ಜ್ಞಾನ, ವೈರಾಗ್ಯ ಮತ್ತು ಆಹಾರ ಸಮೃದ್ಧಿಗಾಗಿ ಅನ್ನಪೂರ್ಣಾ ಸ್ತೋತ್ರ

ಅನ್ನಪೂರ್ಣೇಶ್ವರಿಯನ್ನು ಕೊಂಡಾಡುವ ಎಂಟು ಶ್ಲೋಕಗಳ ಅನ್ನಪೂರ್ಣಾ ಸ್ತೋತ್ರ ಅಥವಾ ಅನ್ನಪೂರ್ಣಾಷ್ಟಕವನ್ನು ರಚಿಸಿದವರು ಶ್ರೀ ಶಂಕರಾಚಾರ್ಯರು. ಪಂಚಮುಖಿ ಬ್ರಹ್ಮನ ಒಂದು ಶಿರವನ್ನು ಲಯಕರ್ತ ಶಿವನು ಕಿತ್ತುಹಾಕಿದಾಗ ಆ ಶಿರಸ್ಸು (ಕಪಾಲ) ಅವನ ಕೈಯನ್ನು ಕಚ್ಚಿಹಿಡಿಯುತ್ತದೆ. ಈ ಬ್ರಹ್ಮ ಕಪಾಲವನ್ನು ಹಿಡಿದು ಭಿಕ್ಷೆ ಬೇಡಬೇಕು, ಯಾವಾಗ ಅದು ತುಂಬುತ್ತದೆಯೋ ಆಗ ಅದರಿಂದ ಮುಕ್ತಿ ಸಿಗುವುದೆಂದು ನಾರಾಯಣ ತಿಳಿಸುತ್ತಾನೆ. ಅದರಂತೆ ಶಿವ ಮೂರು ಲೋಕವೆಲ್ಲ ತಿರುಗಿ ಭಿಕ್ಷೆ ಬೇಡಿದರೂ ಕಪಾಲ ತುಂಬುವುದಿಲ್ಲ. ಕೊನೆಗೆ ಪಾರ್ವತಿಯೇ ಅನ್ನಪೂರ್ಣೇಶ್ವರಿಯಾಗಿ ಭೂಮಿಯಲ್ಲಿ ಅವತರಿಸಿ, ಶಿವನಿಗೆ ಭಿಕ್ಷೆ […]