ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ : ಗುರುವಿನೊಡನೆ ದೇವರಡಿಗೆ | ಆಯ್ದಭಾಗ ~ 1

“ಸಮಸ್ತ ದೇಶ ಜೀವನವೂ ಚಳವಳಿಯ ಉಸಿರಲ್ಲಿ ಕುದ್ದು, ಬೆಂದು ತಲ್ಲಣಿಸುತ್ತಿರುವಾಗ ಶ್ರೀ ರಾಮಕೃಷ್ಣ ಸಂಸ್ಥೆ ಮಾತ್ರ ಏಕೆ ತೆಪ್ಪಗೆ ಕೂತಿದೆ? ದೇಶಕ್ಕೆ ನಿಮ್ಮ ಕಾಣಿಕೆ ಏನು? ಸ್ವಾತಂತ್ರ್ಯ ಸಂಪಾದನೆಗೆ ನೀವು ಮಾಡುವುದೇನೂ ಇಲ್ಲವೆ? ಶ್ರೀರಾಮಕೃಷ್ಣ ಸಂಸ್ಥೆಯ ಈ ವರ್ತನೆ ಅರಿಯಲಾರದೆ ದೇಶವೆಲ್ಲ ಅಚ್ಚರಿಗೊಂಡಿದೆ. ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಮಹಾಸಂಸ್ಥೆ ಮಾಡಬೇಕಾದ ಕರ್ತವ್ಯ ಯಾವುದೂ ಇಲ್ಲವೆ?” ಭಕ್ತ ,ಶಿವಾನಂದರನ್ನು ಪ್ರಶ್ನಿಸಿದ ~ ಸಂಕಲನ : ಸ್ವಾಮಿ ಅಪೂರ್ವಾನಂದ | ಕನ್ನಡಕ್ಕೆ : ಕುವೆಂಪು ಅದು ಅಸಹಕಾರ ಚಳವಳಿಯ […]

ಆತ್ಮಜಾಗೃತಿ : ರಾಮಕೃಷ್ಣ ವಚನ ವೇದ

ಮೊದಲು ಅದ್ವೈತ ಜ್ಞಾನ, ನಂತರ ಆತ್ಮಜಾಗೃತಿ. ಅದರ ನಂತರ ಆನಂದವೇ ಆನಂದ… ನಿತ್ಯಾನಂದ! ~ ರಾಮಕೃಷ್ಣ ಪರಮಹಂಸ ಎಲ್ಲರಿಗೂ ಬ್ರಹ್ಮಜ್ಞಾನ ಸಾಧ್ಯ. ಜೀವಾತ್ಮ ಪರಮಾತ್ಮ ಎಂಬ ಎರಡು ವಸ್ತುಗಳು ಇವೆ. ಪ್ರಾರ್ಥನೆಯಿಂದ ಜೀವಾತ್ಮ ಪರಮಾತ್ಮನೊಡನೆ ಐಕ್ಯವಾಗಲು ಸಾಧ್ಯ. ಕೆಲವರಲ್ಲಿ ಬಹಳ ಬೇಗ ಆತ್ಮಜಾಗೃತಿ ಉಂಟಾಗಿಬಿಟ್ಟಿರುತ್ತದೆ. ಅವರಲ್ಲಿ ಒಂದು ವಿಶೇಷ ಗುಣ ನೋಡಬಹುದು. ಭಗವತ್ಸಂಬಂಧವಾದ ಮಾತುಕತೆ ಹೊರತು ಬೇರೇನೂ ಅವರಿಗೆ ರುಚಿಸದು. ಅವರು ಚಾತಕ ಪಕ್ಷಿಯ ಹಾಗೆ. ಮಳೆ ನೀರಿನ ಹೊರತು ಯಾವ ನದಿಯ ನೀರನ್ನೂ ಅದು ಕುಡಿಯದು. […]

ಈ ಸಂಸಾರ ಮಿಥ್ಯೆಯೇ? : ರಾಮಕೃಷ್ಣ ವಚನವೇದ

ಬಂದು ಹೋಗಲು  ಮಾರ್ಗವಿದೆ.  ಆದರೂ  ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು. ರೇಷ್ಮೆಹುಳು ತನ್ನನ್ನು ತಾನೇ  ಬಂಧಿಸಿಕೊಂಡು,  ತಾನಾಗಿಯೇ  ಸಾಯುತ್ತದೆ.  ಈ ರೀತಿಯ ಈ ಜಗತ್ತು ಮಿಥ್ಯೆಯಾದದ್ದು, ಅನಿತ್ಯವಾದದ್ದು ~ ರಾಮಕೃಷ್ಣ ಪರಮಹಂಸ ಭಕ್ತ : ಮಹಾಶಯರೆ, ಈ ಸಂಸಾರ ಮಿಥ್ಯೆಯಾದುದೇನು? ಶ್ರೀರಾಮಕೃಷ್ಣರು:  ಹೌದು, ಭಗವಂತನ ಸಾಕ್ಷಾತ್ಕಾರವನ್ನು ಪಡೆಯದವರೆಗೆ ಈ ಜಗತ್ತು ಮಿಥ್ಯೆಯಾದುದೇ.  ಅಜ್ಞಾನವಶದಿಂದ ಮನುಷ್ಯ ಭಗವಂತನನ್ನು ಮರೆತು `ನನ್ನದು…ನನ್ನದು..’  ಅನ್ನುತ್ತಲೇ ಇರುತ್ತಾನೆ. ಮಾಯೆಯಿಂದ ಬದ್ಧನಾಗಿ,  ಕಾಮಕಾಂಚನದಿಂದ ಮುಗ್ಧನಾಗಿ ಅಧೋಗತಿಗೆ ಇಳಿಯುತ್ತಲೇ ಇರುತ್ತಾನೆ. ಮಾಯೆಯ ದೆಸೆಯಿಂದ ಮನುಷ್ಯ ಅಂಥ […]

ಶ್ರದ್ಧೆ ಇದ್ದಲ್ಲಿ ಸಾಧನೆ ಸುಲಭ : ಪರಮಹಂಸ ವಚನ ವೇದ

ರಾಮಕೃಷ್ಣ ಪರಮಹಂಸರು ಶ್ರದ್ಧಾಭಕ್ತಿಗೆ ಹೆಚ್ಚಿನ ಒತ್ತು ನೀಡಿ ಬೋಧಿಸುತ್ತಿದ್ದರು. ಯಾವುದೇ ವಿಚಾರವನ್ನು ಹೇಳುವಾಗ ಸಾಮತಿಗಳನ್ನು ಬಳಸುವುದು ಅವರ ಶೈಲಿಯಾಗಿತ್ತು. ಶ್ರದ್ಧೆಯ ಕುರಿತು ಪರಮಹಂಸರು ನೀಡಿದ ಅಂತಹ ಒಂದು ಬೋಧನೆ ಇಲ್ಲಿದೆ: ಅಧ್ಯಾತ್ಮ ಸಾಧನೆಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾದುದು ಶ್ರದ್ಧೆ. ಸ್ವತಃ ನಿಮ್ಮ ಮೇಲಿನ ಶ್ರದ್ಧೆ ಹಾಗೂ ಯಾರ / ಯಾವುದರ ಕುರಿತು ಧ್ಯಾನಿಸುತ್ತೀರೋ ಅದರ / ಅವರ ಮೇಲಿನ ಶ್ರದ್ಧೆ. ಶಿಶುಸಹಜವಾದ ಶ್ರದ್ಧೆ ಮತ್ತು ಸರಳತೆಯಿಂದ ಭಗವಂತನನ್ನು ಕೂಡಾ ಹೊಂದಬಹುದು. ಒಮ್ಮೆ ಒಬ್ಬನು, ಸಾಧುವೊಬ್ಬರನ್ನು ಕಂಡು ತನಗೆ […]