“ನಾನು ಯಾರು?” : ಶ್ರೀ ರಮಣರೊಡನೆ ಸಂಭಾಷಣೆ

ಶಿವಪ್ರಕಾಶಂ ಪಿಳ್ಳೈಯವರ  ಸಂದೇಹಗಳಿಗೆ ರಮಣ ಮಹರ್ಷಿಗಳು ಲಿಖಿತರೂಪದಲ್ಲಿ ನೀಡಿದ ಉತ್ತರಗಳನ್ನು ಸಂಕಲಿಸಿ ‘ನಾನು ಯಾರು?’ ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಲಾಗಿದೆ. ಡಾ. ಕೆ.ಎ. ನಾರಾಯಣನ್ ಕನ್ನಡಕ್ಕೆ ಅನುವಾದಿಸಿದ ಈ ಸಂಗ್ರಹದ ಆಯ್ದ ಭಾಗ ಇಲ್ಲಿದೆ. (ಇಂದು ಶ್ರೀ ರಮಣ ಜಯಂತಿ)

ಅತೀಂದ್ರಿಯ ಶಕ್ತಿಗಳು ನಿರರ್ಥಕ : ಶ್ರೀ ರಮಣ ವಿಚಾರಧಾರೆ

ಮಹರ್ಷಿಗಳ ಪ್ರಭಾವಕ್ಕೆ ಸಿಲುಕಿದ್ದ ಮೊದಲನೆಯ ಪಾಶ್ಚಾತ್ಯ ಯುವ ಅನ್ವೇಷಕ ಎಫ್‌.ಎಚ್‌. ಹಂಫ್ರಿಸ್‌, ಮತಧರ್ಮಗಳ  ಶ್ರದ್ಧಾಪೂರ್ವಕ ಅಭ್ಳಾಸಿಯಾಗಿದ್ದ. ಪವಾಡದ ಶಕ್ತಿಗಳು ಅವನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತಲೇ ಅವನು ಸಿದ್ಧಿಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲಿಯಾಗಿದ್ದ. ಮಹರ್ಷಿಗಳು ಈ ಕುತೂಹಲಕ್ಕೆ ಪ್ರೋತ್ಸಾಹ ಕೊಡಲಿಲ್ಲ. ಈ ಸಂದರ್ಭದಲ್ಲಿ ಅವರು ನೀಡಿದ ಬೋಧನೆಗಳಿವು… ~ ಕೃಪೆ: ರಮಣ ಮಹರ್ಷಿ; ಕೆ. ಸ್ವಾಮಿನಾಥನ್ । ಕನ್ನಡಕ್ಕೆ: ಎನ್.ಬಾಲಸುಬ್ರಹ್ಮಣ್ಯ

‘ನಾನೇ ಬ್ರಹ್ಮ’ : ಹಾಗೆಂದರೇನು!? ~ ರಮಣ ಮಹರ್ಷಿಗಳ ಉತ್ತರ

ಭಕ್ತರೊಬ್ಬರು ರಮಣ ಮಹರ್ಷಿಗಳ ಬಳಿ “ಅಹಂ ಬ್ರಹ್ಮಾಸ್ಮಿ , ನಾನೇ ಬ್ರಹ್ಮ ಎಂದು ಉಪನಿಷತ್ತುಗಳು ಹೇಳಿವೆ. ಅದನ್ನು ಧ್ಯಾನಿಸುತ್ತಿದ್ದರೆ ಸಾಲದೆ?” ಎಂದು ಕೇಳುತ್ತಾರೆ. ಅದಕ್ಕೆ ಶ್ರೀ ರಮಣರು ನೀಡಿದ ಉತ್ತರ ಹೀಗಿದೆ…

ಮರಣ ಭಯದಿಂದ ಬಿಡುಗಡೆ ಹೊಂದುವುದು… : ರಮಣರ ವಿಚಾರಧಾರೆ

ಮನಸ್ಸು ನಿವೃತ್ತಿ ಮಾರ್ಗಕ್ಕೆ ತಿರುಗಿದಾಗ ಅದು ಈಶ್ವರನ ಅನುಗ್ರಹಕ್ಕೆ ಪಾತ್ರವಾಗುವುದು‌. ಈ ಅನುಗ್ರಹವು ಮನಸ್ಸನ್ನು ಅಂತರ್ಮುಖ ಗೊಳಿಸಿ ಅದನ್ನು ಪರವಸ್ತುವಿನಲ್ಲಿ ಸೇರಿಸಿ ಬಿಡುತ್ತದೆ . ಆಗ ಎಲ್ಲಾ ಬಂದ ವಾಸನೆಗಳು ‘ನಾನು ‘ ಎನ್ನುವ ಅಹಂಕಾರವು ನಾಶವಾಗುತ್ತದೆ ; ಉಳಿಯುವುದು ಮರಣ ರಹಿತವಾದ ಆತ್ಮವೇ! । ಓದುಗರ ಸಂಗ್ರಹದಿಂದ…

ಮೋಕ್ಷಸಾಧನೆಯ ಪಥದಲ್ಲಿ ಗೃಹಸ್ಥನು ಯಶಸ್ವಿಯಾಗಬಲ್ಲನೆ?  ~ ಭಾಗ 2

“ಮೋಕ್ಷ ಸಾಧನೆಯ ಪಥದಲ್ಲಿ ಗೃಹಸ್ಥನು ಯಶಸ್ವಿಯಾಗಬಲ್ಲನೆ?” ಎಂದು ಗೃಹಸ್ಥ ಅನುಯಾಯಿಯೊಬ್ಬರು ಕೇಳಿದ ಪ್ರಶ್ನೆಗೆ ರಮಣ ಮಹರ್ಷಿಗಳು ನೀಡಿದ ಉತ್ತರ ಇಲ್ಲಿದೆ: ನಿನ್ನನ್ನು ನೀನು ಗೃಹಸ್ಥ ಎಂದೇಕೆ ತಿಳಿಯುವೆ? ಸಂನ್ಯಾಸಿಯಾಗಿ ಹೊರಟಾಗಲೂ “ನಾನು ಸಂನ್ಯಾಸಿ” ಎಂಬ ಆಲೋಚನೆ ಬೆನ್ನಟ್ಟುತ್ತದೆ. ಮನೆಯಲ್ಲೇ ಇದ್ದರೂ, ಮನೆಯನ್ನು ತೊರೆದು ಕಾಡಿಗೆ ಹೋದರೂ ಮನಸ್ಸು ಬೆನ್ನಟ್ಟುತ್ತದೆ. ಈ ಅಹಂಭಾವವೇ ಎಲ್ಲ ಆಲೋಚನೆಗಳ ಮೂಲ. ಅದೇ ದೇಹವನ್ನೂ ಪ್ರಪಂಚವನ್ನೂ ಸೃಷ್ಟಿ ಮಾಡಿ, ನಿಮ್ಮನ್ನು ನೀವು ಗೃಹಸ್ಥನೆಂದು ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಸಂಸಾರವನ್ನು ತ್ಯಜಿಸಿ ಹೊರಟರೆ, ಅಹಂಭಾವವು ಸಂಸಾರಕ್ಕೆ […]

ಮಾಯೆ, ಸಾಕ್ಷಾತ್ಕಾರ, ಬ್ರಹ್ಮಚರ್ಯ ಇತ್ಯಾದಿ ಪ್ರಶ್ನೆಗಳಿಗೆ ರಮಣ ಮಹರ್ಷಿಗಳ ಉತ್ತರ

ಸಂದರ್ಶಕರು ಹಾಗೂ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರಗಳನ್ನು ‘ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ’ ಕೃತಿಯಲ್ಲಿ ಸಂಕಲಿಸಲಾಗಿದೆ. ಈ ಕೃತಿಯಿಂದ ಪ್ರಶ್ನೋತ್ತರಗಳನ್ನು ಆಯ್ದು ಇಲ್ಲಿ ನೀಡಲಾಗಿದೆ…