ಕೃಷ್ಣನೆಂಬ ಕೊಳಲು, ಪ್ರೇಮವೆಂಬ ಉಸಿರು….

ಇಡಿಯ ಭಾಗವತದಲ್ಲಿ ಕೃಷ್ಣ ರಾಧೆಯನ್ನು ನೆನೆದು ಕಣ್ಣೀರಿಡುವ ವಿವರವಿಲ್ಲ. ಆದರೆ, ಅವನ ಕಥನ ಓದುವ ಸಹೃದಯರು ತಾವೇ ಕೃಷ್ಣನಾಗಿ, ರಾಧೆಯನ್ನು ಭಾವಿಸಿ, ಅವಳಿಗಾಗಿ ಮಿಡಿಯುತ್ತಾರೆ. ಹೀಗೆ ರಾಧಾಪ್ರೇಮದಿಂದ ಕೃಷ್ಣ, ನಮ್ಮೆದೆಗಳಲ್ಲಿ ಮೊಳೆಯುತ್ತಾನೆ ~ ಚೇತನಾ ತೀರ್ಥಹಳ್ಳಿ ಯಾವ ಪ್ರೇಮ ವಿರಹದಲ್ಲಿ ದುಃಖ ತರುವುದಿಲ್ಲವೋ ಅದು ಅತ್ಯುನ್ನತವಾದದ್ದು. ಯಾವ ಪ್ರೇಮ, ಪ್ರೇಮಿಯನ್ನು ಹೊಂದುವ ಸ್ವಾರ್ಥವನ್ನಾಗಲೀ ಮೋಹವನ್ನಾಗಲೀ ಹುಟ್ಟಿಸುವುದಿಲ್ಲವೋ ಅದು ಅತ್ಯುತ್ಕೃಷ್ಟ ಪ್ರೇಮ. ಇಂಥ ಪ್ರೇಮಕ್ಕೆ ಪರಮೋನ್ನತ ಮಾದರಿ – ರಾಧಾ ಮಾಧವ ಜೋಡಿ. ಕೃಷ್ಣನಿಗೆ ಇಂಥದೊಂದು ಪ್ರೇಮಪಾಠವನ್ನು ಕಲಿಸಿದವಳು […]

ನೀವು ಕುಡಿಯುವ ನೀರಿನ ಧಾರೆ ಒಂದೇ ಆಗಿರಲಿ, ನಿಮ್ಮ ಆಹಾರದ ಭಾಗವೂ ಒಂದೇ ಆಗಿರಲಿ : ಅಥರ್ವ ವೇದ

ಪ್ರಕೃತಿಯೂ ಪಂಚಭೂತಗಳೂ ಎಲ್ಲ ಜೀವಿಗಳಿಗೆ ಸಮನಾಗಿ ಹಂಚಲ್ಪಟ್ಟಿವೆ. ಯಾವುದರ ಮೇಲೂ ಯಾರಿಗೂ ಹೆಚ್ಚಿನ ಅಥವಾ ಕಡಿಮೆ ಅಧಿಕಾರವಿಲ್ಲ. ಆದ್ದರಿಂದ ಮೇಲು – ಕೀಳೆಂಬ ತರತಮ ಭಾವವನ್ನು ಕಿತ್ತೊಗೆದು ಒಗ್ಗಟ್ಟಿನಿಂದ ಬಾಳಿ ಎನ್ನುತ್ತದೆ ಅಥರ್ವ ವೇದ.    ಸಮಾನೀ ಪ್ರಪಾ ಸಹ ವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ | ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ || (ಅಥರ್ವ.೩.೩೦.೬.) “ನೀವು ಕುಡಿಯುವ ನೀರಿನ ಧಾರೆ ಒಂದೇ ಆಗಿರಲಿ. ನಿಮ್ಮ ಆಹಾರದ ಭಾಗವೂ ಒಂದೇ ಆಗಿರಲಿ. ನೀವೆಲ್ಲರೂ ಒಂದೇ ಬಂಧನದಲ್ಲಿ ಬೆಸೆದುಕೊಂಡಿದ್ದೀರಿ […]