ಒಂದು ಮತ್ತೊಂದಾಗಲು ಸಾಧ್ಯವಿಲ್ಲ; ಸಾಧ್ಯವಾದರೆ, ಅದು ಉಳಿಯುವುದೇ ಇಲ್ಲ!

ನಮ್ಮನ್ನು ನಾವು ಮತ್ತೊಬ್ಬರಾಗಿ ಭಾವಿಸಿಕೊಳ್ಳಲು ಆರಂಭಿಸಿದರೆ ಏನಾಗುತ್ತೇವೆ? ನಿಜವಾದ ನಾವು ಇಲ್ಲವಾಗಿಬಿಡುತ್ತೇವೆ. ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ. ಸ್ವಂತಿಕೆಯನ್ನು ಕಳೆದುಕೊಂಡರೆ ನಾವು ನಾಶವಾದಂತೆಯೇ. ನಾನ್ಯದನ್ಯದ್ಭವೇದ್ಯಸ್ಮಾನ್ನಾನ್ಯತ್ಕಿಂಚಿದ್ವಿಚಿಂತಯೇತ್ | ಅನ್ಯಸ್ಯಾನ್ಯತ್ವಭಾವೇ ಹಿ ನಾಶಸ್ತಸ್ಯ ಧ್ರುವೋ ಭವೇತ್ || ಅರ್ಥ: ಒಂದು ಮತ್ತೊಂದಾಗಲಾರದು. ಆದುದರಿಂದ ಬೇರೆ ಯಾವುದನ್ನಾದರೂ ತಾನೆಂದು ಭಾವಿಸಬಾರದು. ಏಕೆಂದರೆ ಒಂದು ಮತ್ತೊಂದಾಗುವುದಾದರೆ ಅದಕ್ಕೆ ನಾಶವು ನಿಶ್ಚಯವಾಗಿ ಉಂಟಾಗುವುದು. ಇಲ್ಲಿ ಒಂದು ಎಂದರೆ ಜೀವ. ಮತ್ತೊಂದು ಅಂದರೆ ಬ್ರಹ್ಮ. ಜೀವವು ಸ್ವರೂಪತಃ ಬ್ರಹ್ಮಕ್ಕಿಂತ ಬೇರೆ ಎಂದಾದರೆ, ಜೀವವು ಎಂದಿಗೂ ಬ್ರಹ್ಮವಾಗಲಾರದು. ಆದರೆ […]

ಚಿಂತನ ಮನನದ ಧ್ಯಾನ ವಿಧಿ: ಶಿವೋsಹಮ್ ಸರಣಿ ~1

ಇಲ್ಲೊಂದು ತಮಾಷೆಯಿದೆ… ಈ ಹಾಡನ್ನು ನೀವು ಎಷ್ಟು ಬೇಕಾದರೂ ಕೇಳಿ. ಉರು ಹೊಡೆಯಿರಿ. ಕಂಟಸ್ಥಗೊಳಿಸಿಕೊಳ್ಳಿ. ಇದನ್ನು ನೀವು ಹಾಡುತ್ತಲೇ ಇರಿ. ಅಷ್ಟಾದರೂ ನಿಮಗೆ ನೀವು ಯಾರೆಂದು ಅರಿವಾಗುವುದಿಲ್ಲ! ಮತ್ತೊಬ್ಬರ ಹೇಳಿಕೆಯಿಂದ ನಮಗಿದು ಗೊತ್ತಾಗಿಬಿಡುವ ಹಾಗೆ ಇದ್ದಿದ್ದರೆ, ನಮಗೆಲ್ಲರಿಗೂ ನಾವಾರೆಂದು ಯಾವತ್ತೋ ತಿಳಿದುಹೋಗಿರುತ್ತಿತ್ತು. ಆದರೆ ಈ ಅನುಭಾವ ಗೀತೆಯನ್ನು ಕೇಳಿ – ಅರ್ಥೈಸಿಕೊಂಡ ನಂತರವೂ ನಮಗೆ ನಾವು ಯಾರೆಂದು ಅರಿವಾಗುವುದಿಲ್ಲ. ~ Whosoever Ji ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ […]