ಒಳಿತಿನೆಡೆಗೆ ಇರಲಿ ನಡಿಗೆ : ಬೃಹದಾರಣ್ಯಕ ಉಪನಿಷತ್

ಹುಳುಗಳು ಕೂಡಾ ತಮ್ಮ ರೆಕ್ಕೆ ಸುಟ್ಟರೂ ದೀಪವನ್ನರಸಿ ಬರುತ್ತವೆ. ಹೀಗಿರುವಾಗ, ನಾವು ಮನುಷ್ಯರೇಕೆ ಕತ್ತಲಲ್ಲಿ ಕೊಳೆಯಬೇಕು?  ಅಸತೋಮಾ ಸದ್ ಗಮಯ  ತಮಸೋಮಾ ಜ್ಯೋತಿರ್ಗಮಯ  ಮೃತ್ಯೋರ್ಮಾ ಅಮೃತಂಗಮಯ ಅನ್ನುತ್ತದೆ ಬೃಹದಾರಣ್ಯಕ ಉಪನಿಷತ್ತು. ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನಮ್ಮನ್ನು ನಡೆಸು ಎನ್ನುವ ಪ್ರಾರ್ಥನೆ ಇದು.  ನಮ್ಮ ದೈನಂದಿನ ಬದುಕಿಗೂ ಈ ಪ್ರಾರ್ಥನೆ ಮಾರ್ಗಸೂಚಿಯಾಗಿದೆ. ನಮ್ಮ ನಡಿಗೆ ಎಲ್ಲಿಂದ ಎಲ್ಲಿಗೆ ಇರಬೇಕು ಎನ್ನುವುದನ್ನು ಇದು ಸೂಚಿಸುತ್ತದೆ. ನಾವು ನಮ್ಮ ಹೆಸರು, ಹುದ್ದೆ, ಸಂಪತ್ತು ಮೊದಲಾದವುಗಳಿಂದ ನಮ್ಮನ್ನು ಗುರುತಿಸಿಕೊಳ್ಳುತ್ತಾ […]

ಸಮುದ್ರ ಮಂಥನ ನಡೆದಿದ್ದೇಕೆ? ಅಕ್ಷಯ ತೃತೀಯೆಗೂ ಇದಕ್ಕೂ ಸಂಬಂಧವೇನು!? : ಪುರಾಣ ಕಥೆ

ದೂರ್ವಾಸರು ದೇವೇಂದ್ರನಿಗೆ ಶಾಪ ಕೊಟ್ಟಿದ್ದು, ದೇವಾಸುರರು ಒಗ್ಗೂಡಿ ಸಮುದ್ರ ಮಂಥನ ನಡೆಸಿದ್ದು, ಮೊದಲು ಹಾಲಾಹಲ ಉಕ್ಕಿದ್ದು, ಆಮೇಲೆ ಅಮೃತ ಸಿಕ್ಕಿದ್ದು…. ಈ ಎಲ್ಲದರ ನಡುವೆ ಲಕ್ಷ್ಮಿ ಕಳೆದುಹೋಗಿದ್ದು ಮತ್ತು ಪುನಃ ದೊರಕಿದ್ದು! ಅಕ್ಷಯತೃತೀಯೆಗೆ ಸಂಬಂಧಿಸಿದ ಈ ಕಥೆ ಓದಿ… | ನಾಳೆ  (ಮೇ 7) ಅಕ್ಷಯ ತೃತೀಯಾ  ಸಮುದ್ರ ಮಂಥನದ ಕಥೆ ಬಹಳ ಸ್ವಾರಸ್ಯಕರವಾದುದು. ಸಾಂಕೇತಿಕವಾಗಿ ಇದು ಒಳಿತು – ಕೆಡುಕುಗಳ ಪರಿಣಾಮವನ್ನೂ ಕರ್ಮಫಲಗಳನ್ನೂ ಹೇಳುತ್ತದೆ. ಹಾಗೆಯೇ, ಸೃಷ್ಟಿಯ ಸಮತೋಲನ ಕಾಯಲು ದುಷ್ಟ – ಶಿಷ್ಟ ಶಕ್ತಿಗಳೆರಡರ […]