ಆರು ಶತ್ರುಗಳನ್ನು ಮಣಿಸಲು ಅಂತರಂಗದ ಆಯುಧಗಳು

ಅರಿಷಡ್ವರ್ಗಗಳೆಂದರೆ ನಮ್ಮ ವ್ಯಕ್ತಿತ್ವದ ಕೋಟೆಯನ್ನು ಹಾಳುಗೆಡವಿ, ನಮ್ಮ ಅಸ್ತಿತ್ವವನ್ನು ದೋಚುವ ನಾವೇ ಪೋಷಿಸುವ ಶತ್ರುಗಳು. ಅವುಗಳನ್ನು ಸೋಲಿಸಲು ಆರು ಆಯುಧಗಳನ್ನು ನಾವು ಪ್ರಜ್ಞಾಪೂರ್ವಕವಾಗಿ ಪೋಷಿಸುತ್ತಾ ಸಿದ್ಧವಾಗಿಟ್ಟುಕೊಂಡಿರಬೇಕು ~ ಆನಂದಪೂರ್ಣ   ನಾವು ನಮ್ಮ ನೆಲದ, ಜಲದ, ಸಂಪತ್ತಿನ ರಕ್ಷಣೆಗೆ ಎಷ್ಟೆಲ್ಲ ಆದ್ಯತೆ ಕೊಡುತ್ತೇವೆ. ಜೀವ ಪಡೆದಾದರೂ ಜೀವ ಕಾಪಾಡಿಕೊಳ್ಳುವಷ್ಟು ಬದ್ಧತೆ ತೋರಿಸುತ್ತೇವೆ. ನಮ್ಮ ಬಾಹ್ಯ ಸೌಕರ್ಯಗಳಿಗಾಗಿ, ಸುರಕ್ಷತೆಗಾಗಿ ಎಷ್ಟೆಲ್ಲ ಕಾಳಜಿ ವಹಿಸುತ್ತೇವೆ. ಆದರೆ ನಮ್ಮ ಅಂತರಂಗವನ್ನು ನಿರಂತರವಾಗಿ ಆಕ್ರಮಿಸಿ ಯಾತನೆಗೆ ನೂಕುತ್ತಿರುವ ನಮ್ಮೊಳಗಿನದೇ ವೈರಿಗಳ ವಿರುದ್ಧ ಯಾವ […]

ಒಳಗಿನ ವೈರಿಗಳನ್ನು ಗೆಲ್ಲುವ ಆಯುಧಗಳು

ನಮ್ಮ ಅಂತರಂಗವನ್ನು ನಿರಂತರವಾಗಿ ಆಕ್ರಮಿಸಿ ಯಾತನೆಗೆ ನೂಕುತ್ತಿರುವ ನಮ್ಮೊಳಗಿನದೇ ವೈರಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಈ ವೈರಿಗಳನ್ನು ಮಟ್ಟಹಾಕಲು ಆಯುಧಗಳನ್ನೂ ಸಜ್ಜು ಮಾಡಿಟ್ಟುಕೊಳ್ಳುವುದಿಲ್ಲ. ಇನ್ನೂ ಹೇಳಬೇಕೆಂದರೆ, ಅರಿಷಡ್ವರ್ಗಗಳು ಅಂತರಂಗದ ಮೇಲೆ ಅತಿಕ್ರಮಣ ಮಾಡಿರುವುದು ನಮಗೆ ಎಷ್ಟೋ ಬಾರಿ ಸಂಪೂರ್ಣ ಹಾನಿಯಾಗುವವರೆಗೂ ಗೊತ್ತಾಗುವುದೇ ಇಲ್ಲ! ಜಗತ್ತಿನ ಬಹುತೇಕ ರಾಷ್ಟ್ರಗಳು ಆಯುಧ ಸಂಗ್ರಹಣೆಯಲ್ಲಿ ತೊಡಗಿವೆ. ಪ್ರತಿ ವರ್ಷದ ಬಜೆಟ್‍ನಲ್ಲಿ ದೊಡ್ಡದೊಂದು ಪಾಲನ್ನು ಶಸ್ತ್ರಾಸ್ತ್ರ ಖರೀದಿ ಹಾಗೂ ನಿರ್ವಹಣೆಗೆಂದೇ ತೆಗೆದಿರಿಸಲಾಗುತ್ತದೆ. ಪ್ರತಿಯೊಂದು ದೇಶಕ್ಕೂ ಒಳ – ಹೊರಗಿನ ಶತ್ರುಗಳಿಂದ ತನ್ನನ್ನು […]