ತಾವೋ ತಿಳಿವು #45 ~ ಧೀರರಿಗೆ ಆಯುಧಗಳು ಬೇಕಿಲ್ಲ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಆಯುಧಗಳು ಹಿಂಸೆಯ ಹತ್ಯಾರಗಳು ಸಭ್ಯರು ಇವುಗಳಿಂದ ದೂರ. ಆಯುಧಗಳು ಅಂಜುಬುರುಕರ ಕೈ ಕಾಲುಗಳು ಧೀರರಿಗೆ, ಇವು ಬೇಕಿಲ್ಲ. ಅವಶ್ಯವಿದ್ದಾಗ ಮಾತ್ರ ಸಂತ, ಶಸ್ತ್ರ ಹಿರಿಯುತ್ತಾನೆ ಮತ್ತು ಒರೆಗೆ ಸೇರಿಸುವ ತನಕ, ಮೈಯೆಲ್ಲ ಕಣ್ಣಾಗಿರುತ್ತಾನೆ. ಶಾಂತಿಗೆ ಕಂಟಕ ಎದುರಾದಾಗ ಯಾರು ತಾನೆ ಸುಮ್ಮನಿರಲು ಸಾಧ್ಯ? ವೈರಿಗಳೇನು ಸೈತಾನರೆ? ಅವರ ಸ್ವಂತಕ್ಕೆ ಘಾಸಿ ಮಾಡುವಲ್ಲಿ ಸಂತನಿಗೆ ಆಸಕ್ತಿ ಇಲ್ಲ, ಕೊಂದು ಗೆಲ್ಲುವ ಸಂಭ್ರಮದಲ್ಲಿ ಅವನಿಗೆ ಪಾಲು ಬೇಕಿಲ್ಲ. […]

ಒಳಗಿನ ವೈರಿಗಳನ್ನು ಗೆಲ್ಲುವ ಆಯುಧಗಳು

ನಮ್ಮ ಅಂತರಂಗವನ್ನು ನಿರಂತರವಾಗಿ ಆಕ್ರಮಿಸಿ ಯಾತನೆಗೆ ನೂಕುತ್ತಿರುವ ನಮ್ಮೊಳಗಿನದೇ ವೈರಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಈ ವೈರಿಗಳನ್ನು ಮಟ್ಟಹಾಕಲು ಆಯುಧಗಳನ್ನೂ ಸಜ್ಜು ಮಾಡಿಟ್ಟುಕೊಳ್ಳುವುದಿಲ್ಲ. ಇನ್ನೂ ಹೇಳಬೇಕೆಂದರೆ, ಅರಿಷಡ್ವರ್ಗಗಳು ಅಂತರಂಗದ ಮೇಲೆ ಅತಿಕ್ರಮಣ ಮಾಡಿರುವುದು ನಮಗೆ ಎಷ್ಟೋ ಬಾರಿ ಸಂಪೂರ್ಣ ಹಾನಿಯಾಗುವವರೆಗೂ ಗೊತ್ತಾಗುವುದೇ ಇಲ್ಲ! ಜಗತ್ತಿನ ಬಹುತೇಕ ರಾಷ್ಟ್ರಗಳು ಆಯುಧ ಸಂಗ್ರಹಣೆಯಲ್ಲಿ ತೊಡಗಿವೆ. ಪ್ರತಿ ವರ್ಷದ ಬಜೆಟ್‍ನಲ್ಲಿ ದೊಡ್ಡದೊಂದು ಪಾಲನ್ನು ಶಸ್ತ್ರಾಸ್ತ್ರ ಖರೀದಿ ಹಾಗೂ ನಿರ್ವಹಣೆಗೆಂದೇ ತೆಗೆದಿರಿಸಲಾಗುತ್ತದೆ. ಪ್ರತಿಯೊಂದು ದೇಶಕ್ಕೂ ಒಳ – ಹೊರಗಿನ ಶತ್ರುಗಳಿಂದ ತನ್ನನ್ನು […]