ಜ್ಞಾನ, ವೈರಾಗ್ಯ ಮತ್ತು ಆಹಾರ ಸಮೃದ್ಧಿಗಾಗಿ ಅನ್ನಪೂರ್ಣಾ ಸ್ತೋತ್ರ

ಅನ್ನಪೂರ್ಣೇಶ್ವರಿಯನ್ನು ಕೊಂಡಾಡುವ ಎಂಟು ಶ್ಲೋಕಗಳ ಅನ್ನಪೂರ್ಣಾ ಸ್ತೋತ್ರ ಅಥವಾ ಅನ್ನಪೂರ್ಣಾಷ್ಟಕವನ್ನು ರಚಿಸಿದವರು ಶ್ರೀ ಶಂಕರಾಚಾರ್ಯರು. ಪಂಚಮುಖಿ ಬ್ರಹ್ಮನ ಒಂದು ಶಿರವನ್ನು ಲಯಕರ್ತ ಶಿವನು ಕಿತ್ತುಹಾಕಿದಾಗ ಆ ಶಿರಸ್ಸು (ಕಪಾಲ) ಅವನ ಕೈಯನ್ನು ಕಚ್ಚಿಹಿಡಿಯುತ್ತದೆ. ಈ ಬ್ರಹ್ಮ ಕಪಾಲವನ್ನು ಹಿಡಿದು ಭಿಕ್ಷೆ ಬೇಡಬೇಕು, ಯಾವಾಗ ಅದು ತುಂಬುತ್ತದೆಯೋ ಆಗ ಅದರಿಂದ ಮುಕ್ತಿ ಸಿಗುವುದೆಂದು ನಾರಾಯಣ ತಿಳಿಸುತ್ತಾನೆ. ಅದರಂತೆ ಶಿವ ಮೂರು ಲೋಕವೆಲ್ಲ ತಿರುಗಿ ಭಿಕ್ಷೆ ಬೇಡಿದರೂ ಕಪಾಲ ತುಂಬುವುದಿಲ್ಲ. ಕೊನೆಗೆ ಪಾರ್ವತಿಯೇ ಅನ್ನಪೂರ್ಣೇಶ್ವರಿಯಾಗಿ ಭೂಮಿಯಲ್ಲಿ ಅವತರಿಸಿ, ಶಿವನಿಗೆ ಭಿಕ್ಷೆ ನೀಡುತ್ತಾಳೆ. ಜಗಜ್ಜನನಿ ನೀಡುವ ಭಿಕ್ಷೆಗೆ ಕಪಾಲ ತುಂಬಿ ಶಿವ ಮುಕ್ತನಾಗುತ್ತಾನೆ. ಇಂಥಾ ಮಹಿಮಾನ್ವಿತಳಾದ … Continue reading ಜ್ಞಾನ, ವೈರಾಗ್ಯ ಮತ್ತು ಆಹಾರ ಸಮೃದ್ಧಿಗಾಗಿ ಅನ್ನಪೂರ್ಣಾ ಸ್ತೋತ್ರ