ಅಗ್ನಿ | ಭಾರತೀಯ ಪೌರಾಣಿಕ ಪಾತ್ರಗಳು ~ 1

ಭಾರತೀಯ ಪೌರಾಣಿಕ ಪಾತ್ರಗಳ ಕಿರುಪರಿಚಯ ಸರಣಿ, ಇಂದಿನಿಂದ…. ಶಿವ ಭಕ್ತ ವೈಶ್ವಾನರನಿಗೆ ಶುಚಿಷ್ಮತಿ ಎಂಬ ಪತ್ನಿಯಲ್ಲಿ ಜನಿಸಿದ ಪುತ್ರನೇ ಅಗ್ನಿ. ಈತ ಶಿವನ ವರಪ್ರಸಾದವಾಗಿದ್ದರೂ ಬಾಲಾರಿಷ್ಟ ದೋಷದಿಂದ ಕೂಡಿದ್ದ. ಇದರಿಂದ ಪಾರಾಗಲು ಮಹಾದೇವನ ಮೊರೆಯನ್ನೇ ಹೋಗಬೇಕೆಂದು ನಾರದರು ತಿಳಿಸಲಾಗಿ ಸುದೀರ್ಘ ತಪಸ್ಸು ಕೈಗೊಂಡ. ದೇವರಾಜ ಇಂದ್ರ ವೈಶ್ವಾನರ ಪುತ್ರನ ತಪಸ್ಸಿನಿಂದ ಕನಲಿದ. ಅವನ ಬಳಿ ಬಂದು, “ನಿನಗೇನು ಬೇಕೋ ಕೊಡುತ್ತೇನೆ, ತಪಸ್ಸು ಸಾಕುಮಾಡು” ಎಂದು ಹೇಳಿದ. ಅದಕ್ಕೆ ಅವನು ಒಪ್ಪದಿರಲು, ಕೋಪದಿಂದ ವಜ್ರಾಯುಧ ಪ್ರಹಾರ ಮಾಡಿದ. ಆಗ […]

ಬೆಂಕಿಯೊಳಗುಳ್ಳ ಗುಣ ಬಿಸಿ ನೀರಲುಂಟೇ? : ಅಲ್ಲಮನ ವಚನ

ತೋರಿಕೆಯ ಆಚರಣೆಗಳಿಂದೇನು ಫಲ? ಕ್ಷಣವೋ, ಅರೆ ಕ್ಷಣವೋ… ಶ್ರದ್ಧಾಭಕ್ತಿಯಿಂದ ಮನದುಂಬಿ ಭಗವಂತನನ್ನು ನೆನೆದರೆ ಸಾಕು ಅನ್ನುತ್ತಾನೆ ಅಲ್ಲಮ ಪ್ರಭುದೇವ.  ನಮಗೆ ತೋರುಗಾಣಿಕೆಯ ಆಚರಣೆಯಲ್ಲೇ ಹೆಚ್ಚಿನ ಆಸಕ್ತಿ. ಪೂಜೆಯನ್ನು ವೈಭವದಿಂದ ಮಾಡುತ್ತೇವೆ. ಅದ್ದೂರಿಯ ಅಲಂಕಾರ ಮಾಡುತ್ತೇವೆ. ಜಪಮಣಿಯನ್ನು ಎಲ್ಲರಿಗೂ ಕಾಣುವಂತೆ ತಿರುಗಿಸುತ್ತಾ ಕೂರುತ್ತೇವೆ. ಸಂಕೇತಗಳನ್ನು ಧರಿಸುತ್ತೇವೆ. ಇವೆಲ್ಲದರಿಂದ ಪ್ರಯೋಜನವೇ ಇಲ್ಲವೆಂದಲ್ಲ. ತೋರುಗಾಣಿಕೆಯಿಂದ ಮಾಡಿದರೂ ಈ ಎಲ್ಲ ಪ್ರಕ್ರಿಯೆಯಲ್ಲಿ ಭಗವಂತನ ಹೆಸರನ್ನು ಕೊನೆಪಕ್ಷ ಉಚ್ಚರಿಸುತ್ತ ಇರುತ್ತೇವಲ್ಲ… ಅಷ್ಟೋ ಇಷ್ಟೋ ಫಲ ದೊರಕುತ್ತದೆ. ಈ ಫಲ ಬಿಸಿನೀರಿಗೆ ಸಮನಷ್ಟೆ.  ಆದರೆ, ಕ್ಷಣವೋ, […]