ಬಸ್ಯ, ಸಿಂಗ ಮತ್ತು ಅಗಸನ ಕಲ್ಲು : ಒಂದು ಜನಪದ ಕಥೆ

ಒಂದೂರಲ್ಲಿ ಒಬ್ಬ ಅಗಸ ಇದ್ದ. ಅವನ ಹೆಸ್ರು ಬಸ್ಯ. ಅವನ ಸಂಗಾತಿ ಸಿಂಗ, ಅವನ ನೆಚ್ಚಿನ ಕತ್ತೆಯೇ ಆಗಿತ್ತು. ಯಾವಾಗ್ಲೂ ಬಸ್ಯನ ಹಿಂದೆ ಸಿಂಗ, ಸಿಂಗನ ಮುಂದೆ ಬಸ್ಯ ಇರ್ಲೇಬೇಕು. ಹಾಂಗಿತ್ತು ಅವರ ದೋಸ್ತಿ. ಒಂದಿನ ಬಸ್ಯ ಮತ್ತು ಸಿಂಗ ಅದೆಲ್ಲಿಗೂ ದೂರದೂರಿಗೆ ಹೊರಟ್ರು. ಹೋಗ್ತಾ ಹೋಗ್ತಾ ಕತ್ಲಾಯ್ತಾ, ಸರಿ. ಒಂದ್ ಮರದ್ ಕೆಳಗೆ ಅಡ್ಡಾದ್ರು. ಸಿಂಗ ತನ್ ಯಜಮಾನನ್ನ “ಒಂದ್ ಕಥೆ ಹೇಳು…. ಒಂದ್ ಕಥೆ ಹೇಳು” ಅಂತ ಪೀಡಿಸ್ದ. ಆದ್ರೆ ಅಗಸಂಗೆ ಅದಾಗ್ಲೇ ಕಣ್ಣು […]

ನಮ್ಮದಲ್ಲದ ಕೆಲಸವನ್ನು ಮಾಡಿದರೆ ಇದೇ ಗತಿ!

ಅದೊಂದು ಅಗಸನ ಮನೆ. ಅಲ್ಲೊಂದು ಕತ್ತೆ, ಮತ್ತೆ ಮತ್ತೊಂದು ನಾಯಿ. ಒಂದು ರಾತ್ರಿ ಆ ಮನೆಗೆ ಕಳ್ಳ ಬರ್ತಾನೆ. ಕತ್ತೆಗೆ ಎಚ್ಚರ ಆಗತ್ತೆ. ನಾಯಿಯನ್ನ ತಿವಿದು, “ಏಯ್! ಕಳ್ಳ ಬಂದಿದಾನೆ, ಕೂಗು. ಅಗಸನ್ನ ಎಬ್ಬಿಸು…” ನಾಯಿ ಗೊಣಗುತ್ತೆ. “ಉಹು… ಅಂವ ಸರಿಯಾಗಿ ಅನ್ನ ಹಾಕೋದೇ ಇಲ್ಲ. ನಿನಗಂತೂ ಅಷ್ಟು ದುಡಿದು ಪೆಟ್ಟು ತಿನ್ನೋದೇ ಕೆಲ್ಸ. ತೆಪ್ಪಗೆ ಬಿದ್ದುಕೋಬಾರದಾ?” ಪಾಪ ಕತ್ತೆ, ನಾನೇ ಎಬ್ಬಿಸ್ತೀನಿ ಅಂದುಕೊಂಡು ಜೋರಾಗಿ ಕೂಗಿಕೊಳ್ಳುತ್ತೆ. ಕತ್ತೆಯ ಕಿರುಚಾಟಕ್ಕೆ ಹೆದರಿ ಕಳ್ಳ ಓಡಿಹೋಗ್ತಾನೆ. ಅಗಸಂಗೆ ಎಚ್ಚರವಾಗಿಬಿಡತ್ತೆ. […]