ಅರಿವಿಗೆ ತಕ್ಕಂತೆ ಮಾತುಗಳು ಅರ್ಥ ಪಡೆಯುತ್ತವೆ : ಅಧ್ಯಾತ್ಮ ಡೈರಿ

ಯಾವುದೇ ಪದ, ಶಬ್ದ, ಕೇಳುಗರ ಕಿವಿಯಲ್ಲಿ, ಅವರ ಅರಿವಿಗೆ ತಕ್ಕಂತೆ ಅರ್ಥ ಪಡೆಯುತ್ತದೆ. ಮಾತು ಎನ್ನುವುದು ಮಾಯೆಯಂತೆ. ಅದು ಸಮ್ಮೋಹಗೊಳಿಸುತ್ತದೆ. ನಮ್ಮನ್ನು ಒಂದು ಅರ್ಥಕ್ಕೆ ಬದ್ಧರಾಗುವಂತೆ ಕಟ್ಟಿಹಾಕುತ್ತದೆ. ಆ ಅರ್ಥದ ಪಾಶದಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ ~  ಅಲಾವಿಕಾ

ಶಬ್ದಬ್ರಹ್ಮ : ಭಾಷೆ ಅರ್ಥ ಪಡೆಯುವುದು ನಮ್ಮ ಗ್ರಹಿಕೆಯಲ್ಲಿ

ಭಾಷೆ ಎಷ್ಟೇ ಉಪಯುಕ್ತವಾದುದಾದರೂ ಅದನ್ನು ಬಲ್ಲವರಿಗಷ್ಟೆ ಪ್ರಯೋಜನ. ಮತ್ಯಾವುದೋ ಪ್ರಾಂತ್ಯದಲ್ಲಿ ನಮ್ಮ ಭಾಷೆಯ ಮೂಲಕ ಸಂವಹನ ನಡೆಸಲು ಸಾಧ್ಯವಿಲ್ಲ. ನಮ್ಮ ಇರುವಿಕೆ, ಅಗತ್ಯ ಹಾಗೂ ಸಂಪನ್ಮೂಲಗಳೇ ಅಲ್ಲಿ ಸಂವಹನದ ಆಕರಗಳಾಗಿ ಒದಗುತ್ತವೆ ~ ಗಾಯತ್ರಿ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಅರ್ಥ ಇರಬೇಕೆಂದು ಬಯಸುವಂಥವರು. ಆಡುವ ಪ್ರತಿ ಮಾತಿಗೂ ಅರ್ಥ ಇರಬೇಕೆಂದು ಅಪೇಕ್ಷೆ ಪಡುವವರು. ಅರ್ಥವಿಲ್ಲದ ಮಾತು, ನಿರುದ್ದಿಶ್ಯ ಕೆಲಸಗಳು ನಮಗೆ ಸಮಯದ ಅಪವ್ಯಯದಂತೆ ತೋರುವುದು. ಆದರೆ ನಾವು ಕಾರಣಸಹಿತ ಕೆಲಸಗಳನ್ನಾಗಲೀ ಅರ್ಥಸಹಿತ ಮಾತುಗಳನ್ನಾಗಲೀ ಪ್ರಜ್ಞಾ ಪೂರ್ವಕವಾಗಿ […]

ಝೆನ್ ಗುರುವಿನ ಸೌಜನ್ಯ : Tea time Story

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ ಒಂದು ದೊಡ್ಡ ಸಾಮ್ರಾಜ್ಯದ ಚಕ್ರವರ್ತಿ ತನ್ನ ರಾಜ್ಯದಲ್ಲಿ ವಾಸಿಸುತ್ತಿದ್ದ ಒಬ್ಬ ಝೆನ್ ಮಾಸ್ಟರ್ ನನ್ನು ತನ್ನ ಅರಮನೆಗೆ ಆಹ್ವಾನಿಸಿದ. ತನ್ನ ಕೋರಿಕೆಯಂತೆ ಅರಮನೆಗೆ ಆಗಮಿಸಿದ ಮಾಸ್ಟರ್ ನನ್ನು ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಮಾಸ್ಟರ್ ಗೆ ಸಕಲ ಆದರೋಪಚಾರಗಳನ್ನು ಮಾಡಲು ಮುಂದಾದ. ಸರಳ ಜೀವನ ನಡೆಸುತ್ತಿದ್ದ ಮಾಸ್ಟರ್, ರಾಜನ ಸತ್ಕಾರವನ್ನು ಗೌರವದಿಂದ ನಿರಾಕರಿಸಿದ. ಮಾಸ್ಟರ್ ನ ಈ ಸೌಜನ್ಯ, ಸರಳತೆ ಕಂಡು ರಾಜನಿಗೆ ಬಹಳ ಅಚ್ಚರಿಯಾಯಿತು. “ ಮಾಸ್ಟರ್, […]

ತಾವೋ ತಿಳಿವು #27 ~ ವ್ಯರ್ಥ, ಒಂದು ಪರಿಪೂರ್ಣ ಅರ್ಥ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಕೆಲವರ ಪ್ರಕಾರ ನಾನು ಹೇಳೋದೆಲ್ಲ ವ್ಯರ್ಥ. ಇನ್ನೂ ಕೆಲವರ ಪ್ರಕಾರ ‘ಉದಾತ್ತ’, ಆದರೆ ಕೆಲಸಕ್ಕೆ ಬಾರದು. ತಮ್ಮೊಳಗೆ ಇಣುಕಿ ನೋಡಿಕೊಂಡವರಿಗೆ ಈ ವ್ಯರ್ಥ, ಒಂದು ಪರಿಪೂರ್ಣ ಅರ್ಥ; ಕೆಲಸದಲ್ಲಿ ಬಳಸಿಕೊಂಡವರಿಗೆ ಮಾತ್ರ ಗೊತ್ತು ಈ ಉದಾತ್ತದ ಬೇರುಗಳ ಆಳ. ನಾನು ಹೇಳೋದು ಈ ಮೂರನ್ನು ಮಾತ್ರ ಸರಳತೆ, ಸಮಾಧಾನ, ಅಂತಃಕರಣ. ಈ ಮೂರೂ ನಿಮ್ಮ ಬಹು ದೊಡ್ಡ ಆಸ್ತಿ. ಕೆಲಸ ಮತ್ತು ವಿಚಾರದಲ್ಲಿನ ಸರಳತೆ […]