ಪಂಚಕೋಶ ಸಿದ್ಧಾಂತ : ನಮ್ಮ ದೇಹದ 5 ಕೋಶಗಳು ಮತ್ತು ಅವುಗಳ ಕಾರ್ಯವೇನು ಗೊತ್ತೆ?

ಆಯುರ್ವೇದ ಮತ್ತು ಯೋಗ ವಿಜ್ಞಾನಗಳ ಮತ್ತು ವೇದಾಂತದ ಪ್ರಕಾರ ಮಾನವರನ್ನು ಐದು ಕೋಶಗಳಿಂದ ಮಾಡಲಾಗಿದೆ ಎಂದು ಹೇಳಬಹುದು. ಅವುಗಳಿಗೆ ಪಂಚ ಕೋಶಗಳೆಂದು ಕರೆಯುತ್ತಾರೆ. ಮಾನವನು ಪಂಚ ಕೋಶಗಳಿಂದ ಉಂಟಾಗಿರುವನೆಂದು ವೇದಾಂತವೂ ಹೇಳುತ್ತದೆ. ತೈತ್ತರೀಯ ಉಪನಿಷತ್ ನಲ್ಲಿ ಇದರ ಸೂಕ್ಷ್ಮ ನಿರೂಪಣೆ ಇದೆ. ಶ್ರೀ ಆದಿ ಶಂಕರರು ರಚಿಸಿರುವ ವಿವೇಕ ಚೂಡಾಮಣಿಯಲ್ಲಿಯೂ ಇದರ ವರ್ಣನೆ ಬರುತ್ತದೆ. ಮಾನವ ದೇಹವನ್ನು ರೂಪಿಸಿರುವ ಈ ಐದು ಕೋಶಗಳು ಹೀಗಿವೆ: ಅನ್ನಮಯ (ದೇಹ), ಪ್ರಾಣಮಯ (ಉಸಿರು), ಮನೋಮಯ (ಮನಸ್ಸು), ವಿಜ್ಞಾನಮಯ (ಜ್ಞಾನ). ಆನಂದಮಯ (ಸಂತೋಷ) 1. ಅನ್ನಮಯಕೋಶ ದೇಹೋsಯಮನ್ನಭವನೋsನ್ನಮಯಸ್ತು ಕೋಶಶ್ಚಾನ್ನೇನ ಜೀವತಿ ವಿನಶ್ಶತಿ […]