ವ್ಯಾಪಾರದಲ್ಲಿ ನಷ್ಟವಾಗಿದೆ, ಭರಿಸುವುದು ಹೇಗೆ? : ಅರಳಿಮರ ಸಂವಾದ

ನೀವು ನಿಜವಾಗಿಯೂ ಧಾರ್ಮಿಕ ಮನಸ್ಥಿತಿಯವರಾಗಿದ್ದೀರಿ ಎಂದಾದರೆ, ನಿಮಗೆ ಸಮಸ್ಯೆಯಾದಾಗ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಲ್ಲಿ ಅಥವಾ ಜ್ಯೋತಿಷಿಗಳ ಬಳಿ ಕವಡೆ ಹಾಕಿಸುವುದರಲ್ಲಿ ಸಮಯ ಕಳೆಯಬಾರದು. ಏಕೆಂದರೆ ಧರ್ಮ ಯಾವತ್ತೂ ಕರ್ಮವನ್ನು ಬೋಧಿಸುತ್ತದೆ . ಆದ್ದರಿಂದ, ಕಾಲಹರಣ ಬಿಟ್ಟು ಕರ್ಮ ನಡೆಸಲು ಮುಂದಾಗಬೇಕು… ~ ಚಿತ್ಕಲಾ ಅರಳಿಮರದ ಓದುಗರೊಬ್ಬರು (ವಾಟ್ಸ್ಪ್ ಬ್ರಾಡ್’ಕಾಸ್ಟಿನಲ್ಲಿ ಅವರ ಹೆಸರು AraLi 5 ಎಂದು ನಮೂದಾಗಿದೆ) ಒಂದು ಪ್ರಶ್ನೆ ಕಳಿಸಿದ್ದಾರೆ. “ವ್ಯಾಪಾರದಲ್ಲಿ ನಷ್ಟವಾಗಿದೆ, ಅದಕ್ಕಾಗಿ ಅಧ್ಯಾತ್ಮದ ಕಡೆ ಬಂದಿದ್ದೇನೆ. ವ್ಯಾಪಾರದಲ್ಲಿ ಲಾಭವಾಗಲು ಏನು ಮಾಡಬೇಕು?” ಇದು […]

ಎಲ್ಲ ಸರಿ ಹೋಗುತ್ತದೆ…

ಶಿಷ್ಯನೊಬ್ಬ ಝೆನ್ ಮಾಸ್ಟರ್ ಹತ್ತಿರ, ಒಂದು ದೂರು ತೆಗೆದುಕೊಂಡು ಬಂದ. “ಮಾಸ್ಟರ್, ನನಗೆ ಧ್ಯಾನದಲ್ಲಿ ತುಂಬ ತೊಂದರೆಗಳಾಗುತ್ತಿವೆ. ಧ್ಯಾನಕ್ಕೆ ಕೂತಾಗಲೆಲ್ಲ ವಿಪರೀತ ಕಾಲು ನೋಯುತ್ತದೆ, ನಿದ್ದೆ ಬಂದ ಹಾಗಾಗುತ್ತದೆ. ಬಹಳ ಚಿಂತೆಯಾಗುತ್ತಿದೆ. ಏನು ಮಾಡಲಿ? “ “ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ” ಮಾಸ್ಟರ್ ಉತ್ತರಿಸಿದ. ಎರಡು ಮೂರು ತಿಂಗಳುಗಳ ನಂತರ ಶಿಷ್ಯ ವಾಪಸ್ ಬಂದ, “ಮಾಸ್ಟರ್, ಈಗ ಧ್ಯಾನದಲ್ಲಿ ಅದ್ಭುತ ಅನುಭವಗಳಾಗುತ್ತಿವೆ, ತುಂಬ ಎಚ್ಚರದ ಸ್ಥಿತಿ ಅನಿಸುತ್ತಿದೆ. ಎಷ್ಟು ಶಾಂತ, ಎಷ್ಟು ಜೀವಂತಿಕೆಯ ಸ್ಥಿತಿ ಇದು!” […]

ವಾ-ಐನ್-ಸಾಇಲ್’ನ ಕುತೂಹಲ ಮತ್ತು ಗುರುವಿನಂಥ ವಿದ್ಯಾರ್ಥಿಯ ವಿನಯ

ರಾ-ಉಮ್ ಆಶ್ರಮಕ್ಕೆ ಅನೇಕ ಹಳೆಯ ವಿದ್ಯಾರ್ಥಿಗಳು ಮತ್ತೆ ಮತ್ತೆ ಬರುತ್ತಿದ್ದರು. ಇವರಲ್ಲಿ ಕೆಲವರು ಆಗಲೇ ಗುರುಗಳಾಗಿ ಹೆಸರು ಮಾಡಿದ್ದರು. ಆದರೂ ಅವರು ಆಗೀಗ ಮತ್ತೆ ಆಶ್ರಮಕ್ಕೆ ಬಂದು ಶಿಷ್ಯರಾಗಿ ಕೆಲಕಾಲ ಕಳೆಯುತ್ತಿದ್ದರು. ಹೀಗೆ ಬರುತ್ತಿದ್ದವರಲ್ಲಿ ಬಹುತೇಕ ರಾ-ಉಮ್‌ಳಷ್ಟೇ ಪ್ರಾಯವಿದ್ದ ಒಬ್ಬರಿದ್ದರು. ರಾ-ಉಮ್ ಕೂಡಾ ಇವರನ್ನು ಬಹಳ ಗೌರವದಿಂದ ಕಾಣುತ್ತಿದ್ದಳು. ಅನೇಕ ಹಳೆಯ ವಿದ್ಯಾರ್ಥಿಗಳೂ ಈ ವ್ಯಕ್ತಿಯನ್ನು ಗುರುವೆಂದೇ ಪರಿಗಣಿಸುತ್ತಿದ್ದರು. ಅವರಿಗೆ ಪೂರ್ವದ ಯಾವುದೋ ದ್ವೀಪದಲ್ಲಿ ಆಶ್ರಮವಿತ್ತು. ವಾ-ಐನ್-ಸಾಇಲ್‌ಗೆ ಈ ವ್ಯಕ್ತಿಯ ಬಗ್ಗೆ ಬಹಳ ಕುತೂಹಲ. ಒಂದು ದಿನ ಸಂಜೆಯ […]