ಅಧ್ಯಾತ್ಮ ಡೈರಿ : ಖಾಲಿಯೂ ಒಂದು ಇರುವಿಕೆ !

ಯಾವುದೇ ವಸ್ತುವನ್ನು ಹಿಡಿದಿಟ್ಟುಕೊಳ್ಳಲೊಂದು ಖಾಲಿ ‘ಇರಬೇಕು’. ಅನಸ್ತಿತ್ವವೇ ‘ಅಸ್ತಿ’ – `ಇದೆ’ ಎಂದಾಗಬೇಕು. ಈ ಅನಸ್ತಿತ್ವದ ಅಸ್ತಿತ್ವವೇ ಅತ್ಯುಪಯುಕ್ತ, ಇದೇ ಸೃಷ್ಟಿ ಸಾಧ್ಯತೆಯ ಅನಂತ ದಿಬ್ಬ ~ ಅಲಾವಿಕಾ ಮೂವತ್ತು ಅರೆಗಳಿದ್ದರೂ ಚಕ್ರವನ್ನ ಹಿಡಿದಿಡೋದು ಅವನ್ನು ಒಗ್ಗೂಡಿಸುವ ರಂಧ್ರ. ಕುಂಬಾರ ಮಣ್ಣು ತುಳಿತುಳಿದು ಚೆಂದದ ಮಡಿಕೆ ಮಾಡಿದರೂ ಉಪಯೋಗಕ್ಕೆ ಬರೋದು ಆಕಾರವಲ್ಲ, ಅದರೊಳಗಿನ ಖಾಲಿ. ಬಾಗಿಲಿಲ್ಲದೆ ಕೋಣೆಯೊಳಕ್ಕೆ ಬರಲಾಗದು, ಕಿಟಕಿಗಳಿಲ್ಲದೆ ಕೋಣೆಯೊಳಕ್ಕೆ ಬರಿ ಕತ್ತಲು. ಅನಸ್ತಿತ್ವ ನಿಜಕ್ಕೂ ಬಹೂಪಯೋಗಿಯಾಗಿರುವುದು  ~ ಅನ್ನುತ್ತಾನೆ ತತ್ತ್ವಜ್ಞಾನಿ ಲಾವೋತ್ಸು ತನ್ನ `ತಾವೋ ತೆ […]

ನಾನೆಂಬ ಆಭಾಸವೇ ಮಾಯೆ : ಶಿವೋsಹಂ ಸರಣಿ

ಒಂದು ಕಡೆ ಅಸ್ತಿತ್ವವಿದೆ, ಇರುವಿಕೆಯಿದೆ; ಇನ್ನೊಂದೆಡೆ ಶರೀರವಿದೆ. ಇವುಗಳ ಮಿಲನದಿಂದ ‘ನಾನು ಇದ್ದೇನೆ’ ಎನ್ನುವ ಭಾವವು ಜನ್ಮ ತಳೆಯುತ್ತದೆ. ಈ ‘ನಾನು’ ಎನ್ನುವುದರ ಆಭಾಸವೇ ಮಾಯೆ ಅನ್ನಿಸಿಕೊಳ್ಳುವುದು. ಈ ‘ನಾನು’ ಭಾವವೇ ಮಾಯೆ ಅನ್ನಿಸಿಕೊಳ್ಳುವುದು ~ Whosoever Ji ಈ ದೇಹವನ್ನುಸೂಚಿಸಲು ಒಂದು ಆಧಾರ ಬೇಕಾಗುತ್ತದೆ. ಮತ್ತು ಆ ಆಧಾರವು ‘ನಾನು’ ಎಂಬುದಾಗಿರುತ್ತದೆ. ಈ ದೇಹವನ್ನು ಸೂಚಿಸಲು ನಾವು ‘ನಾನು’ ಎಂಬ ಪದವನ್ನು ಬಳಸುತ್ತೇವೆ. ಪ್ರತಿಯೊಂದು ರೂಪ, ಆಕಾರವನ್ನು ಸೂಚಿಸಲು ಒಮದು ಹೆಸರಿನ ಅವಶ್ಯಕತೆ ಇರುತ್ತದೆ. ಈ […]

ಅಸ್ತಿತ್ವದ ಅರಿವು ಶರೀರದಲ್ಲಷ್ಟೆ ಇರುವುದು

ಹಾಗೊಮ್ಮೆ ರಾತ್ರಿಯ ಗಾಢ ನಿದ್ದೆಯಲ್ಲಿ ನಾನು ಇಲ್ಲವಾದರೆ, ಮುಗಿದುಹೋದರೆ, ಮರುದಿನ ನಾನು ಮತ್ತೆ ಅಸ್ತಿತ್ವ ಪಡೆಯಲು ಸಾಧ್ಯವಾಗದು. ಯಾರು ಇಲ್ಲವಾಗುತ್ತಾರೋ ಅವರು ಮರಳಿ ಬರುವುದಾದರೂ ಹೇಗೆ? ಮರಳಿ ಬರುವುದಕ್ಕೆ ಮುನ್ನ `ಇರುವುದು’ ಅಗತ್ಯವಿರುತ್ತದೆ. ಯಾವುದು `ಇರು’ವುದೋ ಅದು ಮಾತ್ರ ಮರಳಿ ಬರಬಲ್ಲದು. ಯಾವುದು ಇಲ್ಲವಾಗುವುದೋ ಅದು ಮರಳಿ ಬರಲಾದರೂ ಹೇಗೆ ಸಾಧ್ಯ? ~ Whosoever JI ಪ್ರತಿ ಬೆಳಗ್ಗೆ ಗಾಢ ನಿದ್ರೆಯಿಂದ ಎಚ್ಚೆತ್ತ ಮೇಲೆ, ಎಲ್ಲಕ್ಕಿಂತ ಮೊದಲು ಅರಿವಿಗೆ ಬರುವುದೇ ಇದು – ನಾನು ಇದ್ದೀನಿ ಅನ್ನುವುದು. […]

ಕಾಲವೆಂಬ ಸತ್ಯ ಮತ್ತು ಭ್ರಮೆ

ಕಾಲವು ಅಸ್ತಿತ್ವ ಪಡೆಯುವುದೇ ಮತ್ತೊಂದು ವಸ್ತುವಿನ ಅವಲಂಬನೆಯ ಮೇಲೆ. ಇನ್ನೂ ಹೇಳಬೇಕೆಂದರೆ, ಕಾಲವೊಂದು ಭ್ರಮೆ. ನಾವು ಲೆಕ್ಕ ಹಾಕಿದರಷ್ಟೆ ಅದು ಉದ್ಭವವಾಗುವುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉಳಿದರೆ ಕಾಲವೊಂದು ನಗಣ್ಯ ಸಂಗತಿಯಾಗಿಬಿಡುತ್ತದೆ. ಈ ಸೃಷ್ಟಿಯಲ್ಲಿ ಅತ್ಯಂತ ನಿಗೂಢವೂ ವಿವರಣೆಗೆ ನಿಲುಕದ್ದೂ ಆದ ಸಂಗತಿಯೆಂದರೆ, ಅದು `ಕಾಲ’.  ಎಷ್ಟು ಸತ್ಯವೋ ಅಷ್ಟೇ ಭ್ರಮಾತ್ಮಕವೂ ಆಗಿರುವ ಸಂಗತಿ ಇದು. ಭಗವಂತನಂತೆಯೇ ಕಾಲವೂ. ಅಥವಾ ಭಗವಂತನೇ ಕಾಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು `ಕಾಲೋsಸ್ಮಿ ಲೋಕ ಕ್ಷಯ ಕಾರಕಃ’ ಅಂದಿದ್ದಾನೆ. ಲೋಕವನ್ನು […]

ಸ್ವಯಂಸ್ಮರಣೆಯಿಂದ ಅರಿವಿನ ಬಾಗಿಲು ತೆರೆದುಕೊಳ್ಳುತ್ತದೆ

ಸ್ಮರಣೆ ಮಾಡಬೇಕು, ಬೇರೆ ಯಾರದ್ದೋ ಅಲ್ಲ, ಸ್ವತಃ ನಮ್ಮದೇ. ಎಲ್ಲಕ್ಕಿಂತ ಮೊದಲು ನಾನು ಇದ್ದೇನೆ ಅನ್ನುವುದರ ಸ್ಮರಣೆ ಮಾಡಿಕೊಳ್ಳಬೇಕು. ಅನಂತರ ನಾನು ಎನ್ನುವುದನ್ನು ಮರೆತು ಇದ್ದೇನೆ ಅನ್ನುವುದಕ್ಕೆ ಅಂಟಿಕೊಳ್ಳಬೇಕು. ಆಗ ನೋಡನೋಡುತ್ತಿದ್ದಂತೆಯೇ ಸತ್ಯವೆನ್ನಿ, ವಾಸ್ತವಿಕತೆಯೆನ್ನಿ, ಪರಮಾತ್ಮನೆನ್ನಿ, ಅದು ಪ್ರಕಟಗೊಳ್ಳುತ್ತದೆ. ~ Whosoever Ji ವಸ್ತುತಃ ಬದುಕೆಂದರೇನು? ಪ್ರತಿ ಕ್ಷಣ, ಪ್ರತಿ ಘಳಿಗೆ ನಾವು ಒಂದಲ್ಲ ಒಂದು ಅನುಭವ ಪಡೆಯುತ್ತಲೇ ಇರುತ್ತೇವೆ. ಹಸಿವು ನೀರಡಿಕೆಗಳಿರಬಹುದು, ರಾಗ ದ್ವೇಷಗಳಿರಬಹುದು, ನಿದ್ರೆ ಅಥವಾ ಜಾಗೃತಿ ಇರಬಹುದು, ಸೇಡು ಮತ್ಸರಗಳಿರಬಹುದು; ಸುಖದಾಯಿ ಅನುಭವಗಳಿರಬಹುದು […]