ಅಕ್ಕರೆ ಹೃದಯದ ರಕ್ಕಸಿ ‘ಹಿಡಿಂಬೆ’

ಪಾಂಡವರ ಧರ್ಮಯುದ್ಧದಲ್ಲಿ ಮಗನೂ ಪಾಲ್ಗೊಂಡು ಕಾದಾಡಲೆಂದು ರಣಾರತಿ ಎತ್ತಿ ತಿಲಕವಿಟ್ಟು ಕಳುಹಿಸಿದ ಹಿಡಿಂಬೆಯ ಮನಸ್ಥಿತಿ ಎಲ್ಲಾ ಸೈನಿಕರ ತಾಯಿ, ಪತ್ನಿಯಂತೆ ಬಹುಶಃ ತ್ಯಾಗೋನ್ನತ್ಯದಿ ಮಡುಗಟ್ಟಿ ಹಿಮವಾಗಿಬಿಟ್ಟಿತ್ತೇನೋ. ಹಿಡಿಂಬೆಯ ಮಗ ಘಟೋತ್ಗಜ ಕುರುಕ್ಷೇತ್ರದಿಂದ ಜೀವಂತವಾಗಿ ಮತ್ತೆ ಬರಲೇ ಇಲ್ಲ. ಹಿಡಿಂಬೆಯ ಕಾಯುವಿಕೆಯೂ ಮುಗಿಯಲೇ ಇಲ್ಲ….  ~ ಸಿರಿ ಆಚಾರ್ಯ ಹಿಡಿಂಬೆ, ಅಸುರ ಕುಲದವಳಾದರೂ ಶ್ರೀಹರಿಯ ಅವತಾರವಾದ ಶ್ರೀ ವೇದವ್ಯಾಸರ ಪೌರೋಹಿತ್ಯದಲ್ಲಿ ಭೀಮನ ಕೈ ಹಿಡಿದ ಅದೃಷ್ಟವಂತೆ. ಭೀಮನ ಮೊದಲ ಪತ್ನಿ ಇವಳೇ. ಅತ್ಯಲ್ಪ ಕಾಲವಾದರೂ ಇದ್ದಷ್ಟು ದಿನ  ಅತ್ಯುತ್ಕಟ […]

ಬುದ್ಧಕಾರುಣ್ಯ ಸವಿದ ನೇಕಾರನ ಮಗಳು

ಗ್ರಾಮಸ್ಥರು ನೇಕಾರನ ಮಗಳ ಮೇಲೆ `ಅಧಿಕಪ್ರಸಂಗಿ’ ಎಂದು ಕೋಪಗೊಂಡರು. ಬಿಕ್ಖುಗಳಿಗೂ ಇದು ಆಶ್ಚರ್ಯ ತಂದಿತು. ನೇಕಾರನ ಮಗಳು ಎಷ್ಟೇ ಲಗುಬಗೆಯಿಂದ ಧಾವಿಸಿ ಬಂದರೂ ತಡವಾಗಿಹೋಗಿತ್ತು. ಆದರೆ ಬುದ್ಧ ಅವಳಿಗಾಗಿ ಕಾದಿದ್ದು, ಅವಳಿಗೆ ಸಂತಸವನ್ನೂ ಹಾಗೆ ಕಾಯಿಸಿಬಿಟ್ಟೆನಲ್ಲ ಎಂಬ ಪಶ್ಚಾತ್ತಾಪವನ್ನೂ ತಂದಿತು…. ~ ಚೇತನಾ ತೀರ್ಥಹಳ್ಳಿ ಕೋಸಲ ರಾಜ್ಯದಲ್ಲಿ ಅಳವಿ ಎಬುದೊಂದು ಪುಟ್ಟ ಗ್ರಾಮ. ಆ ಗ್ರಾಮದಲ್ಲೊಬ್ಬ ನೇಕಾರ. ಆ ನೇಕಾರನಿಗೊಬ್ಬಳು ಸುಂದರಿಯಾದ ಮಗಳಿದ್ದಳು. ಆಕೆ ಸೌಂದರ್ಯದಷ್ಟೇ ಸುಶೀಲೆಯೂ ಆಗಿದ್ದಳು. ಒಮ್ಮೆ ಬುದ್ಧ ಅಳವಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದ. […]

ಅಧ್ಯಾತ್ಮ ಶಿಖರವೇರಿದ ಉಡುತಡಿಯ ಹುಡುಗಿ : ಅಕ್ಕ ಮಹಾದೇವಿ

ಮಹಾದೇವಿಗೆ ಗೊಂದಲ. ತನ್ನನ್ನು ಚೆನ್ನ ಮಲ್ಲಿಕಾರ್ಜುನನಿಗೆ ಮದುವೆ ಮಾಡಿಸುತ್ತೀನಿ ಅಂದಿದ್ದ ಅಪ್ಪ ಇದೇನು ಮಾಡುತ್ತಿದ್ದಾನೆ? ಅಮ್ಮನ ಸೆರಗು ತಿರುವುತ್ತಾ ಕೇಳುತ್ತಾಳೆ. ಅವಳು “ಅಯ್ಯೋ ಹುಚ್ಚಿ! ಕಲ್ಲು ದೇವರಿಗೆ ಕೊಟ್ಟು ಮದುವೆ ಮಾಡುವುದುಂಟೆ?” ಅಂದುಬಿಡುತ್ತಾಳೆ . ಹೌದೆ? ಚೆನ್ನಮಲ್ಲಿಕಾರ್ಜುನ ಕಲ್ಲೇ? ಇಷ್ಟು ಕಾಲ ತನ್ನ ಹೃದಯದೊಳಗೆ ಬಿಟ್ಟೂ ಬಿಡದಂತೆ ನೆಲೆಸಿ ನಲಿಯುತ್ತಿರುವ ಚೆನ್ನಯ್ಯ ಕಲ್ಲು ದೇವರೇ? ಮಹಾದೇವಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ ….    ~ ಚೇತನಾ ತೀರ್ಥಹಳ್ಳಿ (ಇಂದು ಅಕ್ಕ ಮಹಾದೇವಿ ಹುಟ್ಟಿದ ದಿನ) ಅಧ್ಯಾತ್ಮ ಖನಿ, ಸೂಕ್ಷ್ಮ […]

ವಚನಗಳ ನೇಕಾರ ಶರಣ ದಾಸಿಮಯ್ಯ

ಶರಣ ಪರಂಪರೆಯ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯು ಈ ಬಾರಿ ಮಾರ್ಚ್ 22ರಂದು ಬಂದಿದೆ. ಈ ಸಂದರ್ಭದಲ್ಲಿ ದಾಸಿಮಯ್ಯನ ಜೀವನ – ಸಾಧನೆ ಕುರಿತು ಒಂದು ಸ್ಥೂಲ ಚಿತ್ರಣ ಇಲ್ಲಿದೆ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ / ಸುಳಿದು ಸೂಸುವ ಗಾಳಿ ನಿಮ್ಮ ದಾನ ಎನ್ನುತ್ತ ಜಗದ ಪ್ರತಿಯೊಂದಕ್ಕೂ ಕಾರಣೀಭೂತವಾದ ದಿವ್ಯವೊಂದು ಅಸ್ತಿತ್ವದಲ್ಲಿದ ಎನ್ನುವ ಅರಿವನ್ನು ಸರಳವಾಗಿ ಸಾರಿದವನು ದಾಸಿಮಯ್ಯ. ದಾಸಿಮಯ್ಯನ ಈ ನುಡಿಗಳು ಆಡುಮಾತಿನವಲ್ಲ, ಅರಿವಿನಿಂದ ಬಂದಂಥವು. ಹಾಗೆಂದೇ ಮುಂದುವರಿದು ಆತ ಕೇಳುತ್ತಾನೆ, `ನಿಮ್ಮ ದಾನವನುಂಡು […]

ಅಲ್ಲಮನೆಂಬ ಬಯಲ ಬೆಳಕು ಮತ್ತು ತಮಂಧದ ಮಾಯೆ

ಅಲ್ಲಮನ ಅಂತರಂಗದ ನಿಗೂಢತೆಯನ್ನು ಕಂಡು ಕಂಗೆಟ್ಟ ಮಾಯೆ, ತನ್ನ ನಿಗೂಢತೆಗೆ ತಮಂಧ ಮೂಲವಾದರೆ, ಅಲ್ಲಮನ ನಿಗೂಢತೆಯ ಮೂಲ ಬಯಲ ಬೆಳಗಿನ ಮಹಾಪೂರವೆಂಬುದನ್ನು ಅರಿಯುತ್ತಾಳೆ. ಇನ್ನು ಇವನೆದುರು ತನ್ನ ಆಟ ನಡೆಯುವುದಿಲ್ಲ ಎಂದು ಮನಗಂಡು ಬಂದ ದಾರಿ ಹಿಡಿಯುತ್ತಾಳೆ. ~ ಗಾಯತ್ರಿ ಅಲ್ಲಮ ಬಯಲಿನಂಥ ಮಹಾಶರಣ. ಆತನಿಗೆ ಬೇಲಿಯೇ ಇರಲಿಲ್ಲ, ಎಲ್ಲೆಗಳೂ. ಅಲ್ಲಮ ಯಾವುದೇ ಆಚಾರಕ್ಕೆ, ಕಟ್ಟುಪಾಡಿಗೆ ಒಳಗಾದವನಲ್ಲ. ವೈಚಾರಿಕ ಆಧ್ಯಾತ್ಮಿಕತೆಯ ಶರಣಕೂಟವನ್ನೂ ವಿಮರ್ಶೆಗೊಳಪಡಿಸಿ, ಟೀಕಿಸಿ, ತಿದ್ದಿ  ಘನಗೊಳಿಸಿದವನು ಅಲ್ಲಮ. ಆದ್ದರಿಂದಲೇ ಆತನಿಗೆ `ಪ್ರಭು ದೇವರು’ ಎಂಬ ಗೌರವ. ಅಲ್ಲಮನು […]

ಅಪಾಲೆಯ ಯಶೋಗಾಥೆ

ಸಾಧಕರಿಗೆ ಸಾವಿರ ಅಡ್ಡಿ ಅನ್ನುವಂತೆ ಕೇಡಿನ ಮಳೆ ಸುರಿಯಿತು. ಸಮೀಪದ ನದಿ ತುಂಬಿ ಹರಿದು ನೆರೆ ಬಿದ್ದಿತು. ಧ್ಯಾನಸ್ಥಳಾಗಿ ಕುಳಿತಿದ್ದ ಅಪಾಲಾಳನ್ನು ಕೊಚ್ಚಿಕೊಂಡು ಹರಿಯತೊಡಗಿತು. ಎಚ್ಚರಗೊಂಡ ಅಪಾಲೆ ಮುಂದಿನ ನಡೆಯನ್ನು ಯೋಚಿಸತೊಡಗಿದಳು. ~ ಚೇತನಾ ತೀರ್ಥಹಳ್ಳಿ ಕನ್ಯಾವಾರವಾಯತೀ ಸೋಮಮಪಿ ಸೃತಾವಿದತ್ | ಅಸ್ತಮ್ ಭರನ್ತ್ಯ ಬ್ರವೀದಿನ್ದ್ರಾಯ ಸುನವೈ ತ್ವಾ ಶಕ್ರಾಯ ಸುನವೈ ತ್ವಾ || 8:91:1 || ಇಲ್ಲಿ ಸೋಮರಸವನ್ನು ಅರ್ಪಿಸಿ ಇಂದ್ರನನ್ನು ಒಲಿಸಿಕೊಂಡು ತನಗೆ ಬೇಕಾದ ವರಗಳನ್ನು ಪಡೆದ ಮಹಾ ಸಾಧಕಿ, ಋಷಿಕೆ ಅಪಾಲೆಯ ಬಗ್ಗೆ […]

ಮಲ್ಲಿಕಾ : ಹೂ ಹುಡುಗಿಯ ಸೌಭಾಗ್ಯದ ಕಥೆ

ಮಲ್ಲಿಕಾಳನ್ನು ಹರಸುವಾಗ ಬುದ್ಧನ ಮುಖದಲ್ಲಿ ನಗೆಯ ಸುಳಿಯೊಂದು ಹಾದು ಹೋದುದು ಆತನ ಪ್ರಮುಖ ಶಿಷ್ಯನೊಬ್ಬ ಗಮನಿಸಿದ. ಮಧ್ಯಾಹ್ನದ ವಿರಾಮದಲ್ಲಿ ಬುದ್ಧನನ್ನು ಕುರಿತು, `ಭಗವಾನ್, ಆ ಹೂ ಮಾರುವ ಹುಡುಗಿಯನ್ನು ಹರಸುವಾಗ ನೀವು ನಕ್ಕಿದ್ದೇಕೆ?’ ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಬುದ್ಧ, `ಹೂ ಮಾರುವ ಹುಡುಗಿ ಎಂದು ಯಾರನ್ನು ಕುರಿತು ಹೇಳುತ್ತಿರುವೆಯೋ ಅವಳು ಇಂದು – ನಾಳೆಯೊಳಗೆ ಕೋಸಲದ ಪಟ್ಟದರಸಿಯಾಗುವಳು’ ಎಂದು ನುಡಿದ… ~ ಚೇತನಾ ತೀರ್ಥಹಳ್ಳಿ ಶ್ರಾವಸ್ತಿಯ ಪ್ರಮುಖ ಬೀದಿಯ ಇಕ್ಕೆಲಗಳು ಸದಾ ಕಾಲ ವಿವಿಧ ಚಿಕ್ಕ […]

ಪ್ರೇಮವೇ ಭಗವಂತನೆಂದ ಸೂಫಿ : ರಾಬಿಯಾ

ರಾಬಿಯಾ ಯಾವಾಗಲೂ ಒಂದು ಕೈಲಿ ಕೊಳ್ಳಿ, ಒಂದು ಕೈಲಿ ಹೂಜಿ ಹೊತ್ತುಕೊಂಡು ಅಲೆಯುತ್ತಿದ್ದಳು. ಯಾಕೆ ಅಂತ ಕೇಳಿದರೆ, “ನರಕದ ಭಯದಿಂದ ದೇವರನ್ನ ಪ್ರೇಮಿಸೋದಾದರೆ ಅಂಥಾ ನರಕದ ಬೆಂಕಿ ನಂದಿಸಲಿಕ್ಕೆ; ಮತ್ತು ಸ್ವರ್ಗದ ಆಸೆಯಿಂದ ದೇವರನ್ನ ಪ್ರೇಮಿಸೋದಾದರೆ ಅಂಥಾ ಸ್ವರ್ಗವನ್ನ ಸುಟ್ಟುಹಾಕಲಿಕ್ಕೆ ಅನ್ನುತ್ತಿದ್ದಳು! ~ ಚೇತನಾ  ರಾಬಿಯಾ ಅಲ್ ಬಸ್ರಿ, ಇರಾಕ್ ದೇಶದ ಬಸ್ರ್ ಪಟ್ಟಣದಲ್ಲಿ ಹುಟ್ಟಿ ಬೆಳೆದ ಹೆಣ್ಣುಮಗಳು. ಚಿಕ್ಕವಳಿರುವಾಗಲೇ ಅವಳಪ್ಪ ಅಮ್ಮ ಸತ್ತುಹೋಗ್ತಾರೆ. ರಾಬಿಯಾ ಶ್ರೀಮಂತನ ಮನೆಯೊಂದರಲ್ಲಿ ಗುಲಾಮಳಾಗಿ ಬೆಳೆದುಕೊಳ್ತಾಳೆ. ದೇಹಕ್ಕೆ ಗುಲಾಮಗಿರಿ ಕಟ್ಟಬಹುದು, ಮನಸಿಗೆ […]

ಋಷಿಕೆಯರು ರಚಿಸಿದ ಮಂತ್ರಗೀತೆಗಳು

ಈ ಋಷಿಕೆಯರಲ್ಲಿ ಬಹುತೇಕರು ಸಾಂಸಾರಿಕ ಬಯಕೆಗಳನ್ನು ಉನ್ನತ ವೇದಿಕೆಯಲ್ಲಿ ಅಭಿವ್ಯಕ್ತಗೊಳಿಸುವ ಮೂಲಕ ಲೌಕಿಕ – ಅಧ್ಯಾತ್ಮಗಳ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಋಷಿಕೆಯರ ಹಾಡುಗಳು ಸಾರ್ವಕಾಲಿಕ ಸ್ತ್ರೀಯರ ಹಾಡಾಗಿಯೂ ಕಂಡುಬರುತ್ತವೆ. ಋಗ್ವೇದದ ಮಂತ್ರಗಳನ್ನು ಸಾಕ್ಷಾತ್ಕಾರಿಸಿಕೊಂಡ ಮಂತ್ರ ದ್ರಷ್ಟಾರರಲ್ಲಿ ಮೂವತ್ತಕ್ಕೂ ಹೆಚ್ಚು ಋಷಿಕೆಯರು ಸೇರಿದ್ದಾರೆ. ರೋಮಷಾ, ಲೋಪಾಮುದ್ರಾ, ಅಪಾಲಾ, ಕದ್ರು, ವಿಶ್ವಾವರಾ, ಘೋಷಾ, ಜುಹು, ವಾಗಂಭೃಣಿ, ಪೌಲೊಮಿ, ಜರಿತಾ, ಶ್ರದ್ಧಾ ಕಾಮಾಯಾನಿ, ಊರ್ವಶೀ, ಶಾರಂಗ, ಯಮಿ, ಇಂದ್ರಾಣಿ, ಸಾವಿತ್ರಿ ಮತ್ತು ದೇವಯಾನಿ – ಇವರು ಋಗ್ವೇದದ ಮುಖ್ಯ ಋಷಿಕೆಯರಾದರೆ; […]

ಭಾವೈಕ್ಯತೆ ಬೆಸೆದ ಸಹಜ ಸಂತ : ಶಿಶುನಾಳ ಶರೀಫ

ಇಂದು ತತ್ತ್ವಪದಕಾರ, ಭಾವೈಕ್ಯದ ಹರಿಕಾರ ಸಂತ ಶಿಶುನಾಳ ಶರೀಫರು ಹುಟ್ಟಿದ ದಿನ.  ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಲ್ಲೊಂದು ಹಳ್ಳಿ. ಹೆಸರು ಶಿಶುವಿನಹಾಳ (ಶಿಶುನಾಳ). ಇಮಾಮ್ ಸಾಹೇಬ ಮತ್ತು ಹಜ್ಜೂಮಾ ದಂಪತಿಗೊಂದು ಮುದ್ದಾದ ಮಗು, ಹೆಸರು ಶರೀಫ. ಈ ಶರೀಫ ನಿಂತಲ್ಲಿ ನಿಲ್ಲುವವನಲ್ಲ. ಕೂತರ, ಏಳುವವನಲ್ಲ. ಎಷ್ಟು ಚಟುವಟಿಕೆಯೋ ಅಷ್ಟೇ ಏಕಾಗ್ರತೆ. ಬಾಲ್ಯದಲ್ಲಿ ಎಲ್ಲರಂತೆ ಪ್ರಾಥಮಿಕ ಶಿಕ್ಷಣ ಪಡೆದ ಶರೀಫ ಜಾಣನಿದ್ದರೂ ನಾಲ್ಕು ಗೋಡೆಗಳ ನಡುವೆ ಕೂರಲಾಗದು. ಶಿಕ್ಷಕರು ಕಲಿಸುವ ಲೌಕಿಕದ ಲೆಕ್ಕದಲ್ಲಿ ಅವನಿಗೆ ಸ್ವಲ್ಪವೂ ರುಚಿಯಿಲ್ಲ. […]