ಅಂತಿಮ ಪ್ರವಾದಿ ಹೇಳಿದ್ದು : ಅರಳಿಮರ POSTER

“ತನ್ನನ್ನು ತಾನು ಅರಿತವರು ಅಲ್ಲಾಹ್’ನನ್ನು ಅರಿಯಬಲ್ಲರು” ಅನ್ನುತ್ತಾರೆ ಪ್ರವಾದಿ ಮಹಮ್ಮದ್. ಅರಿವು ಹುಡುಕುತ್ತಾ ನಡೆದವರೆಲ್ಲರೂ ಆತ್ಯಂತಿಕವಾಗಿ ಪಡೆಯುವುದು ಒಂದನ್ನೇ. ಆ ಒಂದನ್ನೇ ಹಲವರು ಹಲವು ಬಗೆಯಲ್ಲಿ ಹೇಳುವರು. ಭಗವಂತನ ಹುಡುಕಾಟದ ಬಗ್ಗೆ ಯಾರು ಏನು ಹೇಳಿದ್ದಾರೆ ಅನ್ನುವುದನ್ನು ‘ಚಿತ್ರಭಿತ್ತಿ’ಯ ಹಲವು Posterಗಳಲ್ಲಿ ನೊಡಿದ್ದೀರಿ. ಇಸ್ಲಾಮ್ ಸಮುದಾಯದ ಅಂತಿಮ ಪ್ರವಾದಿ ಮಹಮ್ಮದ್ ಕೂಡ ಅದನ್ನೇ ಹೇಳಿರುವುದನ್ನು ಗಮನಿಸಿ. “ತನ್ನನ್ನು ತಾನು ಅರಿತವರು ಅಲ್ಲಾಹನನ್ನು ಅರಿಯಬಲ್ಲರು” ಅನ್ನುವ ಮೂಲಕ ನಾವು ಭಗವಂತನ ವಿಸ್ತರಣೆ ಎಂದು ಪ್ರವಾದಿಯವರು ಸೂಚ್ಯವಾಗಿ ಹೇಳಿದ್ದಾರೆ.  ಮುಂದೆ […]

ಬಾದಶಾಹ್ ಕೇಳಿದ ಎರಡು ಪ್ರಶ್ನೆಗಳು

ಪರ್ಷಿಯಾದ ಬಾದಶಾಹ್’ನಿಗೆ ಒಮ್ಮೆ ತನ್ನ ರಾಜ್ಯದ ಪ್ರಖ್ಯಾತ ಸೂಫಿ ಪೀರ್ (ಗುರು) ಎಷ್ಟು ಬುದ್ಧಿವಂತ ಎಂದು ಪರೀಕ್ಷಿಸುವ ಹುಕಿ ಬಂತು. ಸೂಫಿ ಪೀರನನ್ನು ಆಸ್ಥಾನಕ್ಕೆ ಕರೆಸಲಾಗುವುದಿಲ್ಲ. ಕರೆದರೆ ಆತ ಬರುವುದೂ ಇಲ್ಲ! ಹೀಗಾಗಿ ಬಾದಶಾಹ್ ತಾನೇ ಖುದ್ದಾಗಿ ಅವನ ಬಳಿ ಹೋದ. ಹೀಗೆ ಅಚಾನಕ್ಕಾಗಿ ಬಾದಶಾಹ್’ನನ್ನು ಸ್ವಾಗತಿಸಿದ ಸೂಫಿ ಪೀರ್, ಹಣ್ಣುಹಂಪಲು ನೀಡಿ ಸತ್ಕರಿಸಿದ. ಬಾದಶಾಹ್ ಎಲ್ಲವನ್ನೂ ಸ್ವೀಕರಿಸಿ, ನಿಧಾನವಾಗಿ ಪೀಠಿಕೆ ಹಾಕುತ್ತಾ ಹೇಳಿದ. “ಪೀರ್, ಅಲ್ಲಾಹನ ಕುರಿತು ನನಗೆ ಕೆಲವು ಅನುಮಾನಗಳು ಕಾಡುತ್ತಿವೆ. ಇದನ್ನು ನೀವು […]