ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ, ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ. ನಿಜಾರ್ಥದಲ್ಲಿ ಒಬ್ಬ ಬಂಡುಕೋರ, ಕ್ರಾಂತಿಕಾರಿ ಶರಣ, ನಿಷ್ಟೂರ ಮನುಷ್ಯ. ಎಲ್ಲಾ ಶರಣರಂತೆ ಈತ ಕಾಯಕಯೋಗಿ ದೋಣಿ ನಡೆಸುವುದು ಅವನ ಕಾಯಕವಾಗಿತ್ತು. ..
ಕಿನ್ನರಿ ಬ್ರಹ್ಮಯ್ಯನ ವಚನಗಳು
ಕಿನ್ನರಿ ಬ್ರಹ್ಮಯ್ಯನು ‘ಮಹಾಲಿಂಗ ತ್ರಿಪುರಾಂತಕ’ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದು, ಸದ್ಯ 18 ದೊರೆತಿವೆ. ಅವುಗಳಲ್ಲಿ ಮಹಾದೇವಿಯಕ್ಕನ ಜೊತೆಗೆ ನಡೆಸಿದ ಸಂವಾದ, ಶಿವನ ಮಹಿಮೆ, ಬಸವಾದಿ ಶರಣರ ವರ್ಣನೆ ಕಂಡುಬರುತ್ತದೆ. ಮಹಾದೇವಿಯಕ್ಕನ ವೈರಾಗ್ಯವನ್ನು ಒರೆಹಚ್ಚಿ ನೋಡಿದವನು ಎಂದು ಹೇಳಲಾಗಿದೆ । ಮಾಹಿತಿ ಕೃಪೆ : https://lingayatreligion.com/
ಢಕ್ಕೆಯ ಬೊಮ್ಮಣ್ಣನ 6 ವಚನಗಳು
ಢಕ್ಕೆಯ ಬೊಮ್ಮಣ್ಣ (ಅಥವಾ ಢಕ್ಕೆಯ ಮಾರಯ್ಯ)ನ ಆಯ್ದ ವಚನ ಚಿತ್ರಿಕೆಗಳು ಇಲ್ಲಿವೆ…
ಧೂಪದ ಗೊಗ್ಗವ್ವೆಯ 6 ವಚನಗಳು
ಶರಣೆ ಗೊಗ್ಗವ್ವೆಯ ವಚನಗಳನ್ನು ಇಲ್ಲಿ ನೀಡಲಾಗಿದೆ…
ಕಾಯಕ ಸಿದ್ಧಾಂತದ ರೂವಾರಿ ಆಯ್ದಕ್ಕಿ ಲಕ್ಕಮ್ಮ
ಕಾಯಕ ಸಿದ್ಧಾಂತವನ್ನು ಅಕ್ಷರಶಃ ಬದುಕಿದವಳು ಆಯ್ದಕ್ಕಿ ಲಕ್ಕಮ್ಮ. ಆಯ್ದಕ್ಕಿ ಲಕ್ಕಮ್ಮ ಕಾಯಕ ತತ್ವದಂತೆ ಅಕ್ಕಿ ಆಯ್ದು ತಂದು ಜೀವನ ಸಾಗಿಸುತ್ತಾಳೆ. ಕಾಯಕಕ್ಕೆ ಸಂಬಂಧಿಸಿದಂತೆ ಲಕ್ಕಮ್ಮನು ತನ್ನ ಗಂಡನಿಗೆ ಉಪದೇಶ ನೀಡುವ ಕೆಲಸ ಮಾಡುತ್ತಾಳೆ. ಒಂದು ವಿಧದಲ್ಲಿ ಗಂಡನಿಗೆ ತಾನೇ ‘ಗುರು’ವಾಗುತ್ತಾಳೆ. ಮಾರಯ್ಯ ಕಾಯಕವನ್ನು ಮರೆತಾಗ ಲಕ್ಕಮ್ಮನು ಎಚ್ಚರಿಕೆ ನೀಡಿ ಕಾಯಕಕ್ಕೆ ಕಳುಹಿಸುತ್ತಾಳೆ. ಈಕೆಯದೆಂದು ಹೇಳಲಾದ 25 ವಚನಗಳು ದೊರಕಿವೆ । ಮಾಹಿತಿ ಕೃಪೆ: https://lingayatreligion.com/
ಘಟ್ಟಿವಾಳಯ್ಯನ ವಚನಗಳು
ಶಿವ ಶರಣ, ವಚನಕಾರ ಘಟ್ಟಿವಾಳಯ್ಯನವರ 6 ವಚನಗಳು ಇಲ್ಲಿವೆ…
ಅಲ್ಲಮ – ಮುಕ್ತಾಯಿಯರ ‘ವಚನ ಸಂವಾದ’
ಅಲ್ಲಮ ಪ್ರಭು ಮಕ್ತಾಯಕ್ಕನನ್ನು ಪ್ರಕಾಶಗೊಳಿಸುವ ಮೊದಲು ಲಿಂಗೈಕ್ಯನಾದ ಅಜಗಣ್ಣನಿಗೆ ಭಕ್ತಿಪೂರ್ವಕ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಅನಂತರದಲ್ಲಿ ಮುಕ್ತಾಯಕ್ಕ ಅಲ್ಲಮಪ್ರಭುಗಳನ್ನು ಕುರಿತು “ಎನ್ನ ಅಜಗಣ್ಣ ತಂದೆಯನರಿದುಶರಣೆಂಬಾತ ನೀನಾರು ಹೇಳಯ್ಯಾ” ಎಂದು ಕೇಳಲಾಗಿ, ಅವರಿಬ್ಬರ ಸಂವಾದ ಈ ಕೆಳಗಿನಂತೆ ಸಾಗುತ್ತದೆ.
ಕಾಯಕವೇ ಕೈಲಾಸ : ಆಯ್ದಕ್ಕಿ ಮಾರಯ್ಯನ ವಚನ
ಕಾಯಕಕ್ಕೆ ನಮ್ಮ ಶರಣ ಪರಂಪರೆ ಕೊಟ್ಟ ಮಹತ್ವ ಅದ್ವಿತೀಯವಾದದ್ದು. ಕಾಯಕವೇ ಕೈಲಾಸ ಎಂಬ ಯುಗಘೋಷಣೆಯನ್ನು ನೀಡಿದ ವಚನದ ಪೂರ್ಣ ಪಾಠ ಹೀಗಿದೆ… ಕಾಯಕದಲ್ಲಿ ನಿರುತನಾದೊಡೆ ಗುರುದರ್ಶನವಾದಡೂ ಮರೆಯಬೇಕು ಲಿಂಗ ಪೂಜೆಯಾದಡೂ ಮರೆಯಬೇಕು ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು ~ ಇದು ಆಯ್ದಕ್ಕಿಮಾರಯ್ಯನವರ ವಚನ. ಶರಣ ಪರಂಪರೆಯು ಕಾಯಕಕ್ಕೆ ಕೊಟ್ಟ ಮಹತ್ವ ಅದ್ಭುತವಾದದ್ದು. ಅವರು ಪರಿಚಯಿಸಿದ ‘ಕಾಯಕ – ದಾಸೋಹ’ ತತ್ತ್ವ ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಆದರ್ಶಪ್ರಾಯವಾದದ್ದು. ಮಾರಯ್ಯ, ದಾರಿಯಲ್ಲಿ […]