ಸ್ವಯಂಸ್ಮರಣೆಯಿಂದ ಅರಿವಿನ ಬಾಗಿಲು ತೆರೆದುಕೊಳ್ಳುತ್ತದೆ

ಸ್ಮರಣೆ ಮಾಡಬೇಕು, ಬೇರೆ ಯಾರದ್ದೋ ಅಲ್ಲ, ಸ್ವತಃ ನಮ್ಮದೇ. ಎಲ್ಲಕ್ಕಿಂತ ಮೊದಲು ನಾನು ಇದ್ದೇನೆ ಅನ್ನುವುದರ ಸ್ಮರಣೆ ಮಾಡಿಕೊಳ್ಳಬೇಕು. ಅನಂತರ ನಾನು ಎನ್ನುವುದನ್ನು ಮರೆತು ಇದ್ದೇನೆ ಅನ್ನುವುದಕ್ಕೆ ಅಂಟಿಕೊಳ್ಳಬೇಕು. ಆಗ ನೋಡನೋಡುತ್ತಿದ್ದಂತೆಯೇ ಸತ್ಯವೆನ್ನಿ, ವಾಸ್ತವಿಕತೆಯೆನ್ನಿ, ಪರಮಾತ್ಮನೆನ್ನಿ, ಅದು ಪ್ರಕಟಗೊಳ್ಳುತ್ತದೆ. ~ Whosoever Ji ವಸ್ತುತಃ ಬದುಕೆಂದರೇನು? ಪ್ರತಿ ಕ್ಷಣ, ಪ್ರತಿ ಘಳಿಗೆ ನಾವು ಒಂದಲ್ಲ ಒಂದು ಅನುಭವ ಪಡೆಯುತ್ತಲೇ ಇರುತ್ತೇವೆ. ಹಸಿವು ನೀರಡಿಕೆಗಳಿರಬಹುದು, ರಾಗ ದ್ವೇಷಗಳಿರಬಹುದು, ನಿದ್ರೆ ಅಥವಾ ಜಾಗೃತಿ ಇರಬಹುದು, ಸೇಡು ಮತ್ಸರಗಳಿರಬಹುದು; ಸುಖದಾಯಿ ಅನುಭವಗಳಿರಬಹುದು […]