ಬಲಿ ಮತ್ತು ತ್ರಿವಿಕ್ರಮ : ಪಾಡ್ಯಮಿ ಕಲಿಸುವ ಪಾಠ

ಬಹಳ ಬಾರಿ ಹೀಗಾಗುತ್ತದೆ. ನಮ್ಮ ಬಲದ ಬಲವಂತೂ ಸರಿಯೇ. ಎದುರಿಗೆ ಇರುವವರ ದೌರ್ಬಲ್ಯವೂ ನಮಗೆ ಹೆಚ್ಚುವರಿ ಬಲವಾಗಿ ಸೇರ್ಪಡೆಯಾಗುತ್ತದೆ. ವಾಮನ ತ್ರಿವಿಕ್ರಮನಾಗಿ ಬೆಳೆದನೆಂಬ ಸಂಕೇತದ ತಿರುಳು ಇದೇ ಆಗಿದೆ. ಇದು ನಮ್ಮೊಳಗೂ ನಡೆಯಬಹುದು ~ ಆನಂದಪೂರ್ಣ ಭಾಗವತ ಪುರಾಣದಲ್ಲಿ ಒಂದು ಕಥೆ ಬರುತ್ತದೆ. ಈ ಕಥೆ ಮಹಾವಿಷ್ಣುವಿನ ಐದನೇ ಅವತಾರದ ಕುರಿತಾದದ್ದು. ದೈತ್ಯ ರಾಜ ಬಲಿ ಚಕ್ರವರ್ತಿ ಇಂದ್ರಲೋಕವೂ ಸೇರಿದಂತೆ ಭೂಮ್ಯಾಕಾಶಗಳನ್ನು ಗೆದ್ದು ಕೊಂಡಿರುತ್ತಾನೆ. ಅದನ್ನು ಉಪಾಯದಿಂದ ಮರಳಿ ಗಳಿಸಿಕೊಳ್ಳಲು ವಿಷ್ಣುವು ವಾಮನನ ಅವತಾರ ತಾಳಿ ಬರುತ್ತಾನೆ. […]

ಬ್ರಹ್ಮದತ್ತ ಎಂಬ ಬೋಧಿಸತ್ವ ಆನೆ : ಬುದ್ಧನ ಜಾತಕ ಕಥೆಗಳು

ಬೋಧಿಸತ್ವನ ಅನೇಕ ಅವತಾರಗಳಲ್ಲಿ, ಬ್ರಹ್ಮದತ್ತ ಎಂಬ ಚಂದಿರನಂತೆ ಹೊಳೆವ ಬಿಳಿ ಬಣ್ಣದ ಆನೆಯೂ ಒಂದು. ತನ್ನ ಸಹಪಾಠಿ ಆನೆಗಳು ಮರವನ್ನು ಮುರಿಯುವುದು, ಇತರ ಪ್ರಾಣಿಗಳನ್ನು ಹಿಂಸಿಸುವುದು ಮುಂತಾದ ಕಾರ್ಯಗಳನ್ನು ಮಾಡುತಿದ್ದರೆ, ಬ್ರಹ್ಮದತ್ತ ಮಾತ್ರ ಯಾರಿಗೂ ತೊಂದರೆ ಕೊಡದೆ, ಬದಲಿಗೆ ಎಲ್ಲರಿಗೂ ತನ್ನ ಕೈಲಾದ ಸಹಾಯ ಮಾಡುತ್ತಾ ಬದುಕುತಿತ್ತು. ಒಮ್ಮೆ ದಾರಿಹೋಕನೊಬ್ಬ ಬ್ರಹ್ಮದತ್ತನಿದ್ದ ಕಾಡನ್ನು ದಾಟಬೇಕಾಗಿತ್ತು. ಕಾಡನ್ನು ದಾಟುವಾಗ ದಾರಿ ತಪ್ಪಿದ ದಾರಿಹೋಕ, ಭಯಭೀತನಾಗಿ ದಾರಿ ಹುಡುಕುತಿದ್ದಾಗ, ಬ್ರಹ್ಮದತ್ತ ಎದುರಿಗೆ ಬಂದ. ಬ್ರಹ್ಮದತ್ತನನ್ನು ಕಂಡ ದಾರಿಹೋಕ, ಓಡಲು ಆರಂಭಿಸಿದ. […]