ಇದು ಅರಮನೆಯಾ? ಛತ್ರವಾ? : ಝೆನ್ ಕಥೆ

ಒಂದು ಸಂಜೆ ಝೆನ್ ಮಾಸ್ಟರ್ ರಾಜನ ಅರಮನೆಗೆ ಬಂದ. ಅವನ ಪ್ರಖರ ತೇಜಸ್ಸಿಗೆ ಬೆರಗಾದ ಅರಮನೆಯ ಕಾವಲುಗಾರರು, ಮಾಸ್ಟರ್ ನ ತಡೆಯುವ ಸಾಹಸ ಮಾಡಲಿಲ್ಲ. ಮಾಸ್ಟರ್ ಸೀದಾ ರಾಜನ ಆಸ್ಥಾನದ ಒಳಗೆ ನುಗ್ಗಿ , ರಾಜನ ಎದುರು ಬಂದು ನಿಂತ. ಮಂತ್ರಾಲೋಚನೆಯಲ್ಲಿ ಮಗ್ನನಾಗಿದ್ದ ರಾಜ, ಮಾಸ್ಟರ್ ನನ್ನು ಗುರುತಿಸಿ, ಅರಮನೆಗೆ ಸ್ವಾಗತಿಸಿದ. “ಸ್ವಾಗತ ಮಾಸ್ಟರ್, ನನ್ನಿಂದೇನಾಗಬೇಕು? ಅಪ್ಪಣೆಯಾಗಲಿ” “ಮಹಾರಾಜ ಈ ರಾತ್ರಿಯನ್ನು ನಾನು ನಿನ್ನ ಈ ಛತ್ರದಲ್ಲಿ ಕಳೆಯಬಹುದೆ ?” ಮಾಸ್ಟರ್ ನ ಮಾತು ಕೇಳಿ ರಾಜನಿಗೆ […]