ತಾವೋ ತಿಳಿವು #33 ~ ಇಲ್ಲಿ ಸಿದ್ಧಿ ಅಸಾಧ್ಯ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋ ಬ್ರಹ್ಮಾಂಡದ ಚುಕ್ಕಾಣಿ, ಒಳಿತಿಗಾಗಿ ಕಾಯುತ್ತಿರುವ ನಿಧಿ, ಕೆಡಕು ಶರಣಾಗುವ ಜಾಗ. ಸಿಹಿ ಮಾತುಗಳಿಂದ ಮನ್ನಣೆ ಸತ್ಕಾರ್ಯಗಳಿಂದ ಸ್ಥಾನ ಮಾನ ಸಾಧ್ಯ. ಆದರೆ, ತಾವೋಗೆ ಮೌಲ್ಯಗಳ ಹಂಗಿಲ್ಲ; ಅಂತೆಯೇ ಇಲ್ಲಿ ಸಿದ್ಧಿ ಅಸಾಧ್ಯ. ಹೊಸ ನಾಯಕ ಕಾಣಿಸಿಕೊಂಡಾಗ ಅವನಿಗೆ ಸಂಪತ್ತು, ಅನುಭವ ಧಾರೆಯೆರೆಯದಿರಿ. ಬದಲಾಗಿ, ತಾವೋ ಕಾಣಿಸಿ. ಸಂತರಿಗೆ ತಾವೋ ಯಾಕೆ ಆಪ್ಯಾಯಮಾನ? ಯಾಕೆಂದರೆ ಅವರು ಹುಡುಕಿದ್ದನ್ನು ಕಂಡುಕೊಳ್ಳುತ್ತಾರೆ, ಎಡವಿದಾಗ ಸಂತೈಸಲ್ಪಡುತ್ತಾರೆ, ಹಾಗೆಂದೇ ತಾವೋ […]