇಷ್ಠ ಭಗವಾನ್ ಋಷಿ ದಕ್ಷನು ಬ್ರಹ್ಮನ ಎಡ ಅಂಗುಷ್ಠದಿಂದ ಜನಿಸಿದನು. ಆ ಮಹಾತ್ಮನ ಭಾರ್ಯೆಯು ಬಲ ಅಂಗುಷ್ಠದಿಂದ ಹುಟ್ಟಿದಳು. ಆ ಮುನಿಯು ಅವಳಿಂದ ಐವತ್ತು ಕನ್ಯೆಯರನ್ನು ಪಡೆದನು. ಆ ಎಲ್ಲ ಕನ್ಯೆಯರೂ ಅನವದ್ಯಾಂಗಿಯರೂ, ಕಮಲಲೋಚನೆಯರೂ ಆಗಿದ್ದರು. ಪುತ್ರಹೀನನಾಗಿದ್ದ ಪ್ರಜಾಪತಿಯು ಅವರನ್ನೇ ಪುತ್ರಿಕರನ್ನಾಗಿರಿಸಿಕೊಂಡನು. […]

ಶ್ರೀರಾಮ ಸೂಕ್ತಿ : ಬೆಳಗಿನ ಹೊಳಹು

ಶ್ರೀರಾಮನು ಭಕ್ತಶ್ರೇಷ್ಠನಾದ ಹನುಮನಿಗೆ ನೀಡಿದ ಉಪದೇಶಗಳು ‘ಶ್ರೀ ರಾಮ ಸೂಕ್ತಿ’ಯಲ್ಲಿ ಸಂಕಲನಗೊಂಡಿದೆ. ಅದರಿಂದ ಕೆಲವು ಹೊಳಹುಗಳು, ನಿಮಗಾಗಿ… “ಪರಮಾತ್ಮನ  ನೆರಳೇ  ಎಲ್ಲ ಜೀವಿಗಳಲ್ಲಿ ಜೀವಾತ್ಮನಾಗಿ ಪ್ರತಿಬಿಂಬಿತವಾಗಿದೆ. ವಿಶಾಲವಾದ ಆಕಾಶವೇ ಎಲ್ಲ ನದಿ, ಸರೋವರಗಳಲ್ಲಿ ಪ್ರತಿಬಿಂಬಿಸುತ್ತದೆ” ~ ಶುದ್ಧವಾದ ಜ್ಞಾನವು ಎಲ್ಲ ಆಸೆ ಮತ್ತು ಆಸಕ್ತಿಗಳನ್ನು ಕೊಲ್ಲುತ್ದೆ. ಸಕಾಮಕರ್ಮ ಯಾವುದೇ ಆಗಿರಲಿ, ಅದನ್ನು ಬಿಡಬೇಕು. ಅದು ವ್ಯಕ್ತಿಯನ್ನು ಜನನ – ಮರಣದ ಸಂಕೋಲೆಯಲ್ಲಿ ಬಂಧಿಸುತ್ತದೆ.  ನಿಜವಾದ ಜ್ಞಾನವನ್ನು ಹೊಂದಲು ಅದು ಅಡ್ಡಿಯಾಗುವುದು. ~ ಪಂಚಭೂತಗಳಿಂದ, ಅತ್ಯಂತ ಸೀಮಿತವೂ ನಾಶವುಳ್ಳದ್ದೂ […]

ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #38

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಮಾಹಿತಿ ಕೃಪೆ : http://www.vyasaonline.com ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ ಮತ್ತು ಕ್ರತು ಈ ಆರು ಮಹರ್ಷಿಗಳು ಬ್ರಹ್ಮನ ಮಾನಸಪುತ್ರರು. ಮರೀಚಿಯ ಪುತ್ರ ಕಶ್ಯಪ. ಕಶ್ಯಪನಿಂದ ಮಹಾಭಾಗ ದಕ್ಷನ ಹದಿಮೂರು ಕನ್ಯೆಯರಲ್ಲಿ ಎಲ್ಲ ಪ್ರಜೆಗಳೂ ಹುಟ್ಟಿದರು. ಅದಿತಿ, ದಿತಿ, ದನು, ಕಾಲಾ, ಅನಾಯು, ಸಿಂಹಿಕಾ, ಮುನಿ, ಕ್ರೋಧಾ, ಪ್ರಾವಾ, ಅರಿಷ್ಟಾ, ವಿನತಾ, ಕಪಿಲ, ಮತ್ತು ಕದ್ರು ಇವರು ದಕ್ಷಕನ್ಯೆಯರು. ಇವರಲ್ಲಿ ಅನಂತ ಸಂಖ್ಯೆಗಳಲ್ಲಿ ವೀರ್ಯಸಂಪನ್ನ […]

ನಾನು, ಮತ್ತೊಂದಾಗಲು ಸಾಧ್ಯವೇ!? : ಬೆಳಗಿನ ಹೊಳಹು

ನಾನ್ಯದನ್ಯದ್ಭವೇದ್ಯಸ್ಮಾನ್ನಾನ್ಯತ್ಕಿಂಚಿದ್ವಿಚಿಂತಯೇತ್ | ಅನ್ಯಸ್ಯಾನ್ಯತ್ವಭಾವೇ ಹಿ ನಾಶಸ್ತಸ್ಯ ಧ್ರುವೋ ಭವೇತ್ || ~ ಶಂಕರಾಚಾರ್ಯರ ಉಪದೇಶ ಸಾಹಸ್ರಿ; ನಾನ್ಯದನ್ಯತ್ ಪ್ರಕರಣ ಭಾವಾರ್ಥ : ಒಂದು ಮತ್ತೊಂದಾಗಲಾರದು. ಆದುದರಿಂದ ಬೇರೆ ಯಾವುದನ್ನಾದರೂ ತಾನೆಂದು ಭಾವಿಸಬಾರದು. ಏಕೆಂದರೆ ಒಂದು ಮತ್ತೊಂದಾಗುವುದಾದರೆ ಅದಕ್ಕೆ ನಾಶವು ನಿಶ್ಚಯವಾಗಿ ಉಂಟಾಗುವುದು. ತಾತ್ಪರ್ಯ : ಇಲ್ಲಿ ಒಂದು ಎಂದರೆ ಜೀವ. ಮತ್ತೊಂದು ಅಂದರೆ ಬ್ರಹ್ಮ. ಜೀವವು ಸ್ವರೂಪತಃ ಬ್ರಹ್ಮಕ್ಕಿಂತ ಬೇರೆ ಎಂದಾದರೆ, ಜೀವವು ಎಂದಿಗೂ ಬ್ರಹ್ಮವಾಗಲಾರದು. ಆದರೆ ಜೀವವು ಸ್ವರೂಪತಃ ಬ್ರಹ್ಮಕ್ಕಿಂತ ಬೇರೆ ಅಲ್ಲ. ಸ್ವರೂಪತಃ ತನ್ನನ್ನು […]

ಎಲ್ಲ ಮೋಡಗಳೂ ಮಳೆಗರಿಯುವುದಿಲ್ಲ : ಬೆಳಗಿನ ಹೊಳಹು

ರೇ ರೇ ಚಾತಕ ಸಾವಧಾನಮನಸಾ ಮಿತ್ರ ಕ್ಷಣಂ ಶ್ರೂಯತಾ- ಮಂಭೋದಾ ಬಹವೋ ವಸಂತಿ ಗಗನೇ ಸರ್ವೇSಪಿನೇತಾದೃಶಾಃ | ಕೇಚಿದ್ವೃಷ್ಟಿಭಿರಾರ್ದ್ರಯಂತಿ ಧರಣೀಂ ಗರ್ಜಂತಿ ಕೇಚಿದ್ವೃಥಾ ಯಂ ಯಂ ಪಶ್ಯತಿ ತಸ್ಯ ತಸ್ಯ ಪುರತೋ ಮಾ ಬ್ರೂಹಿ ದೀನಂ ವಚಃ  || ಸದುಕ್ತಿ ಕರ್ಣಾಮೃತ || ಅರ್ಥ: ಎಲೈ ಚಾತಕ! ಒಂದು ಕ್ಷಣ ನನ್ನ ಮಾತನ್ನು ಆಲಿಸಿ ಕೇಳು. ಆಕಾಶದಲ್ಲಿ ನೂರಾರು ಮೋಡಗಳೇನೋ ಇವೆ. ಆದರೆ ಅವೆಲ್ಲವೂ ಒಂದೇ ತೆರನಲ್ಲ. ಕೆಲವು ಮಳೆ ಸುರಿಸಿ ಭೂಮಿಯನ್ನು ತಣ್ಣಗೆ ಮಾಡುತ್ತವೆ. ಮಿಕ್ಕವುಗಳು ಬರಿಯ […]

ಭಾರತವೆಂದರೆ ಬೆಳಕಿನ ಹುಡುಕಾಟ; ಬನ್ನಿ, ಜ್ಞಾನ ದೀವಿಗೆ ಹೊತ್ತಿಸಿಕೊಳ್ಳೋಣ!

ನಮ್ಮ ಪೂರ್ವಜರು ಹಣತೆಯಂತೆ ಹೊತ್ತಿಸಿಟ್ಟ ಜ್ಞಾನ, ಬಿಟ್ಟ ಕಣ್ಣಲ್ಲೆ ಜಗತ್ತಿನ ಪರಿಚಯ ಮಾಡಿಸುವ ತಂತ್ರಜ್ಞಾನವಲ್ಲ ನಿಜ…  ಆದರೆ, ಈ ಜ್ಞಾನ ಕಣ್ಣು ಮುಚ್ಚಿ ಜಗತ್ತನ್ನು ಅರಿಯುವಂತೆ ಮಾಡುವ ದಿವ್ಯಜ್ಞಾನ. ಮತ್ತು; ಅದು ಕಾಣಿಸುವ ಈ ಜಗತ್ತು, ಅಂತರಂಗದ ಜಗತ್ತು…. ~ ಗಾಯತ್ರಿ ಭಾರತಕ್ಕೂ ಬೆಳಕಿಗೂ ಎಡೆಬಿಡದ ನಂಟು. `ಭಾ’ ಅಂದರೆ `ಬೆಳಕು’. ಭಾರತ ಪದದ ಅರ್ಥ- ಬೆಳಕಿನ ಹುಡುಕಾಟದಲ್ಲಿ ನಿರತರಾದವರು ಎಂದು. ಹೀಗಾಗಿ ದೀಪಾವಳಿ ಕೇವಲ ಬಾಹ್ಯ ಆಚರಣೆಗಳ ನಿಟ್ಟಿನಿಂದಷ್ಟೇ ಅಲ್ಲ, ಆಂತರಿಕ ಕಾರಣಗಳಿಗಾಗಿಯೂ ಮಹತ್ವ ಪಡೆದಿದೆ. […]

ದೀಪದಿನಂ ಹರತು ವೋ ದುರಿತಂ : ದೀಪಾವಳಿ ಶುಭಾಶಯ

ದೀಪಾವಳಿ ಹಬ್ಬ ಸಾಲಿನ ಆಶಯ ಶ್ಲೋಕ ಇಲ್ಲಿದೆ… ಉಪಶಮಿತ ಮೇಘನಾದಂ ಪ್ರಜ್ವಲಿತ ದಶಾನನಂ ರಮಿತರಾಮಂ| ರಾಮಾಯಣಮಿದಂ ಸುಭಗಂ ದೀಪದಿನಂ ಹರತು ವೋ ದುರಿತಂ || ಭವಿಷ್ಯೋತ್ತರ ಪುರಾಣ || ಅರ್ಥ: ರಾಮಾಯಣದಲ್ಲಿ ಮೇಘನಾದನು (ರಾವಣನ ಮಗ ಇಂದ್ರಜಿತ್) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿಯು ನಮ್ಮ ಸಂಕಷ್ಟಗಳನ್ನು ಹೋಗಲಾಡಿಸಲಿ. – […]

ತಿಪ್ಪೆಗುಂಡಿ ಪೂಜೆ, ಜೂಜು, ಕಳವು … ಹಬ್ಬದ ಮೋಜಿಗೆ ಸಂಕೇತ ಹಲವು!

ದೀಪಾವಳಿ ಆಯಾ ಪ್ರಾಂತ್ಯ, ಜನಜೀವನಕ್ಕೆ ತಕ್ಕಂತೆ ಇದು ವೈವಿಧ್ಯಮಯವಾಗಿ ಆಚರಣೆಗೊಳ್ಳುವ ಬಹುಸಂಸ್ಕೃತಿಯ ಹಬ್ಬ. ಈ ಭಿನ್ನತೆಯ ನಡುವೆಯೂ ದೀಪಾವಳಿಯ ಮೂಲ ಕಾಳಜಿ ಎಲ್ಲ ಬಗೆಯ ಕತ್ತಲನ್ನು ಕಳಚಿ ಮುನ್ನಡೆಯುವುದೇ ಆಗಿದೆ ~ ಗಾಯತ್ರಿ ಪ್ರೀತಿಯ ಕರೆ ಕೇಳಿ, ಆತ್ಮನ ಮೊರೆ ಕೇಳಿ, ನೀ ಬಂದು ನಿಂದಿಲ್ಲಿ ದೀಪ ಹಚ್ಚಾ… ಅನ್ನುತ್ತದೆ ಕವಿವಾಣಿ. ದೀಪಾವಳಿಯ ಆಶಯ ಅದೇ ಆಗಿದೆ. ಸ್ವಂತದ ಉದ್ಧಾರಕ್ಕೆ, ಸಹಬಾಳ್ವೆಯ ಸವಿಗೆ ದೀಪ ಹಚ್ಚಬೇಕು. ನಮ್ಮ ಬದುಕನ್ನು ಸಾಧ್ಯವಾಗಿಸಿರುವ ಭೂಮಿ, ಗೋವು, ಬಂಧು ಬಾಂಧವರನ್ನೊಳಗೊಂಡು ವರ್ಷದಲ್ಲಿ […]

ನೀರು ತುಂಬುವ ಹಬ್ಬದಂದು ಹೇಳಬೇಕಾದ ಶ್ಲೋಕ ಯಾವುದು?

ಆಶ್ವೀಜದ ಚತುರ್ದಶಿಯಂದು ‘ಅಭ್ಯಂಜನ’ ಸ್ನಾನ. ಈ ದಿನ ಯಾಕೆ ನರಕ ತ್ರಯೋದಶಿ ಅನ್ನುವ ಕಥೆಯನ್ನು ನಾಳೆಯೇ ಓದೋಣ. ಮರುದಿನದ ಅಭ್ಯಂಗಕ್ಕಾಗಿ ತ್ರಯೋದಶಿ ಸಂಜೆ ನೀರು ತುಂಬುವ ಸಂಭ್ರಮವೇ ಈ ದಿನದ ಹಬ್ಬ. ಇಂದು ಸಂಜೆ ಕೆಲವರ ಮನೆಗಳಲ್ಲಿ ‘ನೀರು ತುಂಬುವ ಹಬ್ಬ’ ಆಚರಿಸಲಾಗುತ್ತದೆ ಅಲ್ಲವೆ? ಹಿಂದೆಲ್ಲಾ ಹಂಡೆಗಳು, ತೊಟ್ಟಿಗಳು ಇರುತ್ತಿದ್ದವು. ಈಗ ಮನೆಯ ಮೇಲೆ ಸಿಂಟೆಕ್ಸ್, ಬಚ್ಚಲಿನಲ್ಲಿ ನಲ್ಲಿ ಇದೆ. ಹಾಗಂತ ಹಬ್ಬವನ್ನು ಅಟ್ಟ ಹತ್ತಿಸಲಾದೀತೆ? ಖಂಡಿತ ಇಲ್ಲ! ಹಾಗೆಂದೇ ನಮ್ಮ ಅಮ್ಮಂದಿರು ನಲ್ಲಿ – ಪೈಪುಗಳಿಗೆಲ್ಲ […]