ಅಗ್ನಿ | ಭಾರತೀಯ ಪೌರಾಣಿಕ ಪಾತ್ರಗಳು ~ 1

ಭಾರತೀಯ ಪೌರಾಣಿಕ ಪಾತ್ರಗಳ ಕಿರುಪರಿಚಯ ಸರಣಿ, ಇಂದಿನಿಂದ…. ಶಿವ ಭಕ್ತ ವೈಶ್ವಾನರನಿಗೆ ಶುಚಿಷ್ಮತಿ ಎಂಬ ಪತ್ನಿಯಲ್ಲಿ ಜನಿಸಿದ ಪುತ್ರನೇ ಅಗ್ನಿ. ಈತ ಶಿವನ ವರಪ್ರಸಾದವಾಗಿದ್ದರೂ ಬಾಲಾರಿಷ್ಟ ದೋಷದಿಂದ ಕೂಡಿದ್ದ. ಇದರಿಂದ ಪಾರಾಗಲು ಮಹಾದೇವನ ಮೊರೆಯನ್ನೇ ಹೋಗಬೇಕೆಂದು ನಾರದರು ತಿಳಿಸಲಾಗಿ ಸುದೀರ್ಘ ತಪಸ್ಸು ಕೈಗೊಂಡ. ದೇವರಾಜ ಇಂದ್ರ ವೈಶ್ವಾನರ ಪುತ್ರನ ತಪಸ್ಸಿನಿಂದ ಕನಲಿದ. ಅವನ ಬಳಿ ಬಂದು, “ನಿನಗೇನು ಬೇಕೋ ಕೊಡುತ್ತೇನೆ, ತಪಸ್ಸು ಸಾಕುಮಾಡು” ಎಂದು ಹೇಳಿದ. ಅದಕ್ಕೆ ಅವನು ಒಪ್ಪದಿರಲು, ಕೋಪದಿಂದ ವಜ್ರಾಯುಧ ಪ್ರಹಾರ ಮಾಡಿದ. ಆಗ […]

ಶ್ರದ್ಧಾಪ್ರೇಮದ ಅಪ್ರತಿಮ ಜ್ಞಾನಿ : ಗುರು ನಾನಕ್

‘ಇಕ್ ಓಂಕಾರ್ ಸತ್ ನಾಮ್’ – ಓಂಕಾರವೊಂದೇ ಸತ್ಯ ಎಂದು ಘೋಷಿಸಿದ ಗುರುನಾನಕ್ ಅಪ್ರತಿಮ ಜ್ಞಾನಿ. ಶ್ರದ್ಧಾಪ್ರೇಮದ ಸಾಕಾರ ಮೂರ್ತಿ. ಜ್ಞಾನ ಭಕ್ತಿಗಳ ಅಪರೂಪದ ಸಂಗಮ. ಸಿಕ್ಖ್ ಮತದ ಸ್ಥಾಪಕರೂ ಆದ ಗುರು ನಾನಕ್ ಜನಿಸಿದ ದಿನ ಇಂದು ~ ಗಾಯತ್ರಿ ಒಂದೂರಿನಲ್ಲಿ ಒಬ್ಬ ಬಾಲಕ. ಅವನು ವ್ಯವಹಾರ ಜ್ಞಾನ ಕಲಿಯಲೆಂದು ತಂದೆ ಶಾಲೆಗೆ ಸೇರಿಸಿದರು. ಅವನು ತಪ್ಪಿಸಿಕೊಂಡು ಕಾಡು ಸೇರುತ್ತಿದ್ದ, ಭಗವಂತನನ್ನು ಧ್ಯಾನಿಸುತ್ತಾ ಕುಳಿತುಬಿಡುತ್ತಿದ್ದ. ಒಮ್ಮೆ ಅದೇ ಊರಿನ ವೃದ್ಧನೊಬ್ಬ ತೀರ್ಥಯಾತ್ರೆ ಹೊರಟ. ತನ್ನ ಗದ್ದೆ […]

ಸರಮಾ ದೇವಶುನೀ : ಋಷಿಗೆ ಹಸುಗಳನ್ನು ಹುಡುಕಿಕೊಟ್ಟ ಹೆಣ್ಣುನಾಯಿ

ಸರಮೆ ದೇವಲೋಕದ ಹೆಣ್ಣುನಾಯಿ. ಮನುಷ್ಯರಿಗೆ ಹಸುಗಳ ಹಾಲನ್ನು ದೊರಕಿಸಿಕೊಟ್ಟ ಕೀರ್ತಿ ಇದರದ್ದೇ. ಅಸುರರು ಕದ್ದೊಯ್ದ ಹಸುಗಳನ್ನು ಇಂದ್ರನಿಗೆ ಪತ್ತೆ ಮಾಡಿಕೊಟ್ಟಿದ್ದೂ ಇದೇ. ಋಗ್ವೇದದಲ್ಲಿ ಇದರ ಉಲ್ಲೇಖ ಬರುತ್ತದೆ. ಇದರ ಹೆಸರಿನಲ್ಲಿ ಒಂದು ಋಚೆಯೂ ಇದೆ. ನಮ್ಮ ವೇದಗಳು “ಯಾವ ಪ್ರಾಣಿಯೂ ಹೆಚ್ಚಲ್ಲ, ಯಾವುದೂ ಕಡಿಮೆಯೂ ಅಲ್ಲ” ಎಂಬುದನ್ನು ಈ ಮೂಲಕ ಸ್ಪಷ್ಟವಾಗಿ ಸಾರಿವೆ ~ ಗಾಯತ್ರಿ ನಾಯಿ ಮನುಷ್ಯ ಸಂಕುಲದ ಮೊದಲ ಸಾಕು ಪ್ರಾಣಿ ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಬಹುಶಃ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ, ಅಲ್ಲಲ್ಲಿ […]

ಸಾಮಾಜಮುಖಿ ಅಧ್ಯಾತ್ಮ ಸಾಧಕಿ ~ ಶ್ರೀಮಾತೆ ಶಾರದಾ ದೇವಿ

ಅವರು ಸಂನ್ಯಾಸಿ ಶಿಷ್ಯರಿಗೆ ಅಮ್ಮನಾಗಿದ್ದಂತೆಯೇ ಕಳ್ಳತನ ಮಾಡುತ್ತಿದ್ದ ಅಂಜದನಿಗೂ ಅಮ್ಮನಾದರು. ಡಕಾಯಿತ ದಂಪತಿಗಳಿಂದ `ಮಗಳೇ’ ಎಂದು ಕರೆಸಿಕೊಂಡರು. ಸಾಮಾಜಿಕ ತಾರತಮ್ಯವನ್ನು ತಮ್ಮ ಆಚರಣೆಯ ಮೂಲಕ ನಯವಾಗಿ ವಿರೋಧಿಸಿ ಮೇಲ್ಪಂಕ್ತಿ ಹಾಕಿಕೊಟ್ಟರು. ವಿವೇಕಾನಂದರೊಡನೆ ಕೋಲ್ಕತಾಗೆ ಬಂದಿದ್ದ ವಿದೇಶೀ ಹೆಣ್ಣುಮಕ್ಕಳನ್ನು ಹುರಿದುಂಬಿಸಿ, ಹೆಣ್ಣುಮಕ್ಕಳ ಶಾಲೆಯನ್ನು ತೆರೆಯಲು ಪ್ರೋತ್ಸಾಹಿಸಿದರು. ವಿವೇಕಾನಂದರ ಬಯಕೆಯಾಗಿದ್ದ ಸಂನ್ಯಾಸಿನೀ ಮಠದ ಸ್ಥಾಪನೆಗೆ ಪ್ರೇರಣೆಯಾದರು…. ~ ಚೇತನಾ ತೀರ್ಥಹಳ್ಳಿ ಪವಿತ್ರಂ ಚರಿತಂ ಯಸ್ಯಾಃ ಪವಿತ್ರಂ ಜೀವನಂ ತಥಾ… ಪವಿತ್ರತಾ ಸ್ವರೂಪಿಣ್ಯೈ ತಸ್ಯೈ ಕುರ್ಮೋ ನಮೋನ್ನಮಃ – ಯಾರು ಪವಿತ್ರವಾದ ಚಾರಿತ್ರ್ಯವನ್ನು ಹೊಂದಿರುವಳೋ […]

ಸಹಜ ಜ್ಞಾನಿ ಸಂತ ತುಕಾರಾಮ

ಆಗಸದಲ್ಲಿ ಹಗ್ಗದಾಟ ನಡೆಸುವ ಡೊಂಬರು ಅಮರರಾಗುವುದಿಲ್ಲ. ಮೋಡಗಳ ಕುದುರೆ, ಯೋಧರು ನಿಜವಾದ ಯುದ್ಧಕ್ಕೆ ಒದಗುವುದಿಲ್ಲ. ಹಾಗೆಯೇ ಶಾಬ್ದಿಕ ಜ್ಞಾನವು ಬರಿಯ ತೌಡು ಕುಟ್ಟಿದಂತೆ ನಿಷ್ಪಲವಾದುದು ಎಂದವನು ಟೀಕಿಸುತ್ತಿದ್ದ. ಅವನ ಭಗವದ್ಭಕ್ತಿ ಹಾಗೂ ಸಾಧನೆಯ ಪ್ರಾಮಾಣಿಕತೆ ಅವನ ಟೀಕೆಗಳಿಗೆ ತೂಕ ತಂದುಕೊಟ್ಟಿದ್ದವು. ಸಂತ ತುಕಾರಾಮ, ಭಕ್ತಿಚಳವಳಿಯ ಪರ್ವಕಾಲದಲ್ಲಿ, ಮರಾಠಾ ಪ್ರಾಂತ್ಯದಲ್ಲಿ ಆಗಿಹೋದ ಕ್ರಾಂತಿಕಾರಿ ಸಂತ. ಈತನ ಬದುಕೇ ಸ್ವಯಂಪಾಠ. ತನ್ನನ್ನು ಈತ ಜಗತ್ತಿನ ಪರೀಕ್ಷೆಗೆ ಅದೆಷ್ಟು ಒಡ್ಡಿಕೊಂಡನೆಂದರೆ, ಮತ್ತೆ ಮತ್ತೆ ಪರೀಕ್ಷೆಯ ಅಗ್ನಿಯಲ್ಲಿ ಹದಗೊಳ್ಳುತ್ತಾ ಪುಟವಿಟ್ಟ ಚಿನ್ನದಂತೆ ಪ್ರಖರವಾಗುತ್ತಲೇ […]

ಅಕ್ಕರೆ ಹೃದಯದ ರಕ್ಕಸಿ ‘ಹಿಡಿಂಬೆ’

ಪಾಂಡವರ ಧರ್ಮಯುದ್ಧದಲ್ಲಿ ಮಗನೂ ಪಾಲ್ಗೊಂಡು ಕಾದಾಡಲೆಂದು ರಣಾರತಿ ಎತ್ತಿ ತಿಲಕವಿಟ್ಟು ಕಳುಹಿಸಿದ ಹಿಡಿಂಬೆಯ ಮನಸ್ಥಿತಿ ಎಲ್ಲಾ ಸೈನಿಕರ ತಾಯಿ, ಪತ್ನಿಯಂತೆ ಬಹುಶಃ ತ್ಯಾಗೋನ್ನತ್ಯದಿ ಮಡುಗಟ್ಟಿ ಹಿಮವಾಗಿಬಿಟ್ಟಿತ್ತೇನೋ. ಹಿಡಿಂಬೆಯ ಮಗ ಘಟೋತ್ಗಜ ಕುರುಕ್ಷೇತ್ರದಿಂದ ಜೀವಂತವಾಗಿ ಮತ್ತೆ ಬರಲೇ ಇಲ್ಲ. ಹಿಡಿಂಬೆಯ ಕಾಯುವಿಕೆಯೂ ಮುಗಿಯಲೇ ಇಲ್ಲ….  ~ ಸಿರಿ ಆಚಾರ್ಯ ಹಿಡಿಂಬೆ, ಅಸುರ ಕುಲದವಳಾದರೂ ಶ್ರೀಹರಿಯ ಅವತಾರವಾದ ಶ್ರೀ ವೇದವ್ಯಾಸರ ಪೌರೋಹಿತ್ಯದಲ್ಲಿ ಭೀಮನ ಕೈ ಹಿಡಿದ ಅದೃಷ್ಟವಂತೆ. ಭೀಮನ ಮೊದಲ ಪತ್ನಿ ಇವಳೇ. ಅತ್ಯಲ್ಪ ಕಾಲವಾದರೂ ಇದ್ದಷ್ಟು ದಿನ  ಅತ್ಯುತ್ಕಟ […]

ಬುದ್ಧಕಾರುಣ್ಯ ಸವಿದ ನೇಕಾರನ ಮಗಳು

ಗ್ರಾಮಸ್ಥರು ನೇಕಾರನ ಮಗಳ ಮೇಲೆ `ಅಧಿಕಪ್ರಸಂಗಿ’ ಎಂದು ಕೋಪಗೊಂಡರು. ಬಿಕ್ಖುಗಳಿಗೂ ಇದು ಆಶ್ಚರ್ಯ ತಂದಿತು. ನೇಕಾರನ ಮಗಳು ಎಷ್ಟೇ ಲಗುಬಗೆಯಿಂದ ಧಾವಿಸಿ ಬಂದರೂ ತಡವಾಗಿಹೋಗಿತ್ತು. ಆದರೆ ಬುದ್ಧ ಅವಳಿಗಾಗಿ ಕಾದಿದ್ದು, ಅವಳಿಗೆ ಸಂತಸವನ್ನೂ ಹಾಗೆ ಕಾಯಿಸಿಬಿಟ್ಟೆನಲ್ಲ ಎಂಬ ಪಶ್ಚಾತ್ತಾಪವನ್ನೂ ತಂದಿತು…. ~ ಚೇತನಾ ತೀರ್ಥಹಳ್ಳಿ ಕೋಸಲ ರಾಜ್ಯದಲ್ಲಿ ಅಳವಿ ಎಬುದೊಂದು ಪುಟ್ಟ ಗ್ರಾಮ. ಆ ಗ್ರಾಮದಲ್ಲೊಬ್ಬ ನೇಕಾರ. ಆ ನೇಕಾರನಿಗೊಬ್ಬಳು ಸುಂದರಿಯಾದ ಮಗಳಿದ್ದಳು. ಆಕೆ ಸೌಂದರ್ಯದಷ್ಟೇ ಸುಶೀಲೆಯೂ ಆಗಿದ್ದಳು. ಒಮ್ಮೆ ಬುದ್ಧ ಅಳವಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದ. […]

ಅಧ್ಯಾತ್ಮ ಶಿಖರವೇರಿದ ಉಡುತಡಿಯ ಹುಡುಗಿ : ಅಕ್ಕ ಮಹಾದೇವಿ

ಮಹಾದೇವಿಗೆ ಗೊಂದಲ. ತನ್ನನ್ನು ಚೆನ್ನ ಮಲ್ಲಿಕಾರ್ಜುನನಿಗೆ ಮದುವೆ ಮಾಡಿಸುತ್ತೀನಿ ಅಂದಿದ್ದ ಅಪ್ಪ ಇದೇನು ಮಾಡುತ್ತಿದ್ದಾನೆ? ಅಮ್ಮನ ಸೆರಗು ತಿರುವುತ್ತಾ ಕೇಳುತ್ತಾಳೆ. ಅವಳು “ಅಯ್ಯೋ ಹುಚ್ಚಿ! ಕಲ್ಲು ದೇವರಿಗೆ ಕೊಟ್ಟು ಮದುವೆ ಮಾಡುವುದುಂಟೆ?” ಅಂದುಬಿಡುತ್ತಾಳೆ . ಹೌದೆ? ಚೆನ್ನಮಲ್ಲಿಕಾರ್ಜುನ ಕಲ್ಲೇ? ಇಷ್ಟು ಕಾಲ ತನ್ನ ಹೃದಯದೊಳಗೆ ಬಿಟ್ಟೂ ಬಿಡದಂತೆ ನೆಲೆಸಿ ನಲಿಯುತ್ತಿರುವ ಚೆನ್ನಯ್ಯ ಕಲ್ಲು ದೇವರೇ? ಮಹಾದೇವಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ ….    ~ ಚೇತನಾ ತೀರ್ಥಹಳ್ಳಿ (ಇಂದು ಅಕ್ಕ ಮಹಾದೇವಿ ಹುಟ್ಟಿದ ದಿನ) ಅಧ್ಯಾತ್ಮ ಖನಿ, ಸೂಕ್ಷ್ಮ […]

ವಚನಗಳ ನೇಕಾರ ಶರಣ ದಾಸಿಮಯ್ಯ

ಶರಣ ಪರಂಪರೆಯ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯು ಈ ಬಾರಿ ಮಾರ್ಚ್ 22ರಂದು ಬಂದಿದೆ. ಈ ಸಂದರ್ಭದಲ್ಲಿ ದಾಸಿಮಯ್ಯನ ಜೀವನ – ಸಾಧನೆ ಕುರಿತು ಒಂದು ಸ್ಥೂಲ ಚಿತ್ರಣ ಇಲ್ಲಿದೆ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ / ಸುಳಿದು ಸೂಸುವ ಗಾಳಿ ನಿಮ್ಮ ದಾನ ಎನ್ನುತ್ತ ಜಗದ ಪ್ರತಿಯೊಂದಕ್ಕೂ ಕಾರಣೀಭೂತವಾದ ದಿವ್ಯವೊಂದು ಅಸ್ತಿತ್ವದಲ್ಲಿದ ಎನ್ನುವ ಅರಿವನ್ನು ಸರಳವಾಗಿ ಸಾರಿದವನು ದಾಸಿಮಯ್ಯ. ದಾಸಿಮಯ್ಯನ ಈ ನುಡಿಗಳು ಆಡುಮಾತಿನವಲ್ಲ, ಅರಿವಿನಿಂದ ಬಂದಂಥವು. ಹಾಗೆಂದೇ ಮುಂದುವರಿದು ಆತ ಕೇಳುತ್ತಾನೆ, `ನಿಮ್ಮ ದಾನವನುಂಡು […]

ಅಲ್ಲಮನೆಂಬ ಬಯಲ ಬೆಳಕು ಮತ್ತು ತಮಂಧದ ಮಾಯೆ

ಅಲ್ಲಮನ ಅಂತರಂಗದ ನಿಗೂಢತೆಯನ್ನು ಕಂಡು ಕಂಗೆಟ್ಟ ಮಾಯೆ, ತನ್ನ ನಿಗೂಢತೆಗೆ ತಮಂಧ ಮೂಲವಾದರೆ, ಅಲ್ಲಮನ ನಿಗೂಢತೆಯ ಮೂಲ ಬಯಲ ಬೆಳಗಿನ ಮಹಾಪೂರವೆಂಬುದನ್ನು ಅರಿಯುತ್ತಾಳೆ. ಇನ್ನು ಇವನೆದುರು ತನ್ನ ಆಟ ನಡೆಯುವುದಿಲ್ಲ ಎಂದು ಮನಗಂಡು ಬಂದ ದಾರಿ ಹಿಡಿಯುತ್ತಾಳೆ. ~ ಗಾಯತ್ರಿ ಅಲ್ಲಮ ಬಯಲಿನಂಥ ಮಹಾಶರಣ. ಆತನಿಗೆ ಬೇಲಿಯೇ ಇರಲಿಲ್ಲ, ಎಲ್ಲೆಗಳೂ. ಅಲ್ಲಮ ಯಾವುದೇ ಆಚಾರಕ್ಕೆ, ಕಟ್ಟುಪಾಡಿಗೆ ಒಳಗಾದವನಲ್ಲ. ವೈಚಾರಿಕ ಆಧ್ಯಾತ್ಮಿಕತೆಯ ಶರಣಕೂಟವನ್ನೂ ವಿಮರ್ಶೆಗೊಳಪಡಿಸಿ, ಟೀಕಿಸಿ, ತಿದ್ದಿ  ಘನಗೊಳಿಸಿದವನು ಅಲ್ಲಮ. ಆದ್ದರಿಂದಲೇ ಆತನಿಗೆ `ಪ್ರಭು ದೇವರು’ ಎಂಬ ಗೌರವ. ಅಲ್ಲಮನು […]