ಈ ಕನಸಿನ ವ್ಯಾಖ್ಯಾನವೇನು?

ಕುರಾನ್ ಬಗ್ಗೆ ತನಗಿರುವಷ್ಟು ಅಗಾಧ ಪಾಂಡಿತ್ಯವನ್ನು ಬೇರಾರಿಗೂ ಇಲ್ಲ ಎಂಬ ಅಹಂಕಾರದಿಂದ ಮೆರೆಯುತ್ತಿದ್ದ ವ್ಯಕ್ತಿಯೊಬ್ಬನಿದ್ದ. ಚಿಸ್ತಿ ಪೀರ್ ನ ಸೂಫಿಯನ್ನು ವಾದಕ್ಕೆಳೆದು ತನ್ನ ಪಾಂಡಿತ್ಯವನ್ನು ಪ್ರದರ್ಶಿಸಬೇಕು ಮತ್ತು ಅವನನ್ನು ವಾದದಲ್ಲಿ ಸೋಲಿಸಬೇಕೆಂದು ಆತ ಬಯಸಿದ್ದ. ಹಾಗೆಂದೇ ಒಂದು ದಿನ ಅವನು ಸೂಫಿಯಲ್ಲಿಗೆ ಬಂದ. ಆ ಅಹಂಕಾರಿಯ ಆಲೋಚನೆಯನ್ನು ನೋಟದಲ್ಲೇ ಗ್ರಹಿಸಿದ ಸೂಫಿಯು, ಕುರಾನಿನಲ್ಲಿ ಯೂಸಫ಼ನಿಗೆ ಬಿದ್ದಿತೆಂದು ಹೇಳಲಾದ ಕನಸನ್ನು ಪ್ರಸ್ತಾಪಿವುದರೊಂದಿಗೆ ತಾನಾಗಿಯೇ ಸಂಭಾಷಣೆಯನ್ನು ಪ್ರಾರಂಭಿಸಿದ. ನಂತರ ಆ ವ್ಯಕ್ತಿಯನ್ನು ಕುರಿತು, “ನನಗೂ ಹಾಗೆಯೇ ಒಂದು ಕನಸು ಬಿದ್ದಿತ್ತು. […]