ಧ್ಯಾನದ ದಾರಿ : ಜಿಡ್ಡು ಚಿಂತನೆ

ಮನಸ್ಸು ನಿಶ್ಚಲವಾಗಿದ್ದಾಗ ಮಾತ್ರ ಗ್ರಹಿಕೆ ಸಾಧ್ಯ, ಮತ್ತು ತನ್ನ ಬಗ್ಗೆ ಅರಿವು ಸಾಧ್ಯವಾಗದವರೆಗೆ ಮನಸ್ಸಿಗೆ ನಿಶ್ಚಲವಾಗಿರುವುದು ಸಾಧ್ಯವಿಲ್ಲ. ಈ ಅರಿವು ರಹಿತ ಸ್ಥಿತಿಯನ್ನ ಯಾವ ಶಿಸ್ತಿನಿಂದ , ಯಾವ ಹಳೆಯ ಅಥವಾ ಆಧುನಿಕ ಅಥಾರಿಟಿಯನ್ನ ಅನುಸರಿಸುವುದರಿಂದ ಹೋಗಲಾಡಿಸುವುದು ಸಾಧ್ಯವಿಲ್ಲ. ನಂಬಿಕೆ ಕೇವಲ ಪ್ರತಿರೋಧ ಮತ್ತು ಪ್ರತ್ಯೇಕತೆಯನ್ನ ಹುಟ್ಟುಹಾಕುತ್ತದೆ ಮತ್ತು ಪ್ರತ್ಯೇಕತೆಯ ಹಾಜರಾತಿಯಲ್ಲಿ ಪ್ರಶಾಂತತೆ ನೆಲೆಯಾಗುವ ಸಾಧ್ಯತೆಯೇ ಇಲ್ಲ… ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ: ಚಿದಂಬರ ನರೇಂದ್ರ

ಚಹಾ ಅಂಗಡಿಯವಳ ಝೆನ್ ದೃಷ್ಟಾಂತ ಕಥೆ : ಓಶೋ ವ್ಯಾಖ್ಯಾನ

ಬದುಕಿಗೆ ಯಾವ ಉದ್ದೇಶವೂ ಇಲ್ಲ , ಅದು ತಾನೇ ಒಂದು ಉದ್ದೇಶ. ಅದು ಯಾವುದೋ ಒಂದು ಉದ್ದೇಶದ ಸಾಧನೆಗಾಗಿರುವ ದಾರಿ ಅಲ್ಲ, ಬದುಕೇ ಒಂದು ಉದ್ದೇಶ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ದೇವರು ಭಾವಗಮ್ಯ : ಇಂದಿನ ಸುಭಾಷಿತ

“ದೇವರು ಕಟ್ಟಿಗೆ ಅಥವಾ ಕಲ್ಲಿನಿಂದ ಮಾಡಿದ ವಿಗ್ರಹದಲ್ಲಿ ಇರುವುದಿಲ್ಲ. ದೇವರು ಇರುವುದು ನಮ್ಮಲ್ಲಿ. ನಮ್ಮ ಭಾವದಲ್ಲಿ. ನಮ್ಮ ಮನಸ್ಸಿನಲ್ಲಿ. ನಮ್ಮ ಭಾವನೆಯಂತೆ ನಮ್ಮ ನಮ್ಮ ದೇವರು ನಮಗೆ ದಕ್ಕುವನು” ಅನ್ನುತ್ತದೆ ಇಂದಿನ ಸುಭಾಷಿತ

ದೇವರನ್ನು ತಿದ್ದುವ ಪ್ರಯತ್ನ! : ಓಶೋ ವ್ಯಾಖ್ಯಾನ

ನೀವು ಪಿಕಾಸೋನ ಚಿತ್ರ ನೋಡುತ್ತ, “ಇದು ಹೀಗಿರಬೇಕಿತ್ತು, ಹಾಗಿರಬೇಕಿತ್ತು, ಇಲ್ಲಿ ಬಣ್ಣ ಗಾಢ, ಇಲ್ಲಿ ತೆಳು “ ಎಂದೆಲ್ಲ ಆರೋಪ ಮಾಡಲು ಶುರುಮಾಡಿದಿರೆಂದರೆ, ನೀವು ಪಿಕಾಸೋ ನ್ನ ನಿರಾಕರಿಸುತ್ತಿದ್ದೀರಿ. “ ನಾನು ಹೀಗಿದ್ದರೆ ಚೆನ್ನಾಗಿತ್ತು “ ಎಂದು ನಿಮಗೆ ಅನಿಸಲು ಶುರುವಾದಾಗ ನೀವು ದೇವರನ್ನು ತಿದ್ದಲು ಶುರು ಮಾಡಿದ್ದೀರಿ. ಈಗ ನೀವು ಪರೋಕ್ಷವಾಗಿ ದೇವರಿಗೆ ಏನು ಹೇಳುತ್ತಿದ್ದೀರೆಂದರೆ, “ ನೀನು ಒಬ್ಬ ದಡ್ಡ, ನಾನು ಹೀಗಿರಬೇಕಿತ್ತು ಆದರೆ ನೀನು ನನ್ನ ಹಾಗೆ ಸೃಷ್ಟಿಸಿದ್ದೀಯಾ “. ನೀವು ದೇವರ […]

ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ (ಭಾಗ-6) : Art of love #38

ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ- ಮುಂದುವರಿದ ಭಾಗ । ಎರಿಕ್ ಫ್ರಾಮ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ… (ಭಾಗ-5) | Art of Love #37

ಪ್ರೀತಿ ಎಂದರೆ ಪರಸ್ಪರರ ಲೈಂಗಿಕ ಸಂತೃಪ್ತಿ, ಪ್ರೀತಿ ಎಂದರೆ ಒಂದು ಟೀಂ ವರ್ಕ್, ಪ್ರೀತಿ ಎಂದರೆ ಒಂಟಿತನದಿಂದ ಪಾರಾಗಿ ಶರಣಾಗತಿ ಪಡೆಯುವ ಸ್ವರ್ಗದಂಥ ಜಾಗ, ಇವೆಲ್ಲ ಆಧುನಿಕ ಪಾಶ್ಚಾತ್ಯ ಸಮಾಜದಲ್ಲಿನ ಪ್ರೀತಿಯ ವಿಘಟನೆಯ ಸಾಮಾನ್ಯ ರೂಪಗಳು, ಸಮಾಜವೇ ಕಟ್ಟಿಕೊಂಡಂಥ ಪ್ರೀತಿಯ ವೈಪರೀತ್ಯಗಳಿಗೆ ನಿದರ್ಶನಗಳು. ಪ್ರೀತಿಯ ವೈಪರಿತ್ಯಗಳಿಗೆ (pathology of love) ಹಲವಾರು ವೈಯಕ್ತಿಕ ರೂಪಗಳಿವೆ, ಇವು ವ್ಯಕ್ತಿಯ ಪ್ರಜ್ಞಾಪೂರ್ವಕ ನರಳಾಟಕ್ಕೆ ಕಾರಣ ಮತ್ತು ಮನೋವೈದ್ಯರಷ್ಟೇ ಅಲ್ಲ ಬಹಳಷ್ಟು ಸಾಮಾನ್ಯ ಜನರು ಕೂಡ ಇವರನ್ನು ಒಂದೇ ರೀತಿಯಲ್ಲಿ ಮಾನಸಿಕ […]

ಝೆನ್ ಮಾಸ್ಟರ್ ನ ಪೇಂಟಿಂಗ್ : ಓಶೋ ಹೇಳಿದ ದೃಷ್ಟಾಂತ ಕಥೆ

ಮಾಸ್ಟರ್ ಪ್ರಯತ್ನ ಮಾಡುತ್ತಲೇ ಹೋದ, ಆದರೆ ಪ್ರಯತ್ನ ಮಾಡಿದಂತೆಲ್ಲ ಅವನು ಬೆವರಲು ಶುರು ಮಾಡಿದ. ಪಕ್ಕದಲ್ಲಿ ಕುಳಿತಿದ್ದ ಶಿಷ್ಯ ತನ್ನ ಕುತ್ತಿಗೆಯನ್ನ ನಕಾರಾತ್ಮಕವಾಗಿ ಅಲ್ಲಾಡಿಸುತ್ತ ಪೇಂಟಿಂಗ್ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತ ಮಾಡುತ್ತಿದ್ದ. ಶಿಷ್ಯನ ಮುಖದಲ್ಲಿನ ಅಸಮಾಧಾನ ನೋಡಿ ನೋಡಿ ಮಾಸ್ಟರ್ ನಿಂದ ಹೆಚ್ಚು ಹೆಚ್ಚು ತಪ್ಪುಗಳು ಆಗಲು ಶುರು ಆದವು… । ಓಶೋ ರಜನೀಶ್ ಹೇಳಿದ ಕಥೆ; ಕನ್ನಡಕ್ಕೆ: ಚಿದಂಬರ ನರೇಂದ್ರ

ಯಾರು ಶ್ರೇಷ್ಠ? : ಓಶೋ ವ್ಯಾಖ್ಯಾನ

ಹಿಂದೆ ಧರ್ಮಗಳು ಪ್ರತಿಯೊಂದು ಕ್ರಿಯೆಯನ್ನ, ಸಂಗತಿಯನ್ನ ಹೆಸರಿಟ್ಟು ಗುರುತಿಸುತ್ತಿದ್ದವು, ಇದು ಅನುಭವ, ಇದು ಭೋಗ ಎಂದು ವ್ಯತ್ಯಾಸ ಮಾಡುತ್ತಿದ್ದವು. ಆದರೆ ಮೂಲಭೂತವಾಗಿ ಕ್ರಿಯೆಗಳಲ್ಲಿ, ಸಂಗತಿಗಳಲ್ಲಿ ಸಮಸ್ಯೆಯಿಲ್ಲ, ಅವು ತಾವು ಇರಬೇಕಾದ ಹಾಗೆಯೇ ಇವೆ. ವ್ಯತ್ಯಾಸ ಆಗುವುದು ಅರಿವಿನ ಹಾಜರಾತಿ ಮತ್ತು ಅನುಪಸ್ಥಿತಿ ಕಾರಣವಾಗಿ ಮಾತ್ರ… ~ ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ

ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ (ಭಾಗ-3) : Art of love #35

ಹಾಗೆ ನೋಡಿದರೆ, ಪರಸ್ಪರರಲ್ಲಿ ಸಹನೆ-ಸಹಾನುಭೂತಿ, ಟೀಂ ಸ್ಪಿರಿಟ್ ಮುಂತಾದವೆಲ್ಲ ಇತ್ತೀಚಿನ ಬೆಳವಣಿಗೆಗಳು. ಮೊದಲ ವಿಶ್ವ ಯುದ್ಧದ ನಂತರದ ವರ್ಷಗಳಲ್ಲಿನ ಪ್ರೀತಿಯ ಪರಿಕಲ್ಪನೆಯಲ್ಲಿ, ಪರಸ್ಪರರನ್ನು ಲೈಂಗಿಕವಾಗಿ ತೃಪ್ತಿಗೊಳಿಸುವುದನ್ನ ಯಶಸ್ವಿ ಪ್ರೇಮ ಸಂಬಂಧಗಳ ಮತ್ತು ವಿಶೇಷವಾಗಿ ಸುಖೀ ದಾಂಪತ್ಯದ ತಳಹದಿ ಎಂದು ಭಾವಿಸಲಾಗಿತ್ತು. ಪರಸ್ಪರರಲ್ಲಿ “ಸರಿಯಾದ ಲೈಂಗಿಕ ಹೊಂದಾಣಿಕೆ” ಇಲ್ಲದಿರುವುದು ಸಂಬಂಧಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಅಸಮಾಧಾನ ಮತ್ತು ಅತೃಪ್ತಿಗೆ ಕಾರಣ ಎಂದು ತಿಳಿಯಲಾಗಿತ್ತು… ~ ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ