ರಾ-ಉಮ್ ಆಶ್ರಮದಲ್ಲಿ ಒಂದು ಕಠಿಣ ನಿಯಮವಿತ್ತು. ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಒಮ್ಮೆ ಬುರುಡೆಗೆ ಪಾನೀಯವನ್ನು ತುಂಬಿಸಿದರೆ, ಅದನ್ನು ಸಂಪೂರ್ಣವಾಗಿ ಮುಗಿಸಿದ ನಂತರವಷ್ಟೇ ಅದನ್ನು ಗೂಡಿನಲ್ಲಿ ಇಡಬಹುದಿತ್ತು. ಅಲ್ಲಿಯ ತನಕವೂ ಬುರುಡೆಯನ್ನು ಕಾಪಾಡುವುದು ಕಡ್ಡಾಯ. ಇದನ್ನು ಎಲ್ಲರೂ ಸಹಜವಾಗಿಯೇ ಮಾಡುತ್ತಿದ್ದುದರಿಂದ ಈ ನಿಯಮ ಯಾಕಿದೆ ಎಂಬ ಪ್ರಶ್ನೆಯನ್ನು ಯಾರೂ ಕೇಳಿರಲಿಲ್ಲ. ಉತ್ತರದ ಹಿಮ ಪ್ರದೇಶದ ಊರೊಂದರಿಂದ ಬಂದು ಆಶ್ರಮ ಸೇರಿದ್ದ ಶಿಷ್ಯನಿಗೆ ಈ ನಿಯಮವೇಕಿದೆ ಎಂದು ಅರ್ಥವಾಗಿರಲಿಲ್ಲ. ಉಳಿದವರು ಮಾಡುವುದನ್ನು ನೋಡಿ ತಾನೂ ಅದನ್ನು ಅನುಸರಿಸಿದ. ಆದರೆ […]
ಜೀವನದಲ್ಲಿ ಅತಿ ಮುಖ್ಯವಾದ ದಿನಗಳು ಯಾವುವು?
~ ಯಾದಿರಾ ರಾ-ಉಮ್ ಎದುರು ಪ್ರಶ್ನೆಗಳನ್ನಿಡುವುದೆಂದರೆ ಶಿಷ್ಯರಿಗೆ ಬಹಳ ಇಷ್ಟ. ಗಂಭೀರ ಜಿಜ್ಞಾಸೆಯ ಲೇಪ ಹಚ್ಚಿಕೊಂಡು ಬರುವ ಪ್ರಶ್ನೆಗಳ ಮೂರ್ಖ ಆಯಾಮವನ್ನು ಅನಾವರಣಗೊಳಿಸುವ ಶಕ್ತಿ ರಾ-ಉಮ್ಗೆ ಇದ್ದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಯೇ ಮೂರ್ಖ ಪ್ರಶ್ನೆ ಎಂದು ಎಲ್ಲರೂ ಭಾವಿಸಿದ್ದ ಪ್ರಶ್ನೆಯಲ್ಲಿರುವ ಗಂಭೀರ ಜಿಜ್ಞಾಸೆಯನ್ನು ಗುರುತಿಸಿ ಉತ್ತರಿಸುವ ಸೂಕ್ಷ್ಮ ಒಳನೋಟವೂ ಆಕೆಗಿತ್ತು. ಸಂಜೆಯ ಹೊತ್ತಿನ ಪ್ರಶ್ನೋತ್ತರದಲ್ಲಿ ಹೊಸತಾಗಿ ಆಶ್ರಮ ಸೇರಿದ್ದ ವಿದ್ಯಾರ್ಥಿ ಒಂದು ಪ್ರಶ್ನೆ ಎತ್ತಿದ. ‘ಮನುಷ್ಯನಿಗೆ ಜೀವನದಲ್ಲಿ ಅತಿ ಮುಖ್ಯವಾದ ದಿನಗಳು ಯಾವುವು?’ ರಾ-ಉಮ್ ಪಾನೀಯದ […]
ವಾ-ಐನ್-ಸಾಇಲ್’ನ ಕುತೂಹಲ ಮತ್ತು ಗುರುವಿನಂಥ ವಿದ್ಯಾರ್ಥಿಯ ವಿನಯ
ರಾ-ಉಮ್ ಆಶ್ರಮಕ್ಕೆ ಅನೇಕ ಹಳೆಯ ವಿದ್ಯಾರ್ಥಿಗಳು ಮತ್ತೆ ಮತ್ತೆ ಬರುತ್ತಿದ್ದರು. ಇವರಲ್ಲಿ ಕೆಲವರು ಆಗಲೇ ಗುರುಗಳಾಗಿ ಹೆಸರು ಮಾಡಿದ್ದರು. ಆದರೂ ಅವರು ಆಗೀಗ ಮತ್ತೆ ಆಶ್ರಮಕ್ಕೆ ಬಂದು ಶಿಷ್ಯರಾಗಿ ಕೆಲಕಾಲ ಕಳೆಯುತ್ತಿದ್ದರು. ಹೀಗೆ ಬರುತ್ತಿದ್ದವರಲ್ಲಿ ಬಹುತೇಕ ರಾ-ಉಮ್ಳಷ್ಟೇ ಪ್ರಾಯವಿದ್ದ ಒಬ್ಬರಿದ್ದರು. ರಾ-ಉಮ್ ಕೂಡಾ ಇವರನ್ನು ಬಹಳ ಗೌರವದಿಂದ ಕಾಣುತ್ತಿದ್ದಳು. ಅನೇಕ ಹಳೆಯ ವಿದ್ಯಾರ್ಥಿಗಳೂ ಈ ವ್ಯಕ್ತಿಯನ್ನು ಗುರುವೆಂದೇ ಪರಿಗಣಿಸುತ್ತಿದ್ದರು. ಅವರಿಗೆ ಪೂರ್ವದ ಯಾವುದೋ ದ್ವೀಪದಲ್ಲಿ ಆಶ್ರಮವಿತ್ತು. ವಾ-ಐನ್-ಸಾಇಲ್ಗೆ ಈ ವ್ಯಕ್ತಿಯ ಬಗ್ಗೆ ಬಹಳ ಕುತೂಹಲ. ಒಂದು ದಿನ ಸಂಜೆಯ […]
ಪಾನೀಯದ ಬುರುಡೆ, ದಾರಿಹೋಕ ಪಂಡಿತ ಮತ್ತು ರಾ-ಉಮ್
~ ಯಾದಿರಾ ಮರುಭೂಮಿಯ ನಡುವೆ ಇದ್ದ ಆಶ್ರಮಕ್ಕೆ ಬೇಲಿಯೇ ಇರಲಿಲ್ಲ. ಹಾಗಾಗಿ ದ್ವಾರದ ಪ್ರಶ್ನೆಯೇ ಇಲ್ಲ. ಯಾರು ಯಾವಾಗ ಬೇಕಾದರೂ ಒಳ ಬರಬಹುದಿತ್ತು. ಆಲ್ಲಿರುವ ಸೌಲಭ್ಯಗಳನ್ನು ಬಳಸಬಹುದಿತ್ತು. ಕ್ಯಾರವಾನುಗಳಲ್ಲಿ ಸಾಗುತ್ತಿದ್ದವರ ಮಟ್ಟಿಗೆ ಇದು ಅರವಟ್ಟಿಗೆಯಾಗುತ್ತಿತ್ತು. ಒಂಟೆಗಳಿಗೆ ಮೇವು ಸಿಗುವ ತಾಣವಾಗುತ್ತಿತ್ತು. ರಾತ್ರಿಯಾದರೆ ಉಳಿಯಲು ಧರ್ಮಛತ್ರವಾಗುತ್ತಿತ್ತು. ಒಂದು ದಿನ ದೊಡ್ಡದೊಂದು ಗ್ರಂಥ ಭಂಡಾರದೊಂದಿಗೆ ಸಾಗುತ್ತಿದ್ದ ಮಹಾ ಪಂಡಿತರೊಬ್ಬರು ಆಶ್ರಮ ಪ್ರವೇಶಿಸಿದರು. ಧರ್ಮಛತ್ರವೆಂದುಕೊಂಡು ಒಳಬಂದ ಅವರಿಗೆ ಅದೊಂದು ಆಶ್ರಮವೆಂದು ತಿಳಿಯಿತು. ಪಂಡಿತರು ಆ ರಾತ್ರಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿಯೇ ಬಿಡಬೇಕೆಂದು […]
ನೆಮ್ಮದಿಯ ಕ್ಷೇತ್ರವನ್ನು ತಲುಪುವುದು ಹೇಗೆ?
~ ಯಾದಿರಾ ರಾ-ಉಮ್ ಆಶ್ರಮದಲ್ಲಿ ಬೋಧಕರು, ವಿದ್ಯಾರ್ಥಿಗಳು, ಅತಿಥಿಗಳು ಮತ್ತು ಸಂದರ್ಶಕರಿಗೆಲ್ಲಾ ಅನ್ವಯಿಸುವ ಒಂದು ನಿಯಮವಿತ್ತು. ಮಧ್ಯಾಹ್ನದ ಊಟವಾದ ಮೇಲೆ ಸಣ್ಣ ನಿದ್ರೆ ತೆಗೆಯುವುದು. ಈ ನಿಯಮವನ್ನು ಆಶ್ರಮವಾಸಿಗಳೆಲ್ಲರೂ ಪಾಲಿಸಲೇಬೇಕಾಗಿತ್ತು. ನಿದ್ರೆ ಬಾರದವರು ಕನಿಷ್ಠ ಉಳಿದವರ ನಿದ್ರೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿತ್ತು. ಒಂದು ಮಧ್ಯಾಹ್ನ ಎಲ್ಲರೂ ಊಟ ಮುಗಿಸಿದ್ದರು. ನಿದ್ರೆಗೆ ತೆರಳುವ ಹೊತ್ತಿಗೆ ನೆರೆಯ ಹಳ್ಳಿಯ ಬುದ್ಧಿವಂತನೊಬ್ಬ ತನ್ನ ಸಮಸ್ಯೆಯ ಪರಿಹಾರಕ್ಕಾಗಿ ಬಂದ. ಆಶ್ರಮಕ್ಕೆ ಬಂದ ಅತಿಥಿಯನ್ನು ಗೌರವದಿಂದಲೇ ವಿದ್ಯಾರ್ಥಿಗಳು ಬರ ಮಾಡಿಕೊಂಡು ಏನು ವಿಷಯ ಎಂದು ಕೇಳಿದರು. […]
ಖಾಲಿಯಾಗಿರುವುದನ್ನು ತೆರೆಯುವುದು!
ರಾ-ಉಮ್ಳ ಆಶ್ರಮಕ್ಕೆ ಬರುತ್ತಿದ್ದವರು ಕೇವಲ ವಿದ್ಯಾರ್ಜನೆಯ ಉದ್ದೇಶವುಳ್ಳವರಷ್ಟೇ ಆಗಿರಲಿಲ್ಲ. ಭಿನ್ನ ಆಶ್ರಮಗಳ ಗುರುಗಳೂ ಬರುತ್ತಿದ್ದರು. ತಮ್ಮ ವಿಚಾರಗಳನ್ನು ರಾ-ಉಮ್ ಜೊತೆಗೆ ಚರ್ಚೆಯ ನಿಕಷಕ್ಕೆ ಒಡ್ಡುತ್ತಿದ್ದರು. ಇಂಥ ಚರ್ಚೆಗಳು ರಾ-ಉಮ್ ವಿದ್ಯಾರ್ಥಿಗಳ ಮಟ್ಟಿಗೆ ಬಹುದೊಡ್ಡ ಪಾಠಗಳಾಗಿರುತ್ತಿದ್ದವು. ಇಂಥದ್ದೊಂದು ಚರ್ಚೆಗೆ ಪಶ್ಚಿಮದ ಗುರುಗಳೊಬ್ಬರು ಬಂದಿದ್ದರು. ಜ್ಞಾನದ ವೈಧಾನಿಕತೆಯ ಬಗ್ಗೆ ಆಳವಾದ ಅರಿವಿದ್ದ ಅವರು ಸಂಜೆಯ ಪಾನೀಯ ಸೇವನೆಯ ಹೊತ್ತಿನಲ್ಲಿ ರಾ-ಉಮ್ ಎದುರು ಒಂದು ಪ್ರಶ್ನೆಯನ್ನಿಟ್ಟರು. ‘ಬೋಧನೆ ಎಂದರೇನು?’ ರಾ-ಉಮ್ ಈ ಪ್ರಶ್ನೆಗೆ ಉತ್ತರಿಸಲೇ ಇಲ್ಲ. ಆ ಪಶ್ಚಿಮದ ಗುರು ಹೇಳಿದರು […]
ರಾ-ಉಮ್ ಕೇಳಿದ ಪ್ರಶ್ನೆ: “ನೀನು ಏನೇನು ಮರೆತಿರುವೆ?”
ರಾ-ಉಮ್ಳ ಆಶ್ರಮಕ್ಕೆ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬರುತ್ತಿದ್ದರು. ವಿವಿಧ ಆಶ್ರಮಗಳಲ್ಲಿ ಹಲವು ವಿದ್ಯೆಗಳನ್ನು ಕಲಿತಿರುತ್ತಿದ್ದ ಇವರು ಆತ್ಯಂತಿಕವಾದ ಅರಿವು ದೊರೆಯಬೇಕೆಂದರೆ ರಾ-ಉಮ್ ಬಳಿಗೆ ಹೋಗಿ ಎಂಬ ತಮ್ಮ ಗುರುಗಳ ಉಪದೇಶ ಕೇಳಿ ಮರುಭೂಮಿಯ ಮಹಾಯೋಗಿನಿಯ ಆಶ್ರಮ ತಲುಪುತ್ತಿದ್ದರು. ಒಂದು ದಿನ ಮಧ್ಯಾಹ್ನ ಉನ್ನತ ಶಿಕ್ಷಣಾರ್ಥಿಯೊಬ್ಬ ಆಶ್ರಮ ತಲುಪಿದ. ಕಣ್ಣೆದುರಿಗೆ ಕಂಡ ವಿದ್ಯಾರ್ಥಿಗಳನ್ನೆಲ್ಲಾ ರಾ-ಉಮ್ ಎಲ್ಲಿರುತ್ತಾಳೆಂದು ಕೇಳಿದ. ಸಂಜೆಯವರೆಗೆ ಕಾಯಬೇಕು ಎಂದ ಅವರೆಲ್ಲಾ ಮಧ್ಯಾಹ್ನ ಊಟ ಮಾಡುವುದು ಆಶ್ರಮದ ನಿಯಮಗಳಲ್ಲೊಂದು ಎಂದು ತಿಳಿಸಿದರು. ಊಟ ಮಾಡಿದ ಈತನಿಗೆ […]
ಮಾನುಷಿ ಅಧ್ಯಾತ್ಮವನ್ನು ಅರಿತಮೇಲೆ ಏನಾಗುತ್ತಾಳೆ?
ರಾ-ಉಮ್ ಕಲಿಸುವ ವಿಧಾನವೇ ವಿಚಿತ್ರವಾಗಿತ್ತು. ಕೆಲ ದಿನ ಕೇವಲ ಒಂದು ಪ್ರಶ್ನೆಯಷ್ಟೇ ಅವಳ ಪಾಠವಾಗಿರುತ್ತಿತ್ತು. ಶಿಷ್ಯರ ತಮ್ಮ ನಿತ್ಯದ ಕೆಲಸಗಳ ಜೊತೆಗೆ ಈ ಪ್ರಶ್ನೆಯ ಉತ್ತರವನ್ನು ಹುಡುಕಬೇಕಾಗಿತ್ತು. ಶಿಷ್ಯರು ಕೆಲವೊಮ್ಮೆ ಹುಡುಕುವ ಪ್ರಕ್ರಿಯೆಯಲ್ಲಿ ಕಲಿಯುತ್ತಿದ್ದರು. ಕೆಲವೊಮ್ಮೆ ಉತ್ತರ ಕಂಡುಕೊಂಡ ಮೇಲೆ ಅವರ ಕಲಿಕೆ ಪೂರ್ಣಗೊಳ್ಳುತ್ತಿತ್ತು. ವಾ-ಐನ್-ಸಾಇಲ್ ಆಶ್ರಮದಲ್ಲಿದ್ದಾಗ ನಡೆದ ಘಟನೆ ಇದು. ನಸುಕಿನ ಗಂಟೆ ಬಾರಿಸಿತು ಶಿಷ್ಯರೆಲ್ಲಾ ಬಂದು ನಿಂತರು. ಹಿಂದಿನ ರಾತ್ರಿಯ ಪಾನೀಯ ಸಾಧನೆಯಿಂದಲೋ ಅಥವಾ ಮತ್ಯಾವ ಕಾರಣದಿಂದಲೋ ರಾ-ಉಮ್ ಏಳುವಾಗ ತಡವಾಗಿತ್ತು. ಬೆಳಗಿನ ಉಪಾಹಾರವೂ […]
ವಾ-ಐನ್-ಸಾಇಲ್ ಏನಾಗಲು ಬಯಸಿದ ಗೊತ್ತೆ?
ರಾ-ಉಮ್ಳ ಆಶ್ರಮದಲ್ಲಿ ದಿನದ ಎಲ್ಲಾ ಹೊತ್ತೂ ಕಲಿಕೆಯ ಕ್ಷಣಗಳೇ. ಆದರೆ ಶಿಷ್ಯರ ಮಟ್ಟಿಗೆ ಸಂಜೆಗಳು ಹೆಚ್ಚು ಮುಖ್ಯವಾಗಿದ್ದವು. ಈ ಸಂಜೆಗಳಲ್ಲಿ ರಾ-ಉಮ್ ತನ್ನ ಶಿಷ್ಯರನ್ನು ಪರೀಕ್ಷಿಸುತ್ತಿದ್ದಳು. ಇಂಥದ್ದೊಂದು ಸಂಜೆಯಲ್ಲಿ ರಾ-ಉಮ್ ಶಿಷ್ಯರನ್ನುದ್ದೇಶಿಸಿ ಕೇಳಿದಳು ‘ನೀವು ಏನಾಗಬೇಕೆಂದು ಬಯಸುತ್ತೀರಿ?’ ಉತ್ತರಗಳ ಸುರಿಮಳೆ ಆರಂಭವಾಯಿತು. ಒಬ್ಬ ಅಂದ “ನಾನು ಗುರುವಾಗುತ್ತೇನೆ’. ಮತ್ತೊಬ್ಬ ಹೇಳಿದ ‘ಸಂತನಾಗುತ್ತೇನೆ’. ಮತ್ತೊಬ್ಬ ಉಸುರಿದ ‘ಏನೂ ಆಗುವುದಿಲ್ಲ.’ ರಾ-ಉಮ್ ಪ್ರತಿಕ್ರಿಯಿಸಲಿಲ್ಲ. ಶಿಷ್ಯರು ಗೊಂದಲದಲ್ಲಿ ಬಿದ್ದರು. ಆ ಹೊತ್ತಿಗೆ ಹೊರಗೆಲ್ಲೋ ಅಲೆಯುತ್ತಿದ್ದ ವಾ-ಐನ್ ಸಾಇಲ್ ಒಳಬಂದ. ಸೆಖೆಯಲ್ಲಿ ಸಂಪೂರ್ಣ […]
ಸಾಧನೆಯ ದಾರಿ ಕಂಡುಕೊಂಡ ವಾ-ಐನ್-ಸಾಇಲ್
ಮೂರ್ಖನಾದ ವಾ-ಐನ್-ಸಾಇಲ್ ವಿದ್ಯಾರ್ಥಿಯಾಗಿ ರಾ-ಉಮ್ ಆಶ್ರಮ ಸೇರಿ ಒಂದೆರಡು ವಾರವಾಗಿತ್ತಷ್ಟೇ. ಶಿಷ್ಯನನ್ನು ಕರೆದ ರಾ-ಉಮ್ ನೀನೀಗ ಸಾಧನೆಯನ್ನು ಆರಂಭಿಸಬೇಕು ಎಂದಳು. ವಾ-ಐನ್ ಏನು ಮಾಡಲಿ ಎಂಬ ಪ್ರಶ್ನೆಯೊಂದಿಗೆ ನಿಂತ. “ಸ್ಮಶಾನಕ್ಕೆ ಹೋಗಿ ಸಮಾಧಿಯೊಳಗಿರುವವರನ್ನು ತೀವ್ರವಾಗಿ ಖಂಡಿಸು” ಎಂದು ರಾ-ಉಮ್ ಆದೇಶಿಸಿದಳು. ವಾ-ಐನ್ ಅದನ್ನು ಅಕ್ಷರಶಃ ಪಾಲಿಸಿದ. ಬೆಳಗಿನಿಂದ ಬೈಗಿನವರೆಗೂ ಸ್ಮಶಾನದಲ್ಲಿ ನಿಂತು ಸತ್ತ ಪ್ರತಿಯೊಬ್ಬರನ್ನೂ ಬೈಗುಳಗಳಿಂದ ಅಲಂಕರಿಸಿದ. ಸಂಜೆ ಸುಸ್ತಾಗಿ ಹಿಂದಿರುಗಿದ ಶಿಷ್ಯನನ್ನು ರಾ-ಉಮ್ ಮತ್ತೆ ಪ್ರಶ್ನಿಸಿದಳು. ‘ಏನಾದರೂ ಪ್ರತಿಕ್ರಿಯೆ ಬಂತೇ?’ ವಾ-ಐನ್ ದೈನ್ಯದಿಂದ ಹೇಳಿದ… ‘ಇಲ್ಲ… […]