ದೋಷ ಆತ್ಮಕ್ಕಲ್ಲ, ಅಹಂಭಾವಕ್ಕೆ… | ರಮಣರ ಜೊತೆ ಮಾತುಕತೆ ~ ಭಾಗ 6

ನವೆಂಬರ್ 17, 1936ರಂದು ರಮಣ ಮಹರ್ಷಿಗಳು ತಮ್ಮ ಶಿಷ್ಯರೊಬ್ಬರ ಪ್ರಶ್ನೆಗಳಿಗೆ ಉತ್ತರಿಸಿದ ಚುಟುಕು ಸಂಭಾಷಣೆ ಇಲ್ಲಿದೆ : ಶಿಷ್ಯ : ಮನುಷ್ಯನು ‘ಜಿತಸಂಗದೋಷ’ನಾಗುವುದು ಹೇಗೆ? ರಮಣ ಮಹರ್ಷಿ: ಸತ್ಸಂಗದಿಂದ. “ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲ ತತ್ತ್ವಂ, ನಿಶ್ಚಲತತ್ತ್ವೇ ಜೀವನ್ಮುಕ್ತಿಃ” ಸತ್ಸಂಗವೆಂದರೆ ಸತ್’ನೊಡನೆ ಸಹವಾಸ. ‘ಸತ್’ ಎಂದರೆ ಆತ್ಮವೆಂದೇ. ಆದರೆ ಈಗ, ಆತ್ಮವೆಂದರೆ ‘ಸತ್’ ಎಂದು ತಿಳಿದಿರುವುದರಿಂದ, ಹಾಗೆ ಯಾರಿಗೆ ತಿಳಿದಿದೆಯೋ ಅಂತಹ ಸಂತನ ಸಹವಾಸವನ್ನು ಮಾಡಬೇಕು. ಅದೇ ಸತ್ಸಂಗ. ಅಂತಹ ಸತ್ಸಂಗದಿಂದ ಅಂತರ್ಮುಖತೆ ಸಿದ್ಧಿಸುತ್ತದೆ. […]

ಎಲ್ಲೆಲ್ಲೂ ಏಕಾಂತವೇ ಇದೆ : ರಮಣರ ಜೊತೆ ಮಾತುಕತೆ ~ ಭಾಗ 5

ಏಕನಾಥ್ ರಾವ್ ಎಂಬ ಇಂಜಿನಿಯರ್ ಮತ್ತು ರಮಣ ಮಹರ್ಷಿಗಳ ನಡುವೆ ನಡೆದ ಒಂದು ಚುಟುಕು ಸಂಭಾಷಣೆ ಇಲ್ಲಿದೆ…. ಏಕನಾಥ ರಾವ್ : ವಿಚಾರ ಮಾಡಲು ಏಕಾಂತದ ಅಗತ್ಯವಿದೆಯೇ? ರಮಣ ಮಹರ್ಷಿ: ಎಲ್ಲೆಲ್ಲೂ ಏಕಾಂತವೇ ಇದೆ. ಮಾನವನು ಯಾವಾಗಲೂ ಏಕಾಕಿ. ಆದರೆ ಅದನ್ನು ಬಾಹ್ಯದಲ್ಲಿ ಅಲ್ಲ, ಅಂತರಂಗದಲ್ಲಿ ಹುಡುಕಿಕೊಳ್ಳಬೇಕು. ಏ.ರಾ : ಆದರೆ ದೈನಂದಿನ ಬದುಕು ಚಂಚಲತೆಯನ್ನು ಉಂಟುಮಾಡುತ್ತದೆ…. ರ.ಮ : ಹಾಗೆ ಚಂಚಲತೆಗೆ ಈಡಾಗಬೇಡಿ. ಅಂತಹ ಚಂಚಲತೆ ಉಂಟಾಗುತ್ತಿರುವುದು ಯಾರಿಗೆ ಎಂದು ವಿಚಾರ ಮಾಡಿ. ಕೊಂಚ ಸಾಧನೆಯ […]

ಅಭ್ಯಾಸವೆಂದರೆ ಕರ್ಮ ವಿಶ್ರಾಂತಿಯೇ? : ರಮಣರ ಜೊತೆ ಮಾತುಕತೆ ~ ಭಾಗ 4

ಮದನಪಲ್ಲಿಯ ಮಿ.ಡಂಕನ್ ಗ್ರೀನ್ ಲೀಸ್ ಬರೆದ ಪತ್ರ ಮತ್ತು ಅದಕ್ಕೆ ರಮಣ ಮಹರ್ಷಿಗಳ ಪ್ರತಿಕ್ರಿಯೆಯನ್ನು ಇಲ್ಲಿ ನೀಡಲಾಗಿದೆ… ಡಂಕನ್ ಪತ್ರ : ಆತ್ಮನನ್ನೂ ಒಳಗೊಂಡು, ಅದರ ಆಚೆಗೂ ಪಸರಿಸುವಂತಹ ದಿವ್ಯಜ್ಯೋತಿಯು ಒಮ್ಮೊಮ್ಮೆ ಕಾಣುತ್ತದೆ. ಮನಸ್ಸಿನ ತಾತ್ತ್ವಿಕ  ವಿವರಣೆಯನ್ನು ಬದಿಗಿಟ್ಟು, ಇಂತಹ ಅನುಭವವನ್ನು ಪಡೆಯಲು, ಅದನ್ನು ಉಳಿಸಿಕೊಳ್ಳಲು, ವಿಸ್ತರಿಸಲು ಮಾರ್ಗ ಯಾವುದು ಎಂಬುದನ್ನು ಮಹರ್ಷಿಗಳು ತಿಳಿಸಬಲ್ಲರೆ? ಅಂತಹ ಸಂದರ್ಭಗಳಲ್ಲಿ ಅಭ್ಯಾಸ ಎಂದರೆ ಕರ್ಮ ವಿಶ್ರಾಂತಿಯೆ? ನಿವೃತ್ತಿಯೆ? ರಮಣ ಮಹರ್ಷಿಗಳ ಉತ್ತರ : ಈ ಒಳಗೆ – ಹೊರಗೆ ಎಂಬುದೆಲ್ಲಾ […]

ಮೋಕ್ಷಸಾಧನೆಯ ಪಥದಲ್ಲಿ ಗೃಹಸ್ಥನು ಯಶಸ್ವಿಯಾಗಬಲ್ಲನೆ?  ~ ಭಾಗ 2

“ಮೋಕ್ಷ ಸಾಧನೆಯ ಪಥದಲ್ಲಿ ಗೃಹಸ್ಥನು ಯಶಸ್ವಿಯಾಗಬಲ್ಲನೆ?” ಎಂದು ಗೃಹಸ್ಥ ಅನುಯಾಯಿಯೊಬ್ಬರು ಕೇಳಿದ ಪ್ರಶ್ನೆಗೆ ರಮಣ ಮಹರ್ಷಿಗಳು ನೀಡಿದ ಉತ್ತರ ಇಲ್ಲಿದೆ: ನಿನ್ನನ್ನು ನೀನು ಗೃಹಸ್ಥ ಎಂದೇಕೆ ತಿಳಿಯುವೆ? ಸಂನ್ಯಾಸಿಯಾಗಿ ಹೊರಟಾಗಲೂ “ನಾನು ಸಂನ್ಯಾಸಿ” ಎಂಬ ಆಲೋಚನೆ ಬೆನ್ನಟ್ಟುತ್ತದೆ. ಮನೆಯಲ್ಲೇ ಇದ್ದರೂ, ಮನೆಯನ್ನು ತೊರೆದು ಕಾಡಿಗೆ ಹೋದರೂ ಮನಸ್ಸು ಬೆನ್ನಟ್ಟುತ್ತದೆ. ಈ ಅಹಂಭಾವವೇ ಎಲ್ಲ ಆಲೋಚನೆಗಳ ಮೂಲ. ಅದೇ ದೇಹವನ್ನೂ ಪ್ರಪಂಚವನ್ನೂ ಸೃಷ್ಟಿ ಮಾಡಿ, ನಿಮ್ಮನ್ನು ನೀವು ಗೃಹಸ್ಥನೆಂದು ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಸಂಸಾರವನ್ನು ತ್ಯಜಿಸಿ ಹೊರಟರೆ, ಅಹಂಭಾವವು ಸಂಸಾರಕ್ಕೆ […]

ರಮಣ ಮಹರ್ಷಿಗಳ ಪ್ರಶ್ನೋತ್ತರ ಮಾಲೆ ~ ಭಾಗ 1

ಸಂದರ್ಶಕರು ಹಾಗೂ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರಗಳನ್ನು ‘ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ’ ಕೃತಿಯಲ್ಲಿ ಸಂಕಲಿಸಲಾಗಿದೆ. ಈ ಕೃತಿಯಿಂದ ಪ್ರಶ್ನೋತ್ತರಗಳನ್ನು ಆಯ್ದ, ಸರಳೀಕರಿಸಿ ಇಲ್ಲಿ ನೀಡಲಾಗಿದೆ… ಪರಿವ್ರಾಜಕ: ಇಡಿಯ ವಿಶ್ವವೇ ಭಗವಂತನೆಂದು ಅರಿಯುವುದು ಹೇಗೆ? ರಮಣ ಮಹರ್ಷಿ : ನಿನ್ನಲ್ಲಿ ವಿವೇಕದ ದೃಷ್ಟಿಯನ್ನು ಬೆಳೆಸಿಕೊಂಡರೆ ಸಮಸ್ತೆ ವಿಶ್ವವೇ ಭಗವಂತನೆಂದು ತಿಳಿಯುವೆ. ಬ್ರಹ್ಮವನ್ನು ತಿಳಿಯದೆ ಅವನ ಸರ್ವವ್ಯಾಪಕ ತತ್ತ್ವವನ್ನು ಹೇಗೆ ತಿಳಿಯುವೆ? ಸಂದರ್ಶಕ: ಇದು ಹೇಗೆ ಅನುಭವಕ್ಕೆ ಬರುತ್ತದೆ? ರಮಣ ಮಹರ್ಷಿ : ಯಾರು […]

ನನಗೆ ಶಿಷ್ಯರಿಲ್ಲ, ನೀನು ನನ್ನನ್ನು ಗುರುವೆಂದು ಭಾವಿಸಬಹುದು : ರಮಣ ಧಾರೆ

ದೀರ್ಘಕಾಲದವರೆಗೆ ರಮಣ ಮಹರ್ಷಿಗಳ ಜೊತೆ ಇದ್ದು ಅಧ್ಯಾತ್ಮ ಸಾಧನೆ ಮಾಡಿದ ಮೇಜರ್ ಅಲನ್ ಡಬ್ಲ್ಯೂ. ಚಾಡ್ವಿಕ್ ಮತ್ತು ಭಗವಾನ್ ರಮಣ ಮಹರ್ಷಿಗಳ ನಡುವೆ ನಡೆದ ಸಂಭಾಷಣೆಯೊಂದರ ಭಾಗ ಇಲ್ಲಿದೆ. ನನಗೆ ಶಿಷ್ಯರಿಲ್ಲ ಎಂದು ರಮಣರು ಹೇಳುತ್ತಾರೆ. ಆಗ ಚಾಡ್ವಿಕ್’ರಿಗೆ ತಮ್ಮ ಗುರು ಯಾರು ಎಂಬ ಗೊಂದಲ ಉಂಟಾಗುತ್ತದೆ. ಅವರ ಗೊಂದಲವನ್ನು ರಮಣರ ಉತ್ತರ ಪರಿಹರಿಸುತ್ತದೆ. ಚಾಡ್ವಿಕ್ : ತಮಗೆ ಯಾವ ಶಿಷ್ಯಂದಿರೂ ಇಲ್ಲ ಎಂದು ಭಗವಾನರು ಹೇಳುತ್ತಾರಲ್ಲವೆ? ಭಗವಾನ್ : ಹೌದು. ಚಾಡ್ವಿಕ್ : ಆದರೆ ಯಾವುದೇ […]

ಬ್ರಹ್ಮಜ್ಞಾನವೆಂದರೆ ಸುಖ ಸಂತೋಷಗಳನ್ನು ಪಡೆಯುವುದಲ್ಲ : ರಮಣ ಧಾರೆ

ವಾಸ್ತವದಲ್ಲಿ ಸುಖ ಸಂತೋಷಗಳು ನಮ್ಮ ಸಹಜ ಸ್ವಭಾವವೇ ಆಗಿವೆ. ಅದು ನಮ್ಮ ಆತ್ಮವೇ ಆಗಿದೆ. ಅದನ್ನು ಪ್ರತಿಯೊಬ್ಬರೂ ಹುಡುಕುತ್ತಾರೆ, ಕಾರಣ ಅದು ಅವರ ಸ್ವಭಾವ. ಅದು ಅವರ ಆಜನ್ಮಹಕ್ಕು. ಅದನ್ನು ಅವರು ಕಾಣದೇ ಇರಲು ಕಾರಣ, ಅವರು ಯಾವಾಗಲೂ ತಮ್ಮಿಂದ ಹೊರಗೆ ಅದನ್ನು ಹುಡುಕುವುದೇ ಆಗಿದೆ. ಬ್ರಹ್ಮಜ್ಞಾನವೆಂಬುದು ಸಂಪಾದಿಸುವ ವಿದ್ಯೆಯಲ್ಲ. ಬ್ರಹ್ಮಜ್ಞಾನ ಪಡೆಯುವುದರಿಂದ ಸುಖ ಸಂತೋಷಗಳು ಸಿಗುತ್ತವೆ ಎಂದು ನೀವು ಭಾವಿಸುತ್ತೀರಿ. ಇದೊಂದು ತಪ್ಪು ಗ್ರಹಿಕೆ. ನಿಮ್ಮೊಳಗಿರಬಹುದಾದ ಈ ತಪ್ಪುಗ್ರಹಿಕೆ ಹತ್ತು ಜನ ಪೆದ್ದರು ನದಿ ದಾಟಿದಂತಿದೆ. […]

ಜ್ಞಾನಿಯ ಪಾಲಿಗೆ ತಾನಿರುವಲ್ಲಿಯೇ ವೃಂದಾವನ : ರಮಣ ಧಾರೆ

ರಮಣ ಮಹರ್ಷಿಗಳನ್ನು ಕಾಣಲು ಬಂದವರು ವಿವಿಧ ಆಧ್ಯಾತ್ಮಿಕ ವಿಚಾರಗಳನ್ನು, ಪ್ರಶ್ನೆಗಳನ್ನು ಮುಂದಿಟ್ಟು ಸಂವಾದ ನಡೆಸುತ್ತಿದ್ದರು. ಈ ಸಂವಾದಗಳ ಸಂಗ್ರಹ ಪುಸ್ತಕಗಳಾಗಿಯೂ ಪ್ರಕಟವಾಗಿವೆ.  ಪ್ರಶ್ನೆ: ನಾನು ಬೃಂದಾವನಕ್ಕೆ ಹೋಗಿ ಶ್ರೀಕೃಷ್ಣನ ನಿಜ ರೂಪವನ್ನು ದರ್ಶಿಸಿದರೆ ನನ್ನ ಸಂಕಷ್ಟಗಳೆಲ್ಲ ನಿವಾರಣೆಯಾಗುತ್ತವೆಯೇ? ಅವನ ದರ್ಶನ ಪಡೆದು ನನ್ನೆಲ್ಲ ಭಾರವನ್ನೂ ಅವನಿಗೇ ವಹಿಸಬೇಕೆಂಬ ಇಚ್ಛೆಯಾಗಿದೆ! ರಮಣ ಮಹರ್ಷಿಗಳು : ಅದಕ್ಕೇನಂತೆ! ಹಾಗೆಯೇ ಮಾಡಬಹುದು. ಕೃಷ್ಣನ ದರ್ಶನ ಮಾಡಿದ ನಂತರ ನಮ್ಮ ಎಲ್ಲ ಭಾರವೂ ಅವನ ಮೇಲೆಯೇ ಇರುತ್ತದೆ. ಈಗ ಆ ಚಿಂತೆ ನಿಮಗೇಕೆ? […]

ಜ್ಞಾನಿಗಳ ಸ್ವಪ್ನ ವಿಚಾರ : ರಮಣಧಾರೆ

ರಮಣ ಮಹರ್ಷಿಗಳನ್ನು ಕಾಣಲು ಬಂದವರು ವಿವಿಧ ಆಧ್ಯಾತ್ಮಿಕ ವಿಚಾರಗಳನ್ನು, ಪ್ರಶ್ನೆಗಳನ್ನು ಮುಂದಿಟ್ಟು ಸಂವಾದ ನಡೆಸುತ್ತಿದ್ದರು. ಈ ಸಂವಾದಗಳ ಸಂಗ್ರಹ ಪುಸ್ತಕಗಳಾಗಿಯೂ ಪ್ರಕಟವಾಗಿವೆ.  ಪ್ರಶ್ನೆ:  ಜ್ಞಾನಿಗಳಿಗೆ ಸ್ವಪ್ನ ಉಂಟಾಗುವುದಿಲ್ಲವೆ? ರಮಣ ಮಹರ್ಷಿಗಳು : ಜ್ಞಾನಿಗೆ ಸ್ವಪ್ನ ಉಂಟಾಗುವುದಿಲ್ಲ. ಮಾತ್ರವಲ್ಲ, ಜಾಗ್ರತ್ತು (ಎಚ್ಚರ), ಸುಷುಪ್ತಿ (ತನಿನಿದ್ರೆ), ಸ್ವಪ್ನ (ಕನಸು) ಇವು ಮೂರೂ ಅವಸ್ಥೆಗಳು ಇಲ್ಲದ ಸ್ಥಿತಿ ಯಾವುದಿದೆಯೋ ಅದೇ ಜ್ಞಾನಿಯ ಯಥಾರ್ಥವಾದ ಸ್ಥಿತಿ. ಪ್ರಶ್ನೆ: ಜಾಗ್ರದವಸ್ಥೆಯೂ ಸಹ ಸ್ವಪ್ನಾವಸ್ಥೆಗೆ ಸಮಾನವೇ? ರಮಣ ಮಹರ್ಷಿಗಳು : ಹೌದು. ಅದು ಕೂಡಾ ಸ್ವಪ್ನಾವಸ್ಥೆಗೆ […]