ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ

ಶಿಕ್ಷಣ ಪಡೆದ ವ್ಯಕ್ತಿ ಹೆಚ್ಚು ಜ್ಞಾನಿಯೂ ವಿನೀತನೂ ಧೀರನೂ ಆಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೆಚ್ಚು ಶಿಕ್ಷಣದಿಂದ ಹೆಚ್ಚು ಅಹಂಕಾರ ಎನ್ನುವುದಾದರೆ ಅಂತಹ ಶಿಕ್ಷಣವಾದರೂ ಏಕೆ ಹೇಳಿ!? ಸ್ವಾಮಿ ವಿವೇಕಾನಂದರ ಮಾತೊಂದಿದೆ. “ಅನಕ್ಷರಸ್ಥರಿಗೆ ಬೆಳಕು ಕೊಡಿ, ಅಕ್ಷರಸ್ಥರಿಗೆ ಸ್ವಲ್ಪ ಹೆಚ್ಚಿನ ಬೆಳಕು ಕೊಡಿ” ಎಂದು ~ ಆನಂದಪೂರ್ಣ ‘ಶಿಕ್ಷಣವೆಂಬುದು ಮಾನವನೊಳಗೆ ಅದಾಗಲೇ ಹುದುಗಿದ್ದ ಪರಿಪೂರ್ಣತೆಯನ್ನು ವ್ಯಕ್ತಗೊಳಿಸುವ ಪ್ರಯತ್ನ’ ಹಾಗೆಂದವರು ಸ್ವಾಮಿ ವಿವೇಕಾನಂದರು. ಹೊರಗಿನಿಂದ ತಲೆಯೊಳಗೆ ಒತ್ತಾಯವಾಗಿ ತುರುಕಿದ್ದು ಶಿಕ್ಷಣವಾಗಲಾರದು. ಕಂಠಸ್ಥ ಮಾಡಿಕೊಂಡು ಮರು ಒಪ್ಪಿಸಿದ ಪಾಠ ಶಿಕ್ಷಣವಾಗಲಾರದು. […]

ಶ್ರದ್ಧೆಯ ಕಣ್ಣು ಕುರುಡಾಗದಿರಲಿ

ಶ್ರದ್ಧೆ ಒಂದು ಆಚರಣೆಯಲ್ಲ. ಅದು ಸುಪ್ತವಾಗಿ ನಮ್ಮೊಳಗೆ ಘಟಿಸುವಂಥ ಪ್ರಕ್ರಿಯೆ. ನಂಬಿಕೆಯನ್ನಾದರೂ ವ್ಯಕ್ತಪಡಿಸಬಹುದು, ಶ್ರದ್ಧೆಯನ್ನು ವ್ಯಕ್ತಪಡಿಸಲು ಬರುವುದಿಲ್ಲ. ಅದು ಹೂವಿನ ಒಳಗಿನ ಘಮಲಿನಂತೆ. ಅದು ಶ್ರದ್ಧಾವಂತರ ನಡೆನುಡಿಯ ಮೂಲಕ ವ್ಯಕ್ತವಾಗುತ್ತದೆಯೇ ಹೊರತು, `ನನಗೆ ಶ್ರದ್ಧೆ ಇದೆ’ ಎಂದು ಹೇಳಿಕೊಂಡು ತಿರುಗಲು ಬರುವುದಿಲ್ಲ  ~ ಆನಂದಪೂರ್ಣ “ಶ್ರದ್ಧೆ…. ಮುಖ್ಯವಾಗಿ ಬದುಕಿನಲ್ಲಿ ಶ್ರದ್ಧೆ ಇರಲಿ. ಶ್ರದ್ಧೆ ಇಲ್ಲದೆ ಮಾಡುವ ಯಾವ ಕೆಲಸವೂ ಫಲಿಸುವುದಿಲ್ಲ.” ಇದು ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಹೇಳುತ್ತಿದ್ದ ಮಾತು. `ನಿಮ್ಮಲ್ಲಿ ನೀವು ಶ್ರದ್ಧೆಯನ್ನು ಬೆಳೆಸಿಕೊಳ್ಳಿ. ನಿಮ್ಮ […]

ವಿಶ್ವಪ್ರಜ್ಞಾವಂತಿಕೆ : ವಿಕಸನದ ಪರಮೋನ್ನತ ಹಂತ ~ ಭಾಗ 1

  ಅಹಂಪ್ರಜ್ಞೆ (ದೇಹದ ಗುರುತಿನದ್ದು) ವಿಕಸನಗೊಂಡು ಸ್ವಯಂಪ್ರಜ್ಞೆಯಾಗಿಯೂ (ಆತ್ಮದ ತಿಳಿವಿನದ್ದು), ಸ್ವಯಂಪ್ರಜ್ಞೆಯು ವಿಕಸಗೊಂಡು ವಿಶ್ವಪ್ರಜ್ಞೆಯಾಗಿಯೂ ಬೆಳೆದಾಗ ವ್ಯಕ್ತಿಯು ಜಗತ್ತಿನ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಬಲ್ಲವನಾಗುತ್ತಾನೆ. ~ ಆನಂದಪೂರ್ಣ ಜೇನುಹುಳುಗಳ ಸಂತತಿ ಅವಸಾನಗೊಂಡರೆ ಮಾನವ ಜಗತ್ತು ನಾಲ್ಕು ವರ್ಷಗಳಲ್ಲಿ ಇಲ್ಲವಾಗಿಹೋಗುತ್ತದೆ ಎಂದಿದ್ದರು ಐನ್‍ಸ್ಟೀನ್. ಈ ಹೇಳಿಕೆಯ ವೈಜ್ಞಾನಿಕ ಸತ್ಯಾಸತ್ಯತೆಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದವು. ವಾದ-ವಿವಾದಗಳೂ ಉಂಟಾದವು. ಐನ್‍ಸ್ಟೀನ್ ಹೇಳಿಕೆಯನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ಯಾವ ಕೀಟ ಅಥವಾ ಜೀವಿಯ ಅವಸಾನ ಜಗತ್ತಿನಲ್ಲಿ ಯಾವ ಬದಲಾವಣೆ ಉಂಟುಮಾಡುವುದು ಎಂಬ ವ್ಯಾಪಕ ಅಧ್ಯಯನ ಆರಂಭಗೊಂಡಿತು. […]