ತಾವೋ ತಿಳಿವು #33 ~ ಇಲ್ಲಿ ಸಿದ್ಧಿ ಅಸಾಧ್ಯ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋ ಬ್ರಹ್ಮಾಂಡದ ಚುಕ್ಕಾಣಿ, ಒಳಿತಿಗಾಗಿ ಕಾಯುತ್ತಿರುವ ನಿಧಿ, ಕೆಡಕು ಶರಣಾಗುವ ಜಾಗ. ಸಿಹಿ ಮಾತುಗಳಿಂದ ಮನ್ನಣೆ ಸತ್ಕಾರ್ಯಗಳಿಂದ ಸ್ಥಾನ ಮಾನ ಸಾಧ್ಯ. ಆದರೆ, ತಾವೋಗೆ ಮೌಲ್ಯಗಳ ಹಂಗಿಲ್ಲ; ಅಂತೆಯೇ ಇಲ್ಲಿ ಸಿದ್ಧಿ ಅಸಾಧ್ಯ. ಹೊಸ ನಾಯಕ ಕಾಣಿಸಿಕೊಂಡಾಗ ಅವನಿಗೆ ಸಂಪತ್ತು, ಅನುಭವ ಧಾರೆಯೆರೆಯದಿರಿ. ಬದಲಾಗಿ, ತಾವೋ ಕಾಣಿಸಿ. ಸಂತರಿಗೆ ತಾವೋ ಯಾಕೆ ಆಪ್ಯಾಯಮಾನ? ಯಾಕೆಂದರೆ ಅವರು ಹುಡುಕಿದ್ದನ್ನು ಕಂಡುಕೊಳ್ಳುತ್ತಾರೆ, ಎಡವಿದಾಗ ಸಂತೈಸಲ್ಪಡುತ್ತಾರೆ, ಹಾಗೆಂದೇ ತಾವೋ […]

ತಾವೋ ತಿಳಿವು #23 ~ ಪ್ರಧಾನ ಬಡಗಿಯ ಸ್ಥಾನದ ಮೇಲೆ ಕಣ್ಣು ಹಾಕುವುದು!

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಜಗತ್ತಿನ ಎಲ್ಲವೂ ಬದಲಾಗುತ್ತಲೇ ಇರುತ್ತವೆ ಎನ್ನುವುದು ಮನವರಿಕೆಯಾದಾಗ ಯಾರೂ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಸಾವಿನ ಭಯ ಇಲ್ಲದೇ ಹೋದಾಗ ಯಾವುದೂ ಅಸಾಧ್ಯ ಅನಿಸುವುದಿಲ್ಲ. ಮುಂದಿನ ಆಗು ಹೋಗುಗಳನ್ನು ಅಂಕೆಯಲ್ಲಿಡಲು ಹವಣಿಸುವುದು ಪ್ರಧಾನ ಬಡಗಿಯ ಸ್ಥಾನದ ಮೇಲೆ ಕಣ್ಣು ಹಾಕಿದಂತೆ. ನೆನಪಿರಲಿ, ಅವನ ಉಳಿಯ ಮುಟ್ಟಿದವರೆಲ್ಲ ಬೆರಳು ಕತ್ತರಿಸಿಕೊಂಡಿದ್ದಾರೆ!