ಗಾಂಧಾರಿಯ ತಪ್ಪುಗಳಿಂದ ನಾವು ಕಲಿಯಬೇಕಾದ ಪಾಠಗಳು

ನಾವೂ ಗಾಂಧಾರಿಯಂತೆ ಒಳಗಣ್ಣಿನ ಕುರುಡುತನಕ್ಕೆ ಪಕ್ಕಾಗಿದ್ದೇವೆ. ನಮ್ಮ ಕ್ರಿಯೆಪ್ರಕ್ರಿಯೆಗಳ ಪರಿವೆಯೇ ಇಲ್ಲದಂತೆ, ನಮ್ಮ ತಪ್ಪುಗಳ ಅರಿವೇ ಆಗದಂತೆ ನಡೆಯುತ್ತಿರುತ್ತೇವೆ. ನಮ್ಮ ಬಹಳಷ್ಟು ಮೂರ್ಖ ನಿರ್ಧಾರಗಳಿಗೆ ಕಾರಣ ಇದೇ ಆಗಿದೆ  ~ ಗಾಯತ್ರಿ ದೇಹಕ್ಕೆ ಸಂಬಂಧಿಸಿದ ಕುರುಡುತನ ಬೇರೆ, ಬುದ್ಧಿಗೆ ಸಂಬಂಧಿಸಿದ ಕುರುಡುತನವೇ ಬೇರೆ. ಕಣ್ಣು ಕುರುಡಿದ್ದರೂ ಒಳಗಣ್ಣು ತೆರೆದುಕೊಂಡು ಆ ಮೂಲಕವೇ ಬದುಕು ಕಟ್ಟಿಕೊಂಡಿರುವ ಎಷ್ಟೊಂದು ಜನರು ನಮ್ಮ ನಡುವೆ ಇದ್ದಾರೆ. ಪುರಾಣೇತಿಹಾಸಗಳಲ್ಲೂ ಆಗಿಹೋಗಿದ್ದಾರೆ. ಆದರೆ ಒಳಗಣ್ಣಿನ ಕುರುಡಿನಿಂದಾಗಿ ದಿನ ನಿತ್ಯವೂ ದಾರಿ ತಪ್ಪುತ್ತ, ಎಡವಿ ಬೀಳುತ್ತ […]