ಝೆನ್, ಆನಂದದಿಂದ ಸರಳವಾಗಿ ಬದುಕಲಿಕ್ಕೆಂದೇ ಇರುವ ಆಧ್ಯಾತ್ಮಿಕ ಜೀವನಶೈಲಿ. ಈ ಜೀವನಶೈಲಿಯಲ್ಲಿ ಮುಖ್ಯವಾಗಿ ಕಂಡುಬರುವುದು ವ್ಯಕ್ತಿಗಳ ನಡುವೆ ಪರಸ್ಪರ ‘ಅವಕಾಶ’ (space). ಯಾವುದೇ ಸಂಬಂಧದಲ್ಲಿ ಪರಸ್ಪರ ‘ಸ್ಪೇಸ್’ ಅಥವಾ ತಮ್ಮತನಕ್ಕೆ ಅವಕಾಶ ನೀಡುವುದು ಮುಖ್ಯವಾಗುತ್ತದೆ. ಹೀಗೆ ಅವಕಾಶ ನೀಡದೆ ಇರುವುದೇ ಎಲ್ಲ ಸಮಸ್ಯೆಗಳ ಮೂಲ ಕಾರಣವಾಗಿಬಿಡುತ್ತದೆ. ನಾವು ನಮ್ಮ ಮಕ್ಕಳನ್ನು, ನಮ್ಮ ಗೆಳೆಯರನ್ನು, ಸಂಗಾತಿಯನ್ನು ವಿಪರೀತವಾಗಿ ಪ್ರೀತಿಸುತ್ತೇವೆ ಎಂದುಕೊಳ್ಳಿ. ಈ ಪ್ರೀತಿಯೇ ಕಾಳಜಿಯ ರೂಪದಲ್ಲಿ ವ್ಯಕ್ತವಾಗುತ್ತ ಇರುತ್ತದೆ. ಆದರೆ ಈ ಕಾಳಜಿ ಅವರ ಉಸಿರುಗಟ್ಟಿಸುವಂತೆ ಇರಬಾರದು. ಅವರ […]
ಆತ್ಮ, ಆಕಾಶ ಮತ್ತು ಶೂನ್ಯವೆಂಬ ಅನಂತ ಅವಕಾಶ : ಅಧ್ಯಾತ್ಮ ಡೈರಿ
ಯಾವುದೇ ವಸ್ತುವನ್ನು ಹಿಡಿದಿಟ್ಟುಕೊಳ್ಳಲೊಂದು ಖಾಲಿ ‘ಇರಬೇಕು’. ಅನಸ್ತಿತ್ವವೇ ‘ಅಸ್ತಿ’ – ‘ಇದೆ’ ಎಂದಾಗಬೇಕು. ಈ ಅನಸ್ತಿತ್ವದ ಅಸ್ತಿತ್ವವೇ ಅತ್ಯುಪಯುಕ್ತ, ಇದೇ ಸೃಷ್ಟಿ ಸಾಧ್ಯತೆಯ ಅನಂತ ದಿಬ್ಬ ~ ಅಲಾವಿಕಾ ಮೂವತ್ತು ಅರೆಗಳಿದ್ದರೂ ಚಕ್ರವನ್ನ ಹಿಡಿದಿಡೋದು ಅವನ್ನು ಒಗ್ಗೂಡಿಸುವ ರಂಧ್ರ. ಕುಂಬಾರ ಮಣ್ಣು ತುಳಿತುಳಿದು ಚೆಂದದ ಮಡಿಕೆ ಮಾಡಿದರೂ ಉಪಯೋಗಕ್ಕೆ ಬರೋದು ಆಕಾರವಲ್ಲ, ಅದರೊಳಗಿನ ಖಾಲಿ. ಬಾಗಿಲಿಲ್ಲದೆ ಕೋಣೆಯೊಳಕ್ಕೆ ಬರಲಾಗದು, ಕಿಟಕಿಗಳಿಲ್ಲದೆ ಕೋಣೆಯೊಳಕ್ಕೆ ಬರಿ ಕತ್ತಲು. ಅನಸ್ತಿತ್ವ ನಿಜಕ್ಕೂ ಬಹೂಪಯೋಗಿಯಾಗಿರುವುದು. ಅನ್ನುತ್ತಾನೆ ತತ್ತ್ವಜ್ಞಾನಿ ಲಾವೋತ್ಸು ತನ್ನ `ದಾವ್ ದ […]
ಕನ್’ಫ್ಯೂಶಿಯಸ್ ಹೇಳಿದ್ದು…. : ಅರಳಿಮರ POSTER
ನಮಗೆ ಬದುಕಲು ಒಂದೇ ಅವಕಾಶ ಇರುವುದು ಎಂಬುದು ಮನದಟ್ಟಾಗಿಬಿಟ್ಟರೆ, ಆ ಕ್ಷಣದಿಂದಲೇ ನಾವು ನಮ್ಮ ಬದುಕನ್ನು ಸುಂದರವಾಗಿಟ್ಟುಕೊಳ್ಳುವ ಪ್ರಯತ್ನ ಆರಂಭಿಸುತ್ತೇವೆ, ಹೊಸತಾಗಿ ಬದುಕಲು ತೊಡಗುತ್ತೇವೆ – ಅನ್ನುವುದು ಕನ್’ಫ್ಯೂಶಿಯಸ್ ಮಾತಿನ ಅರ್ಥ ~ ‘ಲಾ ಬದುಕು ಮನುಷ್ಯ ಜೀವಿಗಳಿಗೆ ಮಾತ್ರ ಇರುವಂಥದ್ದು. ಉಳಿದೆಲ್ಲ ಜೀವಿಗಳು ಹುಟ್ಟು – ಸಾವಿನ ನಡುವೆ ಆಹಾರ, ಸಂಭೋಗ ಮತ್ತು ನಿದ್ರೆಗಳ ಚಕ್ರದಲ್ಲಿ ಸುತ್ತುತ್ತಾ ಇರುತ್ತವೆ. ಮನುಷ್ಯರ ಜೀವನ ಚಕ್ರದಲ್ಲಿ ಧರ್ಮ, ದುಡಿಮೆ, ಕಾಮ ಮತ್ತು ಮುಕ್ತಿಯ ಹೆಚ್ಚುವರಿ ಉದ್ದೇಶಗಳೂ ಇರುವುದರಿಂದ […]