ಮನಸ್ಸನ್ನು ಓದುವ ಮಂಡಲಗಳು : ಯಾವ ಮಂಡಲ ಏನು ಹೇಳುತ್ತದೆ?

ಚಿತ್ರಗಳು, ಬಣ್ಣಗಳು, ಜ್ಯಾಮಿತಿ ಆಕಾರಗಳು – ಇವೆಲ್ಲವನ್ನು ಮಾನಸಿಕತೆಯ ಅಧ್ಯಯನಕ್ಕೆ, ಥೆರಪಿಗೆ ಬಳಸುವುದು ಪ್ರಾಚೀನ ಪದ್ಧತಿ. ಈಗ ಇದು ಪರ್ಸನಾಲಿಟಿ ಡೆವಲಪ್ಮೆಂಟ್ ಹಾಗೂ ಲೈಫ್ ಸ್ಟೈಲ್ ತರಗತಿಗಳಲ್ಲಿ ಸಾಮಾನ್ಯ. ಇವು ಮೂಢ ನಂಬಿಕೆಗಳಲ್ಲ. ಇವು ನಮ್ಮ ಇಷ್ಟಾನಿಷ್ಟಗಳು ನಮ್ಮ ಮಾನಸಿಕತೆಯ ಪ್ರತಿನಿಧಿಗಳೇ ಆಗಿರುವುದರಿಂದ, ಅದರ ಆಧಾರದ ಮೇಲೆ ನಡೆಸುವ ಮನೋವೈಜ್ಞಾನಿಕ ವಿಶ್ಲೇಷಣೆ. ಈಗಾಗಲೇ ಅರಳಿಮರ ಇಂತಹ ಕೆಲವು ಲೇಖನಗಳನ್ನು ಪ್ರಕಟಿಸಿದ್ದು, ಈ ಸರಣಿಯಲ್ಲಿ ‘ಮಂಡಲ’ಗಳು ನಮ್ಮ ಮನಸ್ಸು ಬಿಚ್ಚಿಡುವ ಕೆಲವು ಹೊಳಹುಗಳನ್ನು ನೀಡಿದ್ದೇವೆ.  ಈ ಮೂರು ಮಂಡಲಗಳನ್ನು […]

ಪ್ರಾಣಿಯನ್ನು ಗುರುತಿಸಿ, ನಿಮ್ಮ ವ್ಯಕ್ತಿತ್ವವನ್ನು ಅರಿಯಿರಿ! : Personality test

ಈ ಚಿತ್ರದಲ್ಲಿ ನಮ್ಮ ವ್ಯಕ್ತಿತ್ವವನ್ನು ತಿಳಿಸುವ 11 ಪ್ರಾಣಿಗಳಿವೆ. ನಿಮ್ಮ ಕಣ್ಣಿಗೆ ಮೊದಲು ಕಾಣುವ ಪ್ರಾಣಿ ಯಾವ ವ್ಯಕ್ತಿತ್ವವನ್ನು ಹೇಳುತ್ತದೆ? ವಿವರಣೆ ನೋಡುತ್ತಾ ಹೋಗಿ. ಮೊದಲಿಗೆ ಈ ಚಿತ್ರವನ್ನು ಗಮನವಿಟ್ಟು ನೋಡಿ. ಇಲ್ಲಿ ಒಟ್ಟು 11 ಪ್ರಾಣಿಗಳಿವೆ. ನೋಡಿದ ಕೂಡಲೇ ನಿಮ್ಮ ಕಣ್ಣಿಗೆ ಮೊದಲು ಕಂಡ ಪ್ರಾಣಿ ಯಾವುದು? ತಿಳಿಸಿ. ನಮ್ಮ ಆಲೋಚನೆಯಂತೆ ನಮ್ಮ ದೃಷ್ಟಿ ಇರುತ್ತದೆ, ಉದಾಹರಣೆಗೆ ಗುಲಾಬಿಗಿಡವನ್ನು ಇಬ್ಬರು ಒಟ್ಟಿಗೆ ನೋಡುತ್ತಾರೆ, ಒಬ್ಬರಿಗೆ ಮೊದಲು ಹೂ ಕಂಡರೆ. ಮತ್ತೊಬ್ಬರಿಗೆ ಮುಳ್ಳು ಕಾಣಿಸುತ್ತದೆ. ಯಾರಿಗೆ ಮೊದಲು […]

ಪ್ರೀತಿಸಲ್ಪಡಲು ಬೇಕಾದ 10 ಮುಖ್ಯ ಲಕ್ಷಣಗಳು : ಬುದ್ಧ ಸಂದೇಶ

ಹಾಗೆ ನೋಡಿದರೆ, ಪ್ರೀತಿಸುವುದು ಸುಲಭ; ಪ್ರೀತಿಸಲ್ಪಡುವುದು ಬಹಳ ಕಷ್ಟ. ಸುತ್ತಮುತ್ತಲಿನ ಜನರಿಗೆ ಇಷ್ಟವಾಗುವಂಥ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಬುದ್ಧನ ಬೋಧನೆಗಳಿಂದ ಆಯ್ದು ತೆಗೆದ 10 ಟಿಪ್ಸ್ ಇಲ್ಲಿವೆ… ಸಂತಸವನ್ನೇ ವಿತರಿಸಿ ನಿಮ್ಮನ್ನು ಪ್ರೀತಿಸಿಕೊಳ್ಳಿ ಪ್ರತಿಕ್ರಿಯೆ ಬೇಡ, ಸ್ಪಂದಿಸಿ… ಆಲಿಸುವ ಗೌರವ ಮೆಚ್ಚುಗೆ ಸೂಚಿಸುವುದು ಅಪರಾಧೀಪ್ರಜ್ಞೆ ನೀವು ಏನಾಗಿದ್ದೀರಿ? ಒಡನಾಟವೆಂದರೆ… ಮನಸ್ಸೇ ವಂಚಿಸುವುದು ಈ ಮೂರು ಸಂಗತಿಗಳು…

ಯಶಸ್ವೀ ಬದುಕಿಗೆ ಭಗವದ್ಗೀತೆ ಹೇಳುವ ಸ್ಥಿತಪ್ರಜ್ಞತೆಯ 7 ಲಕ್ಷಣಗಳು

ಸುಖ ಬಂದಾಗ ಹೆಚ್ಚು ಹಿಗ್ಗದೇ, ಮತ್ತು ದುಃಖ ಬಂದಾಗ ಕುಗ್ಗಿ ಕುಸಿಯದೇ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞನ ಲಕ್ಷಣ. ಈ ಸ್ಥಿತಪ್ರಜ್ಞತೆಯೇ ಯಶಸ್ವೀ ಬದುಕಿಗೆ ಮುನ್ನುಡಿ. ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ.  ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ | ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ || 2:54 || ಅರ್ಥ : ಕೇಶವ, ಸ್ಥಿತಪ್ರಜ್ಞನ ಲಕ್ಷಣಗಳೇನು ? ಅವನು ಹೇಗೆ […]

ಪರೀಕ್ಷೆಯ ಫಲಿತಾಂಶ ಎದುರಿಸುವುದು ಹೇಗೆ? : ಭಗವದ್ಗೀತೆಯ ಪಾಠಗಳು #4

ಅದು ಶಾಲಾ ಕಾಲೇಜುಗಳ ಪಠ್ಯ ಪರೀಕ್ಷೆ ಇರಬಹುದು ಅಥವಾ ಉದ್ಯೋಗ ಸ್ಥಳದ ಯಾವುದೆ ಕೌಶಲ್ಯ ಬೇಡುವ ಸವಾಲು. ಅಥವಾ ಜೀವನದ ಮಹತ್ತರ ತಿರುವನ್ನು ನಿರ್ಧರಿಸುವ ಘಟ್ಟವೇ ಆಗಿರಬಹುದು. ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಅನ್ನುವುದು ನಮ್ಮ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ~ ಆನಂದಪೂರ್ಣ ಕೆಲವೊಂದು ಪರೀಕ್ಷೆಗಳು ಪೂರ್ವ ನಿರ್ಧಾರಿತವಾಗಿರುತ್ತವೆ. ನಮಗೆ ಅದರ ಕುರಿತು ಮೊದಲೇ ಮಾಹಿತಿ ಇದ್ದು, ಅದರಲ್ಲಿ ಉತ್ತೀರ್ಣರಾಗುವ ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ. ಮತ್ತೆ ಕೆಲವು ಪರೀಕ್ಷೆ ಅನಿರೀಕ್ಷಿತವಾಗಿ ಧುತ್ತೆಂದು ನಮ್ಮೆದುರು ಬಂದು ನಿಲ್ಲುತ್ತವೆ. ಯಾವ ತಯಾರಿಯೂ […]

ಕಾಕೋಲುಕೀಯ, ಲಬ್ಧಪ್ರಣಾಶ, ಅಪರೀಕ್ಷಿತಕಾರಕ : ಪಂಚತಂತ್ರ ನುಡಿಚಿತ್ರಗಳು ~ ಭಾಗ 2

ಪಂಚತಂತ್ರ ಭಾರತೀಯ ಬೋಧನಾ ಸಾಹಿತ್ಯದಲ್ಲೇ ಅತ್ಯಂತ ವಿಭಿನ್ನವೂ ವಿಶಿಷ್ಟವೂ ಆದ ಕೃತಿ. ಮೂಲ ಸಂಸ್ಕೃತದಲ್ಲಿರುವ ಇದನ್ನು ವಿಷ್ಣುಶರ್ಮ ಎಂಬ ಹೆಸರಿನ ಆಚಾರ್ಯರು ರಚಿಸಿದರೆಂದು ಪ್ರತೀತಿ. ಮುಂದೆ ಜನಪ್ರಿಯಗೊಂಡು ವಿಶ್ವಾದ್ಯಂತ ಹರಡಿದ ಪಂಚತಂತ್ರದ ಕಥೆಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅಷ್ಟು ಮಾತ್ರವಲ್ಲ, ಇದರಿಂದ ಪ್ರೇರಣೆಗೊಂಡು ಕತೆಗಳ ಪುನರ್ರಚನೆ, ಪುನರ್ನಿರೂಪಣೆ ಮೊದಲಾದ ಪ್ರಯೋಗಗಳೂ ನಡೆದಿವೆ. ಕಲೆ, ನಾಟಕ, ವ್ಯಕ್ತಿತ್ವ ವಿಕಸನ ಪಾಠಗಳೇ ಮೊದಲಾದ ಹಲವು ಪ್ರಕಾರಗಳಲ್ಲಿ ಪಂಚತಂತ್ರಗಳ ಕಥೆಗಳನ್ನು ನಾವು ನೋಡಬಹುದು.  ಭಾಗ 1ರಲ್ಲಿ ಎರಡು ತಂತ್ರಗಳ ನುಡಿಚಿತ್ರಗಳನ್ನು ನೀಡಲಾಗಿದ್ದು, ಅದರ […]

ಯಶಸ್ವಿ ಬದುಕಿಗೆ ಪಂಚತಂತ್ರದ 20 ನುಡಿಚಿತ್ರಗಳು : ಭಾಗ 1

ಪಂಚತಂತ್ರ ಭಾರತೀಯ ಬೋಧನಾ ಸಾಹಿತ್ಯದಲ್ಲೇ ಅತ್ಯಂತ ವಿಭಿನ್ನವೂ ವಿಶಿಷ್ಟವೂ ಆದ ಕೃತಿ. ಮೂಲ ಸಂಸ್ಕೃತದಲ್ಲಿರುವ ಇದನ್ನು ವಿಷ್ಣುಶರ್ಮ ಎಂಬ ಹೆಸರಿನ ಆಚಾರ್ಯರು ರಚಿಸಿದರೆಂದು ಪ್ರತೀತಿ. ಮುಂದೆ ಜನಪ್ರಿಯಗೊಂಡು ವಿಶ್ವಾದ್ಯಂತ ಹರಡಿದ ಪಂಚತಂತ್ರದ ಕಥೆಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅಷ್ಟು ಮಾತ್ರವಲ್ಲ, ಇದರಿಂದ ಪ್ರೇರಣೆಗೊಂಡು ಕತೆಗಳ ಪುನರ್ರಚನೆ, ಪುನರ್ನಿರೂಪಣೆ ಮೊದಲಾದ ಪ್ರಯೋಗಗಳೂ ನಡೆದಿವೆ. ಕಲೆ, ನಾಟಕ, ವ್ಯಕ್ತಿತ್ವ ವಿಕಸನ ಪಾಠಗಳೇ ಮೊದಲಾದ ಹಲವು ಪ್ರಕಾರಗಳಲ್ಲಿ ಪಂಚತಂತ್ರಗಳ ಕಥೆಗಳನ್ನು ನಾವು ನೋಡಬಹುದು.  ಯಾವುದು ಈ 5 ತಂತ್ರಗಳು? ಈ ತಂತ್ರ […]

ಚಕ್ರ ಧ್ಯಾನದ 8 ಹಂತಗಳು : ಅರಳಿಮರ Video

ಚಕ್ರಧ್ಯಾನ ದೇಹಕ್ಕೆ ಚೈತನ್ಯವನ್ನೂ ಉತ್ಸಾಹವನ್ನೂ ತುಂಬುವ ಧ್ಯಾನ ವಿಧಾನ. 30ರಿಂದ 35 ನಿಮಿಷಗಳವರೆಗೆ ಸಾಗುವ ಈ ಧ್ಯಾನ ನಡೆಸಲು ಬೆಳಗಿನ ಸಮಯ ಹೆಚ್ಚು ಸೂಕ್ತ. ಪ್ರತಿ ನಿತ್ಯ ಈ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ನಿತ್ಯವೂ ಉಲ್ಲಸಿತ ಮತ್ತು ಚೈತನ್ಯಶೀಲ ಬದುಕು ನಿಮ್ಮದಾಗುವುದು.  ಚಕ್ರಧ್ಯಾನ ವಿಧಾನದ 8 ಹಂತಗಳನ್ನು ಈ ಕಿರು ವಿಡಿಯೋ ಚಿತ್ರಿಕೆ ಅತ್ಯಂತ ಸರಳವಾಗಿ ನಿರೂಪಿಸುತ್ತದೆ. ಸವಿವರ ಮಾಹಿತಿ ಬೇಕಿದ್ದಲ್ಲಿ ಪ್ರತಿಕ್ರಿಯಿಸಿ. 

ನಮಗೆ ನಾವೆ ಹೇಳಿಕೊಳ್ಳುವ 12 ಸುಳ್ಳುಗಳು! : ಮೊದಲ ಕಂತು ~ 1ರಿಂದ 3

ನಮಗೆ ನಾವೆ ಹೇಳಿಕೊಳ್ಳುವ ಸುಳ್ಳುಗಳು ಯಾವತ್ತೂ ಯಾವ ಕಾರಣಕ್ಕೂ ಒಳಿತನ್ನುಂಟು ಮಾಡುವುದಿಲ್ಲ. ಅವುಗಳಿಂದ ಕೆಡುಕು ಕಟ್ಟಿಟ್ಟ ಬುತ್ತಿ. ನಮಗೆ ನಾವೆ ಹೇಳಿಕೊಳ್ಳುವ ಸುಳ್ಳು ನಮ್ಮ ಬೆಳವಣಿಗೆಯ ಸಾಧ್ಯತೆಗಳನ್ನು ಕತ್ತರಿಸಿ  ಹಾಕುವ ಚಿನ್ನದ ಕತ್ತರಿ ~ ಅಲಾವಿಕಾ ಸುಳ್ಳು ಒಂದು ಥರದ ವ್ಯಸನ. ಅದೊಂಥರಾ ಆಯಾ ಕ್ಷಣವನ್ನು ತಳ್ಳಿ ಹಾಕುವ ನಶೆ. ಹೇಗೋ ಆ ಘಳಿಗೆ, ಆ ಘಟನೆಯನ್ನು ದಾಟಿಬಿಟ್ಟರೆ ಸಾಕೆಂದು ನಾವು ಧರಿಸುವ ಭ್ರಮೆಯ ರೆಕ್ಕೆ. ಇತರರಿಗೆ ಸುಳ್ಳು ಹೇಳುವುದು ಒಂದು ಥರವಾದರೆ, ನಮಗೆ ನಾವೇ ಹೇಳಿಕೊಳ್ಳು […]

ನಿಮ್ಮ SQ (spiritual quotient) ಯಾವ ಮಟ್ಟದಲ್ಲಿದೆ?

ಸ್ಪಿರಿಚುವಲ್ ಕೋಶೆಂಟ್ ಅಥವಾ ಎಸ್‍ಕ್ಯೂ, ಐಕ್ಯೂ ಮತ್ತು ಇಕ್ಯೂಗಳಿಗಿಂತ ಬಹಳ ಮೇಲ್ಮಟ್ಟದ್ದು. `ಒಂದು ಕಂಪ್ಯೂಟರಿಗೆ ಐಕ್ಯೂ ಇರುತ್ತದೆ. ಒಂದು ಪ್ರಾಣಿ ಇಕ್ಯೂ ಹೊಂದಿರಬಹುದು. ಹಾಗಿದ್ದ ಮೇಲೆ ಈ ಎರಡಕಿಂತ ಮೇಲ್‍ಮಟ್ಟದವನಾದ ಮನುಷ್ಯನಲ್ಲಿ ಎಸ್‍ಕ್ಯೂ ಇದ್ದಿರಲೇಬೇಕು. ಅದಿಲ್ಲವಾದರೆ ಆತ ಇನ್ನೂ ಆಂತರಿಕವಾಗಿ ಮನುಷ್ಯನಾಗಿ ವಿಕಾಸಗೊಂಡಿಲ್ಲ ಎಂದೇ ಅರ್ಥ’  ಅನ್ನುತ್ತಾನೆ ಮಾರ್ಷಲ್. ಆತನ ಈ ವಿವರಣೆ ನಾವು ಎಸ್‍ಕ್ಯೂ ಬೆಳೆಸಿಕೊಳ್ಳಬೇಕಾದ ಅಗತ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ  ~  ಗಾಯತ್ರಿ ಮನುಷ್ಯನನ್ನು ವೈಚಾರಿಕವಾಗಿ ಚಿಂತಿಸಬಲ್ಲ ಪ್ರಾಣಿ ಎಂದು ಕರೆದ ಅರಿಸ್ಟಾಟಲ್. ಆತನ ಈ […]