ಪಿತೃಪಕ್ಷ – ಮಹಾಲಯ ಅಮಾವಾಸ್ಯೆ ಆಚರಣೆ ಮತ್ತು ವೈಚಾರಿಕತೆ

ಜಗತ್ತು, ಜನ ಜೀವನ ಕೇವಲ ವಿಜ್ಞಾನ ಅಥವಾ ವಿಚಾರದ ಮೇಲೆ ನಡೆಯುತ್ತಿಲ್ಲ. ಭಾವನೆಗಳು, ಸಂಸ್ಕೃತಿ, ಸಾಹಿತ್ಯ ಎಲ್ಲವೂ ಸೇರಿ ಮನುಷ್ಯ ಜೀವನ ರೂಪುಗೊಂಡಿದೆ. ಆದರೆ, ಸಂಪ್ರದಾಯದ ಹೆಸರಲ್ಲಿ ಆಚರಣೆಗಳನ್ನು ನಡೆಸುವಾಗ ಬದಲಾದ ಕಾಲಮಾನಕ್ಕೆ ತಕ್ಕಂತೆ ಸೂಕ್ಷ್ಮತೆ ಬೆಳೆಸಿಕೊಂಡು ಸಾಧ್ಯವಾದಷ್ಟೂ ಮತ್ತೊಬ್ಬರಿಗೆ ಯಾವುದೇ ಬಗೆಯಲ್ಲಿ ತೊಂದರೆಯಾಗದ ಹಾಗೆ ಆಚರಿಸುವುದು ಕೂಡಾ ಮುಖ್ಯ ~ ಚಿತ್ಕಲಾ “ಪಿತೃಪಕ್ಷ ಆಚರಣೆ, ಮಹಾಲಯ ಅಮಾವಾಸ್ಯೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎನ್ನುವ ಪ್ರಶ್ನೆ ಅರಳಿ ಬಳಗಕ್ಕೆ 692 ಇಂದ ಕೊನೆಯಾಗುವ ಮೊಬೈಲ್ ಸಂಖ್ಯೆಯಿಂದ ಬಂದಿದೆ. ಇದಕ್ಕೆ […]

ಒಂದು ವರ್ಷ ಪೂರೈಸಿದ ‘ಅರಳಿಮರ’ : ಓದುಗರಿಗೆ ವಂದನೆ ಮತ್ತು ನಿವೇದನೆ

ನಮಸ್ಕಾರ. ಕಳೆದ ಶಿವರಾತ್ರಿ ಜಾಗರಣೆಯಂದು (ಫೆ.13ರ ನಡು ರಾತ್ರಿ) ಲೋಕಾರ್ಪಣೆಗೊಂಡ ಅರಳಿಮರ ಜಾಲತಾಣಕ್ಕೆ ವರ್ಷ ತುಂಬಿದೆ. ವರ್ಷ ಪೂರ್ತಿ ಒಂದು ದಿನವೂ ತಪ್ಪದಂತೆ ಲೇಖನಗಳನ್ನು ಪ್ರಕಟಿಸುವ ಉತ್ಸಾಹ ಮತ್ತು ಬಲ ತುಂಬಿದ್ದು ನೀವು. ಹೀಗೆ, ಈವರೆಗೆ ನಾವು ಪ್ರಕಟಿಸಿದ ಲೇಖನಗಳ ಸಂಖ್ಯೆ 1,250 ದಾಟಿದೆ. ಈ ಸಂದರ್ಭದಲ್ಲಿ ಜಾಲತಾಣದ ವಿನ್ಯಾಸವನ್ನು ಬದಲಿಸುವ ಪ್ರಯತ್ನ ಮಾಡಿದ್ದೇವೆ. ವಿಡಿಯೋಗಳು, ಚಿತ್ರಿಕೆಗಳು ಸುಲಭವಾಗಿ ಸಿಗುವಂತೆ ರೂಪಿಸಲಾಗಿದೆ. ಈ ಬದಲಾವಣೆ ನಿಮಗೆ ಇಷ್ಟವಾಗುವುದೆಂಬ ನಂಬಿಕೆ ನಮ್ಮದು. ಮುಂದಿನ ದಿನಗಳಲ್ಲಿ ಜಾಲತಾಣದ ಸ್ವರೂಪ ಮತ್ತಷ್ಟು […]

‘ಧರ್ಮ’ ಪದ ಬಳಕೆಗೆ ಮಿತಿ ಬೇಕೆ? ಅರ್ಥ ವಿಶಾಲವಾಗಿದೆ… : ಅರಳಿಮರ ಸಂವಾದ

ಇವುಗಳನ್ನು ‘ಮತ’ವೆಂದು ಕರೆಯಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ‘ಮತ’ದ ಅರ್ಥ ಅಭಿಪ್ರಾಯ ಎಂದಾಗುತ್ತದೆ. ಪಂಥ ಎಂದರೆ ಬಣ. ಒಂದು ನಿರ್ದಿಷ್ಟ ಗುಂಪು. ಹಾಗೆ ಪದಶಃ ಅರ್ಥ ಸೀಳುತ್ತಾ ಹೋದರೆ ಈ ಮೇಲೆ ಹೇಳಿದ ಸಮುದಾಯಗಳನ್ನು ಯಾವ ಹೆಸರಿಂದಲೂ ನಿರ್ದೇಶಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ‘ಧರ್ಮ’ ಅನ್ನುವ ಬಹುರೂಢಿಯ ಪದವನ್ನೇ ಬಳಸಲು ಮಡಿವಂತಿಕೆ ಬೇಕಿಲ್ಲ ~ ಗಾಯತ್ರಿ ನಿರ್ದಿಷ್ಟ ದೇವರು, ಆಚಾರ – ವಿಚಾರ, ನಿರ್ದಿಷ್ಟ ಗ್ರಂಥದ ಪ್ರಕಾರ ಆಚರಣೆ ನಡೆಸಿ ಅದರ ಮೂಲಕ ಒಂದು ಪಂಥವಾಗಿ ಗುರುತಿಸಿಕೊಳ್ಳುವುದು […]

ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ನಿಷೇಧ ಪ್ರಾಚೀನ ಸಂಪ್ರದಾಯವಲ್ಲ : ಅರಳಿಮರ ಸಂವಾದ

ಶಬರಿಮಲೈ ದೇಗುಲ ಪ್ರವೇಶ ನಿಷೇಧ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅರಳಿ ಬಳಗ ಸಂವಾದಕ್ಕೆ ಚಾಲನೆ  ನೀಡಿತ್ತು. ಈ ನಿಟ್ಟಿನಲ್ಲಿ ಅಪ್ರಮೇಯ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು (ಕೊಂಡಿ ಇಲ್ಲಿದೆ: https://aralimara.com/2018/10/01/samvada-6/ ) ಸಂವಾದದ ಮುಂದುವರಿಕೆಯಾಗಿ ಲೀಲಾ ಹರಕೆರೆ ತಮ್ಮ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.   ಶಬರಿಮಲೈ ದೇಗುಲಕ್ಕೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ‘ಅರಳಿಮರ’ ಸಂವಾದ ಗಮನಿಸಿದೆ. ಅಪ್ರಮೇಯ ಅವರು ಬರೆದಿರುವ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಅದೇ ವೇಳೆಗೆ, ನಾವು […]

ದೇಗುಲಗಳಿಗೆ ಪ್ರವೇಶ ನಿಷೇಧವೇ ಧರ್ಮ ಬಾಹಿರ : ಅರಳಿಮರ ಸಂವಾದ

ಮಹಿಳೆಯರು ಕೆಲವು ದೇವಾಲಯಗಳನ್ನು ಪ್ರವೇಶಿಸುವದಕ್ಕೆ ನಿಷೇಧವೇಕೆ? ಈ ಪ್ರಶ್ನೆ ‘ಶಬರಿಮಲೆ ತೀರ್ಪು’ ಹಿನ್ನೆಲೆಯಲ್ಲಿ ಮತ್ತೆ ಚಾಲ್ತಿಗೆ ಬಂದಿದೆ. ಈ ಚರ್ಚೆಯ ಜಾಡು ಹಿಡಿದು ನಾವು ತಿಳಿಯ ಬೇಕಾದ ಸಾಕಷ್ಟು ಸಂಗತಿಗಳಿವೆ. ಹಲವು ಆಯಾಮಗಳಿಂದ ನಾವು ಇದನ್ನು ನೋಡಬೇಕಾಗಿದೆ. ಈ ನಿಟ್ಟಿನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬಹಳ ಮನೋಜ್ಞವಾಗಿ ಮತ್ತು ಆಧಾರಗಳೊಡನೆ ಬರೆಯುವ ಅಧ್ಯಾತ್ಮಾಸಕ್ತಿಯ ಯುವಕ ಅಪ್ರಮೇಯ ಅವರ ಸ್ಪಂದನೆಯನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ನೀವೂ ಈ ಚರ್ಚೆಯನ್ನು ಮುಂದುವರಿಸಬಹುದು. ಅರಳಿಬಳಗವೂ ಇದನ್ನು ಮುನ್ನಡೆಸಲಿದೆ.  ನಿಮ್ಮ ಸ್ಪಂದನೆಯನ್ನು aralimara123@gmail.comಗೆ mail ಮಾಡಿ. […]

ಸಂಬಂಧಗಳಲ್ಲಿ ನಿರೀಕ್ಷೆಯನ್ನು ಹೇರುವುದು ಮೂರ್ಖತನವಷ್ಟೆ

ಗೆಳೆತನವೊಂದು ಅಕಾಲ ಮರಣವನ್ನಪ್ಪೋದಕ್ಕೆ ಕಾರಣವೇನು? ಓಶೋ ಹೇಳುತ್ತಾರೆ, `ಹತಾಶೆ ನಿರೀಕ್ಷೆಯ ನೆರಳೇ ಆಗಿದೆ’ ಎಂದು. ಇಲ್ಲಿಯೂ ಸಂಭವಿಸಿದ್ದು ನಿರೀಕ್ಷೆಯ ಪ್ರತಿಫಲವೇ ಹೊರತು ಇನ್ನೇನಲ್ಲ. ಒಂದು ವಿಷಯದ ಮೇಲೆ ಸಮಾನ ಅಭಿಪ್ರಾಯಗಳನ್ನು ಹೊಂದಿದ್ದ ತಕ್ಷಣ ಎಲ್ಲ ಸಂಗತಿಗಳನ್ನೂ ಒಪ್ಪಿಬಿಡಬೇಕು ಎಂಬ ನಿರೀಕ್ಷೆ ಅವರಿಬ್ಬರ ನಡುವಿನ ಗೆಳೆತನವನ್ನು ಕೊನೆಗೊಳಿಸಿಬಿಡುತ್ತದೆ ~ ಸುನೈಫ್ ಯಾವುದೋ ಒಂದು ಮದುವೆ ಕಾರ್ಯಕ್ರಮದಲ್ಲಿ ಅಥವಾ ಇನ್ಯಾವುದೋ ವೈಚಾರಿಕ ಚರ್ಚೆ ನಡೆಯುವ ಕಾರ್ಯಕ್ರಮದಲ್ಲಿ ಅಪರಿಚಿತರೊಬ್ಬರಿಬ್ಬರ ಪರಿಚಯವಾಗುತ್ತದೆ. ಕುಶಲೋಪರಿ ಮುಗಿಯುವಾಗ ಗೆಳೆತನದ ಹೊಸ್ತಿಲಲ್ಲಿ ನಿಂತಿರುತ್ತಾರೆ. ಆ ಸಲುಗೆಯಲ್ಲಿ ಮುಂದಿನ ದಿನಗಳಲ್ಲಿ […]