ಆತ್ಮಗತವಾಗುವುದೇ ಅರಿವು : ಯೋಗಿ ಅರವಿಂದ

ಅರಿವು ಬೇರೆ, ಮಾಹಿತಿ ಸಂಗ್ರಹ ಬೇರೆ. ನಾವು ಜೀವನದಲ್ಲಿ ಬಹುತೇಕ ಮಾಡುವುದು ಮಾಹಿತಿ ಸಂಗ್ರಹಣೆಯನ್ನಷ್ಟೆ. ಆತ್ಮಗತವಾಗದ ಯಾವುದೇ ಸಂಗತಿ ಅರಿವು ಹೇಗಾಗುತ್ತದೆ?  ನಾವು ಪ್ರತಿ ದಿನವೂ ಒಂದಲ್ಲ ಒಂದು ಬಗೆಯ ಕಲಿಕೆಗೆ ಎದುರಾಗುತ್ತಲೇ ಇದರುತ್ತೇವೆ. ಆದರೆ ನಾವು ಅದನ್ನು ಗುರುತಿಸುವುದು ಕಡಿಮೆ. ಯಾವುದೋ ಸಂಗತಿ, ಯಾರದೋ ಬದುಕು, ಮತ್ಯಾವುದೋ ಘಟನೆ ನಮಗೆ ಬದುಕಿನ ಮೌಲ್ಯವನ್ನು ತಿಳಿಸುತ್ತಲೇ ಇರುತ್ತದೆ. ಆದರೆ ನಾವು ಅವ್ಯಾವುದರ ಒಳಹೊಕ್ಕು ನೋಡುವ ಉಸಾಬರಿಗೇ ಹೋಗುವುದಿಲ್ಲ. ಪದರವನ್ನಷ್ಟೆ ಸ್ಪರ್ಶಿಸಿ ನಮಗದು ತಿಳಿದುಬಿಟ್ಟಿತು ಎಂದು ಭ್ರಮಿಸುತ್ತೇವೆ. ಹೀಗಾಗಿಯೇ […]