ಶೀತಲಿ ಪ್ರಾಣಾಯಾಮ : 5 ಹಂತ, ಲಾಭ ಮತ್ತು ಎಚ್ಚರಿಕೆಗಳು

ಬೇಸಿಗೆ ಸಮೀಪಿಸುತ್ತಿದೆ. ಹೊರಗಿನ ಉಷ್ಣದೊಂದಿಗೆ ದೇಹದ ಉಷ್ಣತೆಯೂ ಏರುವ ದಿನಗಳಿವು. ಇದು ನಮ್ಮ ದೇಹವನ್ನೂ ಮನಸ್ಸನ್ನೂ ಸುಸ್ತಾಗಿಸುತ್ತದೆ. ಲವಲವಿಕೆ ಬತ್ತಿಸುತ್ತದೆ. ಉರಿಬಿಸಿಲಿನ ದಿನಗಳಲ್ಲಿ ದೇಹವನ್ನು ಶೀತಲಗೊಳಿಸಲು, ಹುಮ್ಮಸ್ಸು ತುಂಬಿಕೊಳ್ಳಲು ‘ಶೀತಲಿ ಪ್ರಾಣಾಯಾಮ’ ಸಹಕಾರಿ. ಈ ಪ್ರಾಣಾಯಾಮ ಅಭ್ಯಾಸ ಮಾಡುವ ಹಂತಗಳನ್ನು ಮತ್ತು ಅದರ ಲಾಭಗಳನ್ನು ಈ ವಿಡಿಯೋದಲ್ಲಿ ನೋಡಿ.   Advertisements

ಭಗ್ನಪ್ರೇಮಿಗಳಿಗೆ 10 ಕಿವಿಮಾತು : Be Positive Video

Love is in air… ಎಲ್ಲೆಂದರಲ್ಲಿ ಪ್ರೇಮದ್ದೇ ಮಾತುಕತೆ ಕೇಳಿಬರುತ್ತಿದೆ. ಈ ದಿನವಂತೂ ಇದು ಹತ್ತು ಪಟ್ಟು ಹೆಚ್ಚು. ಹೀಗಿರುವಾಗ ಪ್ರೇಮಿಸಿದಾತ/ಪ್ರೇಮಿಸಿದಾಕೆ ದೊರೆಯಲಿಲ್ಲವೆಂದು ಎದೆ ಬಿರಿದುಕೊಂಡು ಮುಖ ಬಾಡಿಸಿ ಕುಳಿತವರು ಇಂದು ತುಸು ಹೆಚ್ಚೇ ಕಂಡುಬರುತ್ತಾರೆ. ಈ ಭಗ್ನಪ್ರೇಮಿಗಳಲ್ಲಿ ಕೊಂಚ ನೆಮ್ಮದಿ ಮೂಡಿಸಬಹುದಾದ 10 ಕಿವಿಮಾತುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿವೆ. 

ಸುಪ್ರಭಾತ : ಸ್ವಸ್ಥ ದಿನಚರಿಗೆ 10 ವೇದೋಪನಿಷತ್ ಚಿಂತನೆಗಳು

ವೇದೋಪನಿಷತ್ತಿನ ಪ್ರಾರ್ಥನೆ, ಬೋಧನೆ ಮತ್ತು ಸೂಚನೆಗಳು ಸಾರ್ವಕಾಲಿಕ ಜೀವನ ಮೌಲ್ಯಗಳನ್ನು ಒಳಗೊಂಡಿರುವಂಥವು. ನಮ್ಮ ದೈನಂದಿನ ಜೀವನದಲ್ಲಿ ಇವನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡರೆ ಸ್ವಸ್ಥ ಜೀವನ ಖಚಿತ. ವೇದೋಪನಿಷತ್ತುಗಳಿಂದ ಆಯ್ದ ಅಂತಹಾ 10 ಚಿಂತನೆಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿದೆ. 

ಚಾಣಕ್ಯ ನೀತಿ : ಪ್ರಾಣಿಪಕ್ಷಿಗಳಿಂದ ಕಲಿಯಬಹುದಾದ 20 ಪಾಠಗಳು ~ Be Positive Video

ನಾವು ಪ್ರತಿಯೊಂದು ವಸ್ತುವಿನಿಂದಲೂ, ಜೀವಿಯಿಂದಲೂ ಪಾಠ ಕಲಿಯುವುದು ಇದ್ದೇ ಇರುತ್ತದೆ. ಎಚ್ಚರಿಕೆಯಿಂದ ಅವುಗಳ ಬದುಕನ್ನು ಗಮನಿಸಿ, ಅಭ್ಯಾಸ ಮಾಡಬೇಕಷ್ಟೆ. ಚಾಣಕ್ಯ ನಮ್ಮ ಸುತ್ತಮುತ್ತಲಿನ ಪ್ರಾಣಿಗಳ ಗುಣವಿಶೇಷಗಳನ್ನು ಗುರುತಿಸಿ, 20 ಪಾಠಗಳ ಪಟ್ಟಿ ನೀಡಿದ್ದಾನೆ. ಅವು ಯಾವುವು ಎಂಬುದನ್ನು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೋಡಿ…  

ಸೂರ್ಯನಮಸ್ಕಾರದ 12 ಆಸನ, ವಿಧಾನ & ಮಂತ್ರಗಳು : ರಥಸಪ್ತಮಿ ವಿಶೇಷ video

ರಥ ಸಪ್ತಮಿ, ಸೂರ್ಯಾರಾಧನೆಯ ಉತ್ಸವ. ಹಾಗೆಂದೇ ಈ ದಿನ ಸೂರ್ಯ ನಮಸ್ಕಾರಕ್ಕೆ ವೀಶೇಷ ಮಹತ್ವ. ಇದು 12 ಆಸನಗಳ ಒಂದು ಗುಚ್ಛ. ಪ್ರತಿ ದಿನ 108 ಸೂರ್ಯನಮಸ್ಕಾರಗಳನ್ನು ಮಾಡಿದರೆ ಒಳ್ಳೆಯದು. ಗರಡಿಮನೆಗಳಲ್ಲಿ 1008 ಸೂರ್ಯ ನಮಸ್ಕಾರಗಳನ್ನು ಮಾಡಿಸುವುದೂ ಉಂಟು! ವಾಸ್ತವದಲ್ಲಿ ಸೂರ್ಯ ನಮಸ್ಕಾರ ಪ್ರತಿನಿತ್ಯದ ಅಭ್ಯಾಸವಾಗಬೇಕು. ಇದನ್ನು ಸೂರ್ಯ ದೇವನೆಂಬ ಭಾವನೆ ಇಲ್ಲದ ನಾಸ್ತಿಕರು ವ್ಯಾಯಾಮ ಎಂದಾದರೂ ಮಾಡಲಿ. ಪ್ರಕೃತಿ ಆರಾಧಕರು ದಿನವೂ ಬೆಳಕು, ಶಾಖ ಮತ್ತೆಲ್ಲ ಜೀವ ಚೈತನ್ಯಕ್ಕೆ ಕಾರಣವಾದ ಮಹತ್ ತತ್ತ್ವ ಎಂಬ ಗೌರವ […]

ಪ್ರೀತಿ, ಬದುಕು, ಜಗತ್ತು…. ರೂಮಿಯ 10 ಹೊಳಹುಗಳು : Be Positive Video

ನಾವು ಪ್ರೀತಿಗಾಗಿ ಹಂಬಲಿಸಿದಷ್ಟು, ಅದನ್ನು ಹುಡುಕಿಕೊಂಡು ಅಲೆದಾಡುವಷ್ಟು, ಬದುಕನ್ನು ಅರ್ಥ ಮಾಡಿಕೊಳ್ಳಲು ಹೆಣಗಿದಷ್ಟು, ಜಗತ್ತಿನೊಡನೆ ನಾವೇನಾವಾಗಿ ಬೆರೆಯಲು ಪಾಡು ಪಡುವಷ್ಟು ಮತ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.  ಪ್ರೀತಿ, ಬದುಕು ಮತ್ತು ಜಗತ್ತನ್ನು ಅರ್ಥ ಮಾಡಿಕೊಳ್ಳಲು ರೂಮಿ ಹೇಳುವ 10 ಹೊಳಹುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿದೆ…

ಯಶಸ್ವಿ ಬದುಕಿಗೆ 10 ತಾವೋ ಸೂತ್ರಗಳು : Be Positive Video

ಕಾವ್ಯ ಧಾಟಿಯಲ್ಲಿರುವ ತಾವೋ ತಿಳಿವು ನೆನಪಿಡಲು ಸುಲಭ. ಆದರೆ ಅನುಸರಿಸುವುದು ಬಹಳ ಕಷ್ಟ! ಕಷ್ಟಕರವಾಗಿರುವಂಥವೇ ನಮಗೆ ಸುಖ ತಂದುಕೊಡುವುದು ಎಂಬುದನ್ನು ನೆನಪಿಸಿಕೊಂಡು ಮುನ್ನಡೆಯಿರಿ. ಖಂಡಿತವಾಗಿಯೂ ಯಶಸ್ಸು ನಿಮ್ಮ ಭವಿಷ್ಯದ ಕದ ಬಡಿಯುವುದು.  ಈ ಕಿರುಚಿತ್ರಿಕೆಯಲ್ಲಿ ಯಶಸ್ವಿ ಬದುಕಿನ ಯಾನಕ್ಕೆ ದಿಕ್ಸೂಚಿಯಾಗುವಂಥ 10 ತಾವೋ ಹೇಳಿಕೆಗಳಿವೆ.   

ನಿಮ್ಮಲ್ಲಿ ಈ 8 ಗುಣಗಳಿವೆಯೇ? ಹಾಗಾದರೆ ನೀವು ಸಕಾರಾತ್ಮಕ ವ್ಯಕ್ತಿ! : Be Positive video

ಸಕಾರಾತ್ಮಕ ಚಿಂತನೆ ಸುಖ ಜೀವನಕ್ಕೆ ಅತ್ಯಗತ್ಯವಾದ ಅಂಶ. ಇದು ನಮ್ಮನ್ನು ಸಂತೃಪ್ತರನ್ನಾಗಿಯೂ ಸಾಹಸಿಗರನ್ನಾಗಿಯೂ ಮಾಡುವುದು. ಸದಾ ಕ್ರಿಯಾಶೀಲವಾಗಿರಿಸುವುದು. ಸಕಾರಾತ್ಮಕ ಚಿಂತನೆ ಹರಡುವ ಧನಾತ್ಮಕ ಕಂಪನಗಳು (positive vibes) ನಮ್ಮ ಸುತ್ತಮುತ್ತಲಿನವರನ್ನೂ ಪ್ರಭಾವಿಸುವುದು.  ಸಕಾರಾತ್ಮಕ ಚಿಂತನೆ ಹೊಂದಿರುವುದು ಅಂದರೇನು? ಈ ಪ್ರಶ್ನೆ ಹಲವರದು. ಸಕಾರಾತ್ಮಕ ಬದುಕು ಯಾವುದೋ ಒಂದು ನಿರ್ದಿಷ್ಟ ಗುಣವಲ್ಲ. ಅದು ಹಲವು ಗುಣಗಳ ಮೊತ್ತ. ಹಾಗಾದರೆ ಆ ಗುಣಗಳು ಯಾವುವು? ಈ ಕಿರು ಚಿತ್ರಿಕೆಯಲ್ಲಿ ನೋಡೋಣ ಬನ್ನಿ…

ನೆಮ್ಮದಿಯ ಬದುಕಿಗೆ 10 ದಾವ್ ಸೂತ್ರಗಳು : Be Positive Video

ನಾವು ಸಹಜವಾಗಿದ್ದರೆ ನಮ್ಮ ಬದುಕೂ ಅತ್ಯಂತ ಸರಳವಾಗಿರುತ್ತದೆ. ಆದರೆ ನಾವು ಹತ್ತು ಹಲವು ಸಂಕೀರ್ಣತೆಗಳನ್ನು ಹೇರಿಕೊಂಡು ಬದುಕನ್ನು ಸಿಕ್ಕುಸಿಕ್ಕಾಗಿಸಿಕೊಳ್ಳುತ್ತೇವೆ.  ದಾವ್, ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ ಬದುಕನ್ನು ಹೇಗಿಟ್ಟುಕೊಳ್ಳಬೇಕೆಂದು ತಿಳಿಸುತ್ತದೆ. ಅವುಗಳಲ್ಲಿ 10 ಹೇಳಿಕೆಗಳನ್ನಾಯ್ದು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೀಡಲಾಗಿದೆ.   

ಕೊರಗು ಕಳೆಯುವ 5 ಹಂತಗಳು : Be Positive video

ಕೊರಗು ನೀಗುವಲ್ಲಿ ಪ್ರತಿಯೊಬ್ಬರೂ ಹಾಯುವ ಈ 5 ಹಂತಗಳನ್ನು ಗಮನಿಸಿ. ನೀವು ಯಾವ ಹಂತದಲ್ಲಿ ಸಿಲುಕಿದ್ದೀರಿ, ನಿರುಕಿಸಿ. ಕೊನೆಗೂ ನೀವು ನಿಮ್ಮ ಬದುಕನ್ನು ಬಾಳಲೇಬೇಕು. ಕಾಲವ್ಯರ್ಥ ಮಾಡಬೇಡಿ, ಖುಷಿಯಾಗಿರಿ!!    ಸಂಬಂಧಗಳು ಕಳಚಿಹೋದಾಗ, ಸಂಗಾತಿ ತೀರಿಹೋದಾಗ ಅಥವಾ ಬೆಸುಗೆಯೇ ಸುಳ್ಳಾದಾಗ ಉಂಟಾಗುವ ಕೊರಗು ಕಡಿಮೆಯಲ್ಲ. ಇಂಥದನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಅನುಭವಿಸಿಯೇ ಇರುತ್ತಾರೆ. ಆದರೆ ಇದನ್ನು ಎದುರಿಸುವ ರೀತಿ ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನ. ಕೆಲವರು ವಿಪರೀತ ವಿಷಾದದಲ್ಲಿ ತಮ್ಮ ಬದುಕನ್ನೆ ನಷ್ಟಮಾಡಿಕೊಂಡರೆ, ಮತ್ತೆ ಕೆಲವರು ಬಹಳ […]