ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ : ಒಂದು ಅನುಭಾವ ಸಂಭಾಷಣೆ

ವಚನ ವಾಚನ : ಅಲ್ಲಮನ ಒಂದು ಬೆಡಗಿನ ವಚನ

  ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ ಗಂಡ ಗಂಡರನರಸಿ ತೊಳಲಿ ಬಳಲುತ್ತೈದಾರೆ ಖಂಡ ಮಂಡಲದೊಳಗೆ ಕಂಡೆನೊಂದು ಚೋದ್ಯವ. ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು ಗುಹೇಶ್ವರನಲ್ಲಿಯೇ ನಿರ್ವಯಲಾಯಿತ್ತು ಭಾವಾರ್ಥ : ಪರಶಿವ ತತ್ತ್ವದಲ್ಲಿ ಉದಯಿಸಿದ ಚಿತ್ ಬ್ರಹ್ಮಾಂಡದಿಂದ ಈ ಪ್ರಪಂಚ ಹುಟ್ಟಿಕೊಂಡಿತು. ಅದರಿಂದ ಹೊರಬಂದ ಜೀವರು ತಮ್ಮ ಮೂಲ ಸ್ವಭಾವವನ್ನೆ ಮರೆತರು, ಮಿಥ್ಯೆಯನ್ನು ನಂಬಿದರು. ತಮ್ಮ ನಿಲುವು ಯಾವುದೆಂಬುದನ್ನೆ ಅರಿಯದೆ ವ್ಯರ್ಥವಾಗಿ ಪರಬ್ರಹ್ಮವನ್ನರಸಿ ತೊಳಲಿಬಳಲತೊಡಗಿದರು.  ಇದು ಅಪೂರ್ಣ ಜ್ಞಾನದ ಪರಿಣಾಮ. ವಿವೇಕನೆಂಬ ಶಿಷ್ಯನು ಜ್ಞಾನವೆಂಬ ದರ್ಪಣದಿಂದ ಪರಬ್ರಹ್ಮವನ್ನು […]

ಅಧ್ಯಾತ್ಮ ಡೈರಿ : ಕೊಟ್ಟ ಕುದುರೆಯ ಬಿಟ್ಟು ಹಲಬುವ…

ಚಿಕ್ಕ  ಚಿಕ್ಕ ವಿಷಯಕ್ಕೆ ನೀವು ಪಡುವ ಫ್ರಸ್ಟ್ರೇಶನ್ ನಿಮ್ಮ ಮುಂದಿನ ಕೆಲಸಗಳ ಮೇಲೆ ನಿಮಗೇ ಅರಿವಿಲ್ಲದಂತೆ ಪರಿಣಾಮ ಬೀರುತ್ತಾ, ಒಂದಕ್ಕೊಂದು ಢಿಕ್ಕಿ ಹೊಡೆಯುವ ಲೋಲಕಗಳಂತೆ ಹೊಯ್ದಾಡತೊಡಗುತ್ತದೆ. ಹಾಗೇ, ಇಷ್ಟು ಚಿಕ್ಕ ವಿಷಯದಲ್ಲಿ, ಕೈಲಿರುವುದಕ್ಕೆ ತೃಪ್ತಿಪಡಲು ಕಲಿತಿರದ ನೀವು, ದೊಡ್ಡ ನಿರೀಕ್ಷೆಗಳ ವಿಷಯದಲ್ಲಿ ಹೇಗೆ ವರ್ತಿಸುವಿರಿ!? ಯೋಚಿಸಿ. ಯಾವುದೋ ಒಂದು ಫನ್ ಗೇಮ್ ಕಾಂಪಿಟೇಶನ್. ಅದರಲ್ಲಿ ನಿಮಗೆ ಬಹುಮಾನ ಬಂದಿರುತ್ತದೆ. ನಿಮ್ಮ ಗೆಳೆಯರಿಗೂ ಬಂದಿರುತ್ತದೆ. ಬಹುಮಾನ ರೂಪದಲ್ಲಿ ನಿಮಗೆ ಕೊಡಲಾಗಿರುವ ವಸ್ತು ಏನಿರಬಹುದು ಅನ್ನುವಷ್ಟೇ, ಅಥವಾ ಅದಕ್ಕಿಂತ ಹೆಚ್ಚಿನ […]