ಅಷ್ಟಾಂಗ ಯೋಗ : ಹಾಗೆಂದರೇನು? ಮಾಡುವುದು ಹೇಗೆ?

ಅಷ್ಟಾಂಗ ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ ದೇಹಸ್ವಾಸ್ಥ್ಯ, ಮನೋಸ್ವಾಸ್ಥ್ಯ ಮತ್ತು ನಮ್ಮ ಪ್ರಯತ್ನಬಲದ ಮೇಲೆ ಆತ್ಮೋನ್ನತಿ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ನಮ್ಮನ್ನು ನಾವು ದೇಹದೊಂದಿಗೆ ಗುರುತಿಸಿಕೊಂಡು ನಿಜವಾದ ಅಸ್ತಿತ್ವವನ್ನು, ನಾವು ಸಚ್ಚಿದಾನಂದ ರೂಪಿ ಆತ್ಮ ಎಂಬುದನ್ನು ಮರೆತುಬಿಟ್ಟಿದ್ದೇವೆ. ಯೋಗದ ಗುರಿಯು ನಮ್ಮನ್ನು ಈ ದೈಹಿಕ ಗುರುತಿನಿಂದ ‘ವಿಯೋಗ’ಗೊಳಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಯೋಗಾಚಾರ್ಯ ಪತಂಜಲಿಯು ಅಷ್ಟಾಂಗ ಯೋಗವನ್ನು ನಿರೂಪಿಸಿದ್ದು, ಅವು ಹೀಗಿವೆ: ಯಮ (ನಿಗ್ರಹ), ನಿಯಮ (ಕಟ್ಟಳೆ), ಆಸನ (ಭಂಗಿ), ಪ್ರಾಣಾಯಾಮ (ಪ್ರಾಣಶಕ್ತಿಗಳ ನಿಯಂತ್ರಣ), ಪ್ರತ್ಯಾಹಾರ(ಹಿಂತೆಗೆದುಕೊಳ್ಳುವ ಪ್ರಕ್ರಿಯೆ), […]