ಅಹಂಕಾರ ಮತ್ತು ಅಹೋಭಾವ…

ಅಹಂಕಾರಕ್ಕೆ ವಿರುದ್ಧವಾದುದು ಅಹೋಭಾವ. ಇಲ್ಲಿ ನಾನು ಅನ್ನುವ ಪ್ರಶ್ನೆಯೇ ಇರುವುದಿಲ್ಲ. ಮಹತ್ತು ಮಾತ್ರ ಇದೆ, ಅದು ಎಲ್ಲವನ್ನೂ ವ್ಯಾಪಿಸಿಕೊಂಡಿದೆ ಎನ್ನುವ ಚಿಂತನೆ. ~ ವಿದ್ಯಾಧರ ಅಹಂಕಾರ – ಅಹೋಭಾವಕ್ಕೆ ತದ್ವಿರುದ್ಧವಾದದ್ದು. ‘ಅದ್ವೈತವಳಿದು ಅಹಂಕಾರಿಯಾದೆ…’ ಯಾವಾಗ ನಮ್ಮಲ್ಲಿ ಭಗವಂತನೊಂದಿಗಿನ ತಾದಾತ್ಮ್ಯ, ಗುರುತು ಮರೆಯುತ್ತದೆಯೋ ಆಗ ನಾವು ಅಹಂಕಾರಿಯಾಗುತ್ತೇವೆ. ಅಹಂಕಾರಿ ಅಂದ್ರೆ ನಾವು ತಿಳಿದಿರುವ ಹಾಗೆ ಅರೋಗೆನ್ಸ್, ಕೊಬ್ಬು, ಇತ್ಯಾದಿಯಲ್ಲ. ಆಧ್ಯಾತ್ಮಿಕ ಅರ್ಥದಲ್ಲಿ ಅಹಂಕಾರ ಅಂದ್ರೆ ‘ಈ ದೇಹವೇ ನಾನು’ ಅನ್ನುವ ಭ್ರಮೆ. ನಾನು ಇಂಥವರ ಮಗ, ಇಂಥ ಹೆಸರುಳ್ಳ […]