ನಾವೇಕೆ ಮೈಮೇಲೆ ಇರುವೆ ಬಿಟ್ಟುಕೊಳ್ಳಬೇಕು!? : ಅಧ್ಯಾತ್ಮ ಡೈರಿ

ಇಷ್ಟಕ್ಕೂ ಕ್ರಿಯೆ ಅವರವರ ಕರ್ಮ. ಪ್ರತಿಕ್ರಿಯೆ, ಅವರ ಕರ್ಮಕ್ಕೆ ನಾವು ಬಾಧ್ಯಸ್ಥರಾಗುವ ಮೈಮೇಲೆ ಇರುವೆ ಬಿಟ್ಟುಕೊಳ್ಳುವಂಥ ಕ್ರಿಯೆ. ನಾವೇಕೆ ಮತ್ಯಾರದೋ ಕರ್ಮದ ಫಲವುಣ್ಣಬೇಕು!? ~ ಅಲಾವಿಕಾ ಪ್ರತಿಕ್ರಿಯೆ ನಮ್ಮ ಸಮಯವನ್ನು ಮಾತ್ರವಲ್ಲ, ಜೀವನವನ್ನೇ ಹಾಳು ಮಾಡುತ್ತದೆ. ಪ್ರತಿಕ್ರಿಯೆ ನಮಗೆ ರೂಢಿಯಾಗಿಬಿಟ್ಟರೆ, ಪ್ರತಿಯೊಂದಕ್ಕೂ ನಮ್ಮದೊಂದು ಪ್ರತಿಕ್ರಿಯೆ ಹೆಣೆದು ತೂರಿಬಿಡುವುದು ಒಂದು ಗೀಳಾಗಿಬಿಡುತ್ತದೆ. ಒಂದು ಹಂತದಲ್ಲಿ, ನಮ್ಮಲ್ಲಿ ಪ್ರತಿಕ್ರಿಯೆ ಮೂಡಲಿ, ಮೂಡದಿರಲಿ, ಹೇಗಾದರೊಂದು ಹುಟ್ಟಿಸಿಕೊಂಡಾದರೂ ಅದನ್ನು ದಾಖಲಿಸುವ ಚಾಳಿ ಅಂಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ, ನಾವು ಇದನ್ನು ಢಾಳಾಗಿ ನೋಡಬಹುದು.  […]

ಜೀವನದ ಸಾರ್ಥಕತೆ ಕುರಿತು ರೂಮಿ ಹೇಳಿದ್ದು….

ಸೂಫಿ ಸಾಧಕ ಜಲಾಲುದ್ದಿನ್ ರೂಮಿಯ ರಚನೆಯೊಂದರಲ್ಲಿ ಬರುವ ಪ್ರಶ್ನೋತ್ತರ ಹೀಗಿದೆ…. ಯಾವುದು ವಿಷ ? ಭಯ ಯಾವುದು? ಹೊಟ್ಟೆಕಿಚ್ಚು ಎಂದರೆ…. ಕೋಪ ಬರುವುದು ಹೇಗೆ? ದ್ವೇಷ ಹೇಗೆ ಉಂಟಾಗುತ್ತದೆ? ಜೀವನದ ಸಾರ್ಥಕತೆ (ಸಂಗ್ರಹ ಮತ್ತು ಅನುವಾದ : ಅಲಾವಿಕಾ)

ಅಧ್ಯಾತ್ಮ ಡೈರಿ : ಹಕ್ಕು ಸಾಧಿಸುವ ಮುನ್ನ ಕರ್ತವ್ಯಗಳ ಕಡೆ ಗಮನವಿರಲಿ…

ನಾವು ಮನುಷ್ಯರು, ನಮ್ಮ ಸಹಜೀವಿಗಳ ಬದುಕಿನ ಹಕ್ಕನ್ನು, ಆಹಾರದ ಹಕ್ಕನ್ನು, ಪರಿಸರದ ಹಕ್ಕನ್ನು ಕಿತ್ತುಕೊಂಡಿರುವ ಒಟ್ಟು ಮನುಷ್ಯ ಸಮುದಾಯಕ್ಕೆ `ಮಾನವೀಯ ಹಕ್ಕು’ಗಳ ಬಗ್ಗೆ ಮಾತನಾಡಲು ಎಷ್ಟು ಅಧಿಕಾರವಿದೆ ಎಂದು ಯೋಚಿಸಬೇಕಾಗುತ್ತದೆ. ~ ಅಲಾವಿಕಾ  ನಾವೆಲ್ಲರೂ ನಮ್ಮ ಬದುಕಿನಲ್ಲಿ ಬಹಳ ಅಚ್ಚುಕಟ್ಟಾಗಿ ಮಾಡುವ ಕೆಲಸವೆಂದರೆ, `ಹಕ್ಕು ಸಾಧಿಸುವುದು’. ಅದು ಸಂಪತ್ತೇ ಆಗಿರಲಿ, ಸಂಬಂಧಗಳಿರಲಿ, ಪರಿಸರವಿರಲಿ ಅಥವಾ ಹೆಸರು – ಅದರ ಮೇಲೆ ತನಗೆ ಹಕ್ಕಿದೆ ಎಂದು ಪಟ್ಟು ಹಿಡಿಯುತ್ತೇವೆ. ಡಿವಿಜಿ ಹೇಳಿದಂತೆ `ಅಕ್ಕಿಯೊಳಗನ್ನವನು ಮೊದಲಾರು ಕಂಡವರು’ ಎಂದು ಗೊತ್ತಿಲ್ಲ […]

ನಮಗೆ ನಾವೆ ಹೇಳಿಕೊಳ್ಳುವ 12 ಸುಳ್ಳುಗಳು! : ಮೊದಲ ಕಂತು ~ 1ರಿಂದ 3

ನಮಗೆ ನಾವೆ ಹೇಳಿಕೊಳ್ಳುವ ಸುಳ್ಳುಗಳು ಯಾವತ್ತೂ ಯಾವ ಕಾರಣಕ್ಕೂ ಒಳಿತನ್ನುಂಟು ಮಾಡುವುದಿಲ್ಲ. ಅವುಗಳಿಂದ ಕೆಡುಕು ಕಟ್ಟಿಟ್ಟ ಬುತ್ತಿ. ನಮಗೆ ನಾವೆ ಹೇಳಿಕೊಳ್ಳುವ ಸುಳ್ಳು ನಮ್ಮ ಬೆಳವಣಿಗೆಯ ಸಾಧ್ಯತೆಗಳನ್ನು ಕತ್ತರಿಸಿ  ಹಾಕುವ ಚಿನ್ನದ ಕತ್ತರಿ ~ ಅಲಾವಿಕಾ ಸುಳ್ಳು ಒಂದು ಥರದ ವ್ಯಸನ. ಅದೊಂಥರಾ ಆಯಾ ಕ್ಷಣವನ್ನು ತಳ್ಳಿ ಹಾಕುವ ನಶೆ. ಹೇಗೋ ಆ ಘಳಿಗೆ, ಆ ಘಟನೆಯನ್ನು ದಾಟಿಬಿಟ್ಟರೆ ಸಾಕೆಂದು ನಾವು ಧರಿಸುವ ಭ್ರಮೆಯ ರೆಕ್ಕೆ. ಇತರರಿಗೆ ಸುಳ್ಳು ಹೇಳುವುದು ಒಂದು ಥರವಾದರೆ, ನಮಗೆ ನಾವೇ ಹೇಳಿಕೊಳ್ಳು […]

ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲ : ಅಧ್ಯಾತ್ಮ ಡೈರಿ

ಸಂಗಾತಿಗೆ ‘ನಿನ್ನ ಬಿಟ್ಟಿರಲಾರೆ…’ ಅನ್ನುವಾಗಿನ ಆರ್ತತೆಯಲ್ಲಿ ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲಗಳೆರಡೂ ಹುದುಗಿರುತ್ತವೇನೋ! ಅಂಥದ್ದೊಂದು ಹಂಬಲ ಹುಟ್ಟದ ಹೊರತು, ಅ ಭಯ ಬರೋದಾದರೂ ಎಲ್ಲಿಂದ!? ~ ಅಲಾವಿಕಾ ‘ಆಹ್! ಚೆಂದವಿದೆ!’ ಅಂದುಕೊಂಡ ಹೊತ್ತಲ್ಲೆ ಕುರೂಪವೂ ಹುಟ್ಟಿಕೊಂಡಿರುತ್ತೆ. – ಹಾಗನ್ನುತ್ತೆ ತಾವೋ. ‘ನಾ ನಿನ್ನ ಪ್ರೀತಿಸ್ತೀನಿ’ ಅಂದುಕೊಳ್ಳುವಾಗಲೇ ಯಾವತ್ತಾದರೂ ಚಿಗುರಬಹುದಾದ ದ್ವೇಷದ ಬೀಜ ಬಿತ್ತಿರುತ್ತೀವಾ?- ಅಂದುಕೊಳ್ತೀನಿ ನಾನು. ~ ಎಷ್ಟು ನಿಜ ನೋಡಿ… ಯಾರೋ ದಾರಿಹೊಕನ ಮೇಲೆ ನಮಗ್ಯಾಕೆ ಪ್ರೀತಿ? ಆ ಕಾರಣಕ್ಕೇ ಅಲ್ಲಿ ದ್ವೇಷವೂ ಇರೋದಿಲ್ಲ. ಬಹುಶಃ […]

ಅಧ್ಯಾತ್ಮ ಡೈರಿ ~ ಮಾತು, ಮರು ಮಾತನ್ನು ಬಡಿದೆಬ್ಬಿಸುವಂತೆ ಇರಬಾರದು!

ಸ್ಪಂದನೆ ಮೌನವೂ ಆಗಬಹುದು. ಮತ್ತೊಂದು ಕ್ರಿಯೆಯಲ್ಲಿ ತೊಡಗಿಕೊಳ್ಳುವುದೂ ಆಗಬಹುದು. ಸ್ಪಂದನೆ, ಕೇಳಿಸಿಕೊಂಡ ಮಾತಿನ ಅರ್ಥಗ್ರಹಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ಅಥವಾ ನಿರಾಕರಿಸುವ ಸ್ವಾತಂತ್ರ್ಯವೂ ಆಗಬಹುದು. ಸಂಪೂರ್ಣ ಮಾತು ಕೇಳಿಸಿಕೊಂಡ ನಂತರ ಸ್ಪಂದನೆಯ ಸ್ವರೂಪ ನಿರ್ಧಾರಗೊಳ್ಳುವುದು. ಹಾಗೆಂದೇ ಬುದ್ಧ ಸಂಪೂರ್ಣ ಕೇಳಿಸಿಕೋ, ಆ ತಾಳ್ಮೆ ಬೆಳೆಸಿಕೋ ಅನ್ನೋದು ~ ಅಲಾವಿಕಾ ಕೇಳುವಿಕೆ ನಮ್ಮಲ್ಲಿ ಮೌನವನ್ನು ಹುಟ್ಟಿಸಬೇಕೇ ಹೊರತು ಮಾತನ್ನಲ್ಲ. ಹಾಗೆಯೇ ನಮ್ಮ ಮಾತು ಕೂಡ ಮೌನವನ್ನು ಸ್ಥಾಪಿಸಬೇಕೇ ಹೊರತು ಮರುಮಾತನ್ನು ಬಡಿದೆಬ್ಬಿಸುವಂತಲ್ಲ. ಆದರೆ ನಾವೀಗ ಮಾತಾಡಲೆಂದೇ ಕೇಳಿಸಿಕೊಳ್ಳತೊಡಗಿದ್ದೇವೆ ಮತ್ತು […]

ಅಧ್ಯಾತ್ಮ ಡೈರಿ : ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ….

ನೀರಿಗೆ ಬಿದ್ದಾಗ ಈಜುವುದು ಜಾಣತನ. ಅದನ್ನು ಬಿಟ್ಟು ನೀರಿಗೆ ಹೇಗೆ ಬಿದ್ದೆ, ಯಾಕೆ ಬಿದ್ದೆ, ಯಾರಾದರೂ ದೂಡಿದರೋ ನಾನೇ ಬಿದ್ದೆನೋ ಎಂದೆಲ್ಲ ಯೋಚಿಸುತ್ತ ಆ ಒಂದು ಘಟನೆಯನ್ನು ಸಮಸ್ಯೆಯನ್ನಾಗಿ ಮಾರ್ಪಡಿಸಿಕೊಳ್ಳುತ್ತೇವೆ! ~ ಅಲಾವಿಕಾ ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ. ಮನುಷ್ಯನ ಮನಸ್ಥಿತಿಯನ್ನು ಅವಲಂಬಿಸಿದ ಒಂದು ಮಿಥ್ಯಾವಸ್ಥೆಯದು. ವಾಸ್ತವದಲ್ಲಿ ಸಮಸ್ಯೆ ಎಂಬುದೇ ಇಲ್ಲ. ಅದನ್ನು ನಾವೇ ಹುಟ್ಟುಹಾಕಿಕೊಳ್ಳುತ್ತೇವೆ. ನಾವು ಅವಕಾಶ ಮಾಡಿಕೊಡದ ಹೊರತು ಯಾವ ಸಂಗತಿಯೂ ನಮ್ಮನ್ನು ಬಾಧಿಸಲಾರವು. ಆದ್ದರಿಂದ ಸಮಸ್ಯೆಗಳು ತಲೆದೋರಿದಾಗ ಅವುಗಳ ಬೇರು ನಮ್ಮೊಳಗೇ ಇದೆ […]