ವಿವೇಕ ವಿಚಾರ : ಹೆದರಬೇಡಿ…ನಿರ್ಭೀತರಾಗಿರಿ!!

ಸಾಧನೆಯ ಹಾದಿಯಲ್ಲಿ ನಮಗೆ ದೊಡ್ಡ ಅಡ್ಡಿಯೆಂದರೆ ಭಯ. ನಾವು ನಿರ್ಭೀತರಾಗಿರಬೇಕು. ಆಗ ಮಾತ್ರ ನಮ್ಮ ಕೆಲಸ ಪರಿಪೂರ್ಣವಾಗುವುದು. ಮುಂದೆ ಏನಾಗುತ್ತದೆ ಎಂಬುದನ್ನೇ ಯೋಚಿಸುತ್ತಾ ಕುಳಿತುಕೊಂಡರೆ ಯಾವ ಕೆಲಸವೂ ಸಾಗುವುದಿಲ್ಲ. ಯಾವುದು ಸತ್ಯ, ಯಾವುದು ಸರಿ ಎಂದು ನೀವು ಖಚಿತವಾಗಿ ನಂಬಿದ್ದೀರೋ ಅದನ್ನು ಈ ಕ್ಷಣವೇ ಮಾಡಿಬಿಡಿ. ಮುಂದೆ ಏನಾಗುತ್ತದೆ, ಏನಾಗುವುದಿಲ್ಲ ಎಂದು ಯಾಕೆ ಯೋಚಿಸಬೇಕು? ಜೀವನವಿರುವುದು ಕೆಲವೇ ವರ್ಷಗಳ ಕಾಲ ಮಾತ್ರ. ಅದರಲ್ಲಿ ಫಲಾಫಲಗಳನ್ನು ಎಣಿಸುತ್ತಾ ಯಾರಾದರೂ ಕೆಲಸ ಮಾಡುವುದು ಸಾಧ್ಯವೇ? ಆದ್ದರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ […]

ವಿವೇಕ ವಿಚಾರ: ಆತ್ಮವಿಶ್ವಾಸದ ಅನಂತ ಶಕ್ತಿ

ನಮಗೆ ಇಂದು ಬೇಕಾಗಿರುವುದು ಶಕ್ತಿ. ಅದಕ್ಕಾಗಿಯೇ ಆತ್ಮವಿಶ್ವಾಸವಿರಲಿ. ನಾವು ದುರ್ಬಲರಾಗಿರುವೆವು. ಅದಕ್ಕಾಗಿಯೇ ಈ ರಹಸ್ಯ, ಈ ಮಾಯಮಂತ್ರಗಳೆಲ್ಲ ನಮ್ಮನ್ನು ಆವರಿಸಿರುವವು. ಮೊದಲು ನಿಮ್ಮ ನರಗಳನ್ನು ದೃಢಗೊಳಿಸಿಕೊಳ್ಳಿ. ನಮಗೆ ಇಂದು ಬೇಕಾಗಿರುವುದು ಕಬ್ಬಿಣದಂಥ ಮಾಂಸಖಂಡಗಳು, ಉಕ್ಕಿನಂತಹ ನರಗಳು. ನಾವು ಬೇಕಾದಷ್ಟು ಅತ್ತಿರುವೆವು. ಇನ್ನು ಸಾಕು. ನಿಮ್ಮ ಕಾಲಿನ ಮೇಲೆ ನಿಂತು ಪುರುಷಸಿಂಹರಾಗಿ. ನಮಗೆ ಇಂದು ಬಹಳ ಮುಖ್ಯವಾಗಿ ಬೇಕಾಗಿರುವುದು ಶ್ರದ್ಧೆ. ದುರದೃಷ್ಟವಶಾತ್ ಅದು ಇಂದು ಮುಕ್ಕಾಲುಪಾಲು ಮರೆಯಾಗಿದೆ. ಅದಕ್ಕಾಗಿಯೇ ನಾವು ಇಂತಹ ಅಧೋಗತಿಗೆ ಬಂದಿರುವುದು. ಯಾವುದೇ ವ್ಯಕ್ತಿಯನ್ನು ಉನ್ನತಿಗೇರಿಸುವುದು […]

ಒಂದರಲ್ಲೇ ಶ್ರದ್ಧೆ ಇಟ್ಟು ಪ್ರಯತ್ನಿಸಿದರೆ ಸಾಧನೆ ನಿಶ್ಚಿತ

ಯಾರು ನಿಜವಾಗಿಯೂ ಯೋಗಿಗಳಾಗಬೇಕೆಂದು ಬಯಸುವರೋ ಅವರು ಎಲ್ಲವನ್ನೂ ಸ್ವಲ್ಪ ಸ್ವಲ್ಪ ರುಚಿ ನೋಡುವ ಅಭ್ಯಾಸವನ್ನು ಒಂದೇ ಸಲ ಬಿಟ್ಟಬಿಡಬೇಕು. ಒಂದು ಭಾವನೆಯನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ, ಅದನ್ನೇ ಆಲೋಚನೆ ಮಾಡಿ. ಅದನ್ನೇ ಕನಸು ಕಾಣಿ. ಆ ಒಂದು ಭಾವನೆಗಾಗಿ ನಿಮ್ಮ ಬಾಳನ್ನೆಲ್ಲ ಸವೆಸಿ; ಮೆದುಳು, ಮಾಂಸಖಂಡಗಳು, ನರಗಳು ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗವೂ ಕೂಡಾ ಆ ಭಾವದಿಂದ ತುಂಬಿ ತುಳುಕಾಡಲಿ. ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಡಿಗೆ ಬಿಡಿ. ಜಯ ಪಡೆಯುವುದಕ್ಕೆ ಇದೊಂದೇ […]

ನಾಗರಿಕತೆ ಮತ್ತು ಸ್ವಾತಂತ್ರ್ಯ

ಭೌತಿಕ ವಿಷಯವನ್ನು ಆಧರಿಸಿದ ನಾಗರಿಕತೆಗೆ ವಿರೋಧವಾಗಿ ನಾವು ಬಹಳ ಮಾತನಾಡುತ್ತೇವೆ. ಕೈಗೆ ಸಿಗದ ದ್ರಾಕ್ಷಿ ಹಣ್ಣು ಹುಳಿಯೇ ಸರಿ ಎನ್ನುವಂತೆ! ಈ ಹುಚ್ಚು ಮಾತನ್ನು ನಾವೊಮ್ಮೆ ಒಪ್ಪಿಕೊಂಡರೂ ಕೂಡ; ಭರತ ಖಂಡದಲ್ಲೆಲ್ಲ ಒಂದು ಲಕ್ಷ ಆಧ್ಯಾತ್ಮಿಕ ನಿಷ್ಠೆಯುಳ್ಳ ಸ್ತ್ರೀ – ಪುರುಷರು ಇರುತ್ತಾರೆ ಎಂದುಕೊಳ್ಳೋಣ. ಈ ಅಲ್ಪ ಮಂದಿಯ ಆಧ್ಯಾತ್ಮಿಕ ಉ್ನತಿಗೋಸ್ಕರ ಮೂವತ್ತು ಕೋಟಿ ಜನರು ಅನಾಗರಿಕರಾಗಬೇಕೇನು? ಯಾವನೇ ಆಗಲಿ, ಅವನು ಉಪವಾಸದಿಂದ ಏಕೆ ನರಳಬೇಕು? ಬಾಹ್ಯ ಸಂಪತ್ತು ಮಾತ್ರವಲ್ಲದೆ, ಭೋಗವೂ ಕೂಡ ಬಡವನಿಗೆ ಕೆಲಸವನ್ನು ಒದಗಿಸಲು […]