ಈ ರಜೆಯಲ್ಲಿ ನೀವು ಓದಬಹುದಾದ 25 ಪುಸ್ತಕಗಳು : ಅರಳಿಮರ recommends

ಕಣ್ಣೆದುರು ಕಾಯುತ್ತಿರುವ ರಜಾದಿನಗಳನ್ನು ಕಳೆಯಲು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಾಹಿತ್ಯವುಳ್ಳ 25 ಕನ್ನಡ ಪುಸ್ತಕಗಳನ್ನಿಲ್ಲಿ ನೀಡಲಾಗಿದೆ.  ಪುಸ್ತಕ ಓದಲು ರಜಾದಿನಗಳೇ ಬರಬೇಕೆಂದಿಲ್ಲ. ಪ್ರಯಾಣಿಸುವಾಗ, ಸುಮ್ಮನೆ ಸಮಯ ಪೋಲು ಮಾಡುವಾಗ, ಟೈಂ ಪಾಸ್ ಆಗುತ್ತಿಲ್ಲ ಎಂದು ಗೊಣಗುವಾಗೆಲ್ಲ ಪುಸ್ತಕ ಓದಬಹುದು. ಇನ್ನೂ ಹೇಳಬೇಕೆಂದರೆ, ಪುಸ್ತಕ ಓದುವ ಹವ್ಯಾಸ ಇರುವವರಿಗೆ ಸಮಯ ಪೋಲು ಮಾಡುವ, ಬೇಸರ ಪಡುವ ಪ್ರಮೇಯವೇ ಬರುವುದಿಲ್ಲ.  ಆದರೂ ಕಣ್ಣೆದುರು ಕಾಯುತ್ತಿರುವ ರಜಾದಿನಗಳನ್ನು ಕಳೆಯಲು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಾಹಿತ್ಯವುಳ್ಳ 25 ಕನ್ನಡ ಪುಸ್ತಕಗಳನ್ನಿಲ್ಲಿ ನೀಡಲಾಗಿದೆ.  ಇಲ್ಲಿ […]

ಮಾಸ್ತಿಯವರ ಅಂತರಗಂಗೆಯಿಂದ; ವೇದ – ಸಂಹಿತೆಗಳು ~ ಭಾಗ 1

ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರ ಪರಿಚಯ ಸರಣಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಅಂತರಗಂಗೆ’ ಕೃತಿಯ ಆಯ್ದ ಅಧ್ಯಾಯಗಳನ್ನು ಪ್ರಕಟಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೊದಲ ಕಂತು ವೇದಗಳ ಪರಿಚಯ. ಈ ಸಂಚಿಕೆಯಲ್ಲಿ ಸಂಹಿತೆಗಳ ಬಗೆಗಿನ ಲೇಖನದ ಮೊದಲ ಕಂತನ್ನು ನೀಡಲಾಗಿದೆ.  ಪ್ರಾಚೀನ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪರಿಚಯಿಸುವ ಕೃತಿ ‘ಅಂತರಗಂಗೆ’. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇದರ ಕರ್ತೃ. ವೇದೋಪನಿಷತ್ತುಗಳು, ಪುರಾಣಗಳು, ಪ್ರಮುಖ ಋಷಿಗಳು, ಜನಪದಗಳೆಲ್ಲದರ ಕಿರುಪರಿಚಯವನ್ನು ಈ ಕೃತಿಯು ಮಾಡಿಸುತ್ತದೆ. ಇಲ್ಲಿ ಕಿರುಪರಿಚಯವೆಂದರೆ, […]