ಎಲ್ಲಿಯವರೆಗೆ ನಾವು ದ್ರಷ್ಟಾ ಆಗಿರುತ್ತೇವೆಯೋ, ನೋಡುವವರೇ ನಾವಾಗಿರುತ್ತೇವೆಯೋ, ಅಲ್ಲಿಯವರೆಗೆ ನಾವು ಸ್ವತಂತ್ರರು. ನೋಡುವವರು ಮತ್ತೊಬ್ಬರಿದ್ದಾರೆ ಎಂದು ಭಾವಿಸಿದ ಕ್ಷಣದಲ್ಲೆ ನಿಮ್ಮನ್ನು ಬಂಧನ ಆವರಿಸಿಬಿಡುತ್ತದೆ ~ ಸಾ.ಹಿರಣ್ಮಯಿ
ನೀನು ‘ಕರ್ತ’ನಲ್ಲ, ಆದ್ದರಿಂದ ಭೋಕ್ತನೂ ಅಲ್ಲ
ಬಹುತೇಕರಿಗೆ ತಮ್ಮ ದುಷ್ಕರ್ಮಗಳ ಫಲದಿಂದ ತಪ್ಪಿಸಿಕೊಳ್ಳುವುದರಲ್ಲಿ ಆಸಕ್ತಿಯೇ ಹೊರತು, ಸತ್ಕರ್ಮಗಳ ಫಲವನ್ನು ಬಿಟ್ಟುಕೊಡುವುದರಲ್ಲಿ ಅಲ್ಲ! ~ ಸಾ.ಹಿರಣ್ಮಯೀ
ನೀನು ಬೇರೇನೂ ಅಲ್ಲ, ನೀನು ವಿಶ್ವಸಾಕ್ಷಿ
ಭಗವಂತ ಸಂಪೂರ್ಣವಾಗಿ ಶ್ರೇಷ್ಠನಾಗಿರುವಾಗ, ಆ ಶ್ರೇಷ್ಠತೆಯಲ್ಲೂ ಈ ಭಾಗ ಉಚ್ಚ, ಈ ಭಾಗ ನೀಚ ಎನ್ನುವ ಭೇದದೊಂದಿಗೆ ಓದಿಕೊಳ್ಳುವುದು ಸರಿಯಾದ ಮಾರ್ಗವಲ್ಲ…. | ಭಾವಾರ್ಥ : ಸಾ.ಹಿರಣ್ಮಯೀ
ಸುಖದಿಂದ ಶಾಂತಿ, ಶಾಂತಿಯಿಂದ ಮುಕ್ತಿ…
“ಮುಕ್ತಿ ದೊರೆಯಬೇಕೆಂದರೆ ಮೊದಲು ನಮ್ಮಲ್ಲಿ ಶಾಂತಿ ನೆಲೆಸಬೇಕು. ಶಾಂತಿ ನೆಲೆಸಬೇಕೆಂದರೆ ಮೊದಲು ನಮ್ಮನ್ನು ನಾವು ಪಂಭೂತಗಳಿಂದ ನಿರ್ಮಾಣವಾಗಿರುವ ಈ ದೇಹದ ಗುರುತಿನಿಂದ ನಮ್ಮನ್ನು ಬಿಡಿಸಿಕೊಂಡು ಚಿದ್ರೂಪದಲ್ಲಿ ನೆಲೆಸಬೇಕು ” ಅನ್ನುತ್ತಾನೆ ಅಷ್ಟಾವಕ್ರ | ಭಾವಾರ್ಥ : ಸಾ.ಹಿರಣ್ಮಯೀ
ಪಂಚಭೂತಗಳ ಸಾಕ್ಷಿ ನೀನು, ಆ ಚಿದ್ರೂಪ ನೀನು….
“ನೀನು ಮುಕ್ತಿ ಪಡೆಯಬೇಕು ಎಂದಾದರೆ, ಮೊದಲು ನಿನ್ನನ್ನು ನೀನು ಅರಿಯಬೇಕು. ನಾನು ಮುಕ್ತಿ ಬಯಸುತ್ತೇನೆ ಎಂದಾದರೆ, ಮೊದಲು ನಾನು ಯಾರು ಎಂಬ ಅರಿವಿರಬೇಕು” ಎಂದು ಅಷ್ಟಾವಕ್ರನು ಜನಕ ಮಹಾರಾಜನಿಗೆ ವಿವರಿಸುತ್ತಾನೆ | ಭಾವಾರ್ಥ : ಸಾ.ಹಿರಣ್ಮಯಿ
ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ?
ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ ಎಂದು ಜನಕ ರಾಜ ಕೇಳುವ ಪ್ರಶ್ನೆಗೆ ಅಷ್ಟಾವಕ್ರ ನೀಡುವ ಉತ್ತರ ಹೀಗಿದೆ…. ~ ಸಾ.ಹಿರಣ್ಮಯಿ
ಅಷ್ಟಾವಕ್ರ ಗೀತಾ : ಈವರೆಗಿನ ಸಂಚಿಕೆಗಳು
ಈವರೆಗೆ ಅಷ್ಟಾವಕ್ರ ಗೀತೆಯ 14 ಶ್ಲೋಕಗಳ ಅರ್ಥ ಮತ್ತು ತಾತ್ಪರ್ಯ ಪ್ರಕಟವಾಗಿದ್ದು, ಅವುಗಳ ಕೊಂಡಿಯನ್ನು ಒಟ್ಟಿಗೆ ನೀಡಲಾಗಿದೆ. ಬರುವ ದಿನಗಳಲ್ಲಿ ಅಷ್ಟಾವಕ್ರ ಗೀತೆಯ ಸರಣಿ ನಿರಂತರವಾಗಿ ಮುಂದುವರಿಯಲಿದೆ ~ ಸಾ.ಹಿರಣ್ಮಯಿ ಒಂದು ನಡು ಮಧ್ಯಾಹ್ನ ಜನಕ ಮಹಾರಾಜ ಆಸ್ಥಾನದಲ್ಲಿ ಕುಳಿತಿದ್ದ. ಹಾಗೇ ನಿದ್ರೆಯ ಜೊಂಪು ಹತ್ತಿತು. ಆ ನಿದ್ರೆಯಲ್ಲಿ ಸಣ್ಣದೊಂದು ಕನಸು. ಆ ಕನಸಿನಲ್ಲಿ ಜನಕ ಮಹಾರಾಜ ಊಟಕ್ಕಾಗಿ ಯಾರ ಬಳಿಯೋ ಯಾಚಿಸುತ್ತಿದ್ದಾನೆ. ಆದರೆ ಅವರು ಕೈಯಾಡಿಸಿ ಹೊರಟುಹೋಗುತ್ತಿದ್ದಾರೆ. ಒಂದೆಡೆ ಹಸಿವು, ಮತ್ತೊಂದೆಡೆ ನಿರಾಕರಣೆಯ ಸಂಕಟ. ಈ ನೋವು […]
ರಾಜ್ಯ ಕಳೆದುಕೊಂಡು ಭಿಕ್ಷುಕನಾದ ಜನಕ ಮಹಾರಾಜನ ಕಥೆ
ಇನ್ನೇನು ಜನಕ ಅದನ್ನು ತಿನ್ನಲು ಕೂರಬೇಕು… ಗಿಡುಗವೊಂದು ರೆಕ್ಕೆ ಫಡಫಡಿಸುತ್ತಾ ಹಾರಿಬಂದು ದೂಳೆಬ್ಬಿಸಿತು. ಜನಕನ ಕೈಯಿಂದ ಅನ್ನದ ಕೊಟ್ಟೆ ಜಾರಿಬಿದ್ದು ಮಣ್ಣಲ್ಲಿ ಕಲೆಸಿಹೋಯಿತು. ಹಸಿದ ಜನಕ, ಮಣ್ಣಲ್ಲಿ ಅನ್ನ, ಒಂದೇ ಸಮ ಸುರಿಯುತ್ತಿರುವ ಕಣ್ಣೀರು… ಕ್ಷಣ ಕಳೆದು ಕಣ್ತೆರೆದರೆ, ಎದುರಲ್ಲಿ ಮಂತ್ರಿ ಆತಂಕದಿಂದ ನಿಂತಿದ್ದಾನೆ! ~ ಸಾ.ಹಿರಣ್ಮಯಿ ಮಿಥಿಲೆಯ ರಾಜಧಾನಿಯ ಮೇಲೆ ಶತ್ರು ರಾಜನೊಬ್ಬ ಆಕ್ರಮಣ ಮಾಡಿದ. ಧಿಡೀರನೆ ಮುತ್ತಿಗೆ ಹಾಕಿದ ಸೇನೆಯನ್ನು ಎದುರಿಸಲಾಗದೆ ಜನಕನ ಸೈನ್ಯ ಸೋತುಹೋಯಿತು. ಜನಕ ಮಹಾರಾಜ ಅಧಿಕಾರಚ್ಯುತನಾಗಬೇಕಾಯಿತು. ಸೈನಿಕರು ಜನಕನನ್ನು ಬಂಧಿಸಿ, […]