ಸಾಧಕರು ಮತ್ತು ಸೌಂದರ್ಯ

ದೇಹ ಸೌಂದರ್ಯ ಸಾಧನೆಗೆ ಅಡ್ಡಿ ಅನ್ನುವುದು ಬಹುತೇಕ ಸಾಧಕರ ಅಭಿಮತ. ಹಾಗೆಂದು ಅವರು ಲೋಕದ ಚೆಲುವಿಗೆ ಮುಖ ತಿರುವಿದವರಲ್ಲ, ಸಾಧನೆಗಾಗಿ ಸ್ವತಃ ತಮ್ಮ ಚೆಲುವನ್ನೆ ಕುಂದಿಸಿಕೊಂಡವರು. ಮೀರಾ, ಅಕ್ಕ, ಶಾರದಾ ಮಾತೆ, ಝೆನ್ ಬಿಕ್ಖುಣಿ ರ್ಯೊನೆನ್, ಸಂತ ಅವ್ವೈಯಾರ್… ಈ ಸಾಲು ದೊಡ್ಡದಿದೆ. ಸೌಂದರ್ಯಕ್ಕೆ ಮನಸೋಲದವರಿಲ್ಲ. ಆದರೆ ಈ ಭರಾಟೆಯಲ್ಲಿ ಚೆಂದವಿಲ್ಲದ್ದನ್ನು ತಿರಸ್ಕರಿಸೋದು ಪ್ರಮಾದವೇ ಸರಿ. ವಾಸ್ತವವಾಗಿ `ಚೆಂದವಿಲ್ಲದ್ದು’ ಎನ್ನುವ ಯಾವ ವಸ್ತುವೂ, ಜೀವಿಯೂ ಸೃಷ್ಟಿಯಲ್ಲಿ ಇಲ್ಲ. `ಆಹ್! ಚೆಂದವಿದೆ ಎಂದುಕೊಳ್ಳುವ ಕ್ಷಣದಲ್ಲೇ ಕುರೂಪವೂ ಹುಟ್ಟಿಕೊಳ್ಳುತ್ತೆ’ ಎನ್ನುತ್ತದೆ […]