ಇರುವಂತೆಯೇ ನೋಡುವ ಬಗೆ ರೂಢಿಯಾಗಲಿ

ಬಿಡುವಿನ ದಿನದಲ್ಲಿ ಕುಳಿತು ಬದುಕಿನ ಪುಟಗಳನ್ನು ತಿರುಗಿಸಿ ನೋಡಿ. ನಿಮ್ಮ ಎಷ್ಟು ನಿರ್ಧಾರಗಳು ಪೂರ್ವಗ್ರಹದಿಂದ ಆವೃತವಾಗಿಲ್ಲ? ಅಥವಾ ಎಷ್ಟು ನಿರ್ಧಾರಗಳು ಇತರರ ದೃಷ್ಟಿಕೋನದ ಮೇಲೆಯೇ ಅವಲಂಬಿತವಾಗಿವೆ? ಬಹಳಷ್ಟು ಬಾರಿ ನಾವು ಮತ್ತೊಬ್ಬರ ದೃಷ್ಟಿಕೋನದ ಮೇಲೆಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದು ಉಂಟುಮಾಡುವ ಅಡ್ಡ ಪರಿಣಾಮಗಳು ಒಂದೆರಡಲ್ಲ.  ಬಹುತೇಕವಾಗಿ ನಾವೆಲ್ಲರೂ ಒಂದು ತಪ್ಪು ಮಾಡುತ್ತೇವೆ. ಯಾವುದೇ ಪದ ಅಥವಾ ವಸ್ತುವನ್ನು ಒಂದು ಪೂರ್ವಗ್ರಹದೊಂದಿಗೆ ನೋಡುತ್ತೇವೆ. ಈ ಹಿಂದಿನತನಕ ಆ ವಸ್ತು ಅಥವಾ ಪದೊಂದಿಗೆ ನಮ್ಮ ಅನುಭವ ಏನಿದೆಯೋ ಅದರಂತೆ ನಮ್ಮ […]