ಮಾಸ್ತಿಯವರ ಅಂತರಗಂಗೆಯಿಂದ ~ ಉಪನಿಷತ್ತುಗಳ ಪ್ರಾರ್ಥನೆ

ಈ ಉಪನಿಷತ್ತುಗಳನ್ನು ರಚಿಸಿದವರೂ ಋಷಿಗಳೇ. ಇವರು ಜನಸಾಮಾನ್ಯರು ಆವರೆಗೆ ಕಲಿತಿದ್ದ ವಿದ್ಯೆಯನ್ನು ಅಪರಾ ವಿದ್ಯೆ ಎಂದು ಕರೆದರು. ತಾವು ಉಪಾಸನೆ ಮಾಡಿದ ಹೊಸ ವಿದ್ಯೆಯನ್ನು ಪರಾ ವಿದ್ಯೆ ಎಂದು ಕರೆದರು. ವೇದಗಳ ಕಾಲ ನಮ್ಮ ಪೂರ್ವಿಕರ ಬೆಳವಣಿಗೆಯ ಆರಂಭದ ಕಾಲ. ಜಾಣ ಜನ ಲೋಕವನ್ನು ನೋಡಿ, ಅದರ ಚೆಲುವಿಗೆ ಮನ ಕೊಟ್ಟು, ಪ್ರಕೃತಿಯ ಹಿಂದಿನ ದೈವೀ ಶಕ್ತಿಯ ಇದಿರಲ್ಲಿ ಮಣಿದು, ಶುಭವನ್ನು ಬೇಡಿ, ಅದನ್ನು ತಕ್ಕಷ್ಟು ಪಡೆದು, ಅನುಭವಿಸಿ, ಸಂತೋಷದಿಂದ ಹಾಡಿದ ಕಾಲ. ಇಷ್ಟು ಸಂತೋಷವನ್ನು ಅನುಭವಿಸಲು […]

ಅಧ್ಯಾಯ 1 : ವೇದಗಳು ~ ಹಿರಣ್ಯಗರ್ಭ ಸ್ತುತಿ (ಭಾಗ 3)

ಪ್ರಾಚೀನ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪರಿಚಯಿಸು ಈ ಸರಣಿಯಲ್ಲಿ ಇದು ಮೂರನೆಯ ಕಂತು. ಕಳೆದೆರಡು ಕಂತುಗಳಲ್ಲಿ ಸಂಹಿತೆಗಳ ಕಿರುಪರಿಚಯವಾಯಿತು. ಈ ಸಂಚಿಕೆಯಲ್ಲಿ ಮಾಸ್ತಿಯವರ ಅಂತರಗಂಗೆ ಕೃತಿಯಿಂದ ‘ವೇದೋಕ್ತ ಹಿರಣ್ಯಗರ್ಭ ಸ್ತುತಿ’ಯನ್ನು ನೀಡಲಾಗಿದೆ. ಆರಂಭದಲ್ಲಿ ಹಿರಣ್ಯಗರ್ಭನು ಜನಿಸಿದನು. ಜನಿಸಿದವನು ಎಲ್ಲದರ ಏಕಪ್ರಭು ಆದನು. ಪೃಥಿವಿಯನ್ನೂ ಅಂತರಿಕ್ಷವನ್ನೂ ಧರಿಸಿದನು. ಅವನು ಆತ್ಮದಾತ, ಬಲದಾತ. ಅವನ ಆಜ್ಞೆಯನ್ನು ವಿಶ್ವ ನಡೆಸುತ್ತದೆ. ದೇವತೆಗಳೂ ನಡೆಸುತ್ತಾರೆ. ಅಮರತ್ವ ಅವನ ನೆರಳು. ಮೃತ್ಯು ಕೂಡಾ ಅವನ ನೆರಳೇ. ಉಸಿರಾಡುವ, ಎವೆಯಿಕ್ಕುವ, ಜಗತ್ತಿಗೆ ಅವನು ತನ್ನ ಮಹಿಮೆಯ […]

ಮಾಸ್ತಿಯವರ ಅಂತರಗಂಗೆಯಿಂದ; ವೇದ – ಸಂಹಿತೆಗಳು ~ ಭಾಗ 2

ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರ ಪರಿಚಯ ಸರಣಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಅಂತರಗಂಗೆ’ ಕೃತಿಯ ಆಯ್ದ ಅಧ್ಯಾಯಗಳನ್ನು ಪ್ರಕಟಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೊದಲ ಕಂತು ವೇದಗಳ ಪರಿಚಯ. ಈ ಸಂಚಿಕೆಯಲ್ಲಿ ಸಂಹಿತೆಗಳ ಬಗೆಗಿನ ಲೇಖನದ ಎರಡನೇ ಕಂತನ್ನು ನೀಡಲಾಗಿದೆ. ಮೊದಲ ಕಂತಿನ ಕೊಂಡಿ ಇಲ್ಲಿದೆ : https://aralimara.com/2018/05/21/masti1/ ಅಧ್ಯಾಯ 1 : ವೇದಗಳು ~ ಸಂಹಿತೆಗಳು (ಭಾಗ 2) ಸೃಷ್ಟಿಯ ಸೊಬಗಿಗೆ ನಮ್ಮ ಪೂರ್ವಿಕರು ಹೇಗೆ ಮನಸೋತಿದ್ದರು ಎನ್ನುವುದು ಇವರಲ್ಲಿ ಒಬ್ಬ ಋಷಿ ರಚಿಸಿದ ಈ […]