ನವರಾತ್ರಿ : ಸ್ತ್ರೀಶಕ್ತಿಯ ಸಂಭ್ರಮಾಚರಣೆ

ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನಲಿಯುತ್ತಾರೆ ಎಂಬ ಮಾತಿದೆ. ಪೂಜೆಗೊಳ್ಳುವ ದೇವತೆಯೇ ಸ್ವತಃ ಹೆಣ್ಣಾದರೆ ಇಡಿಯ ಸೃಷ್ಟಿಗೇ ನಲಿವಲ್ಲವೆ!? ~ ಸಾ.ಹಿರಣ್ಮಯಿ ಶಕ್ತಿ ಇಲ್ಲದೆ ಚಲನೆ ಇಲ್ಲ. ಜಗತ್ತು ನಡೆಯುತ್ತಿರುವುದೇ ಅಗೋಚರ ಶಕ್ತಿಯ ಆಧಾರದ ಮೇಲೆ. ಸೃಷ್ಟಿ ಮೂಲವಾದ ಈ ಶಕ್ತಿಯು ಅದನ್ನು ಪೋಷಿಸುವ, ಸುಸ್ಥಿಯಲ್ಲಿಡುವ ಹೊಣೆಗಳನ್ನು ಮಾತ್ರವಲ್ಲ, ಕಾಲಕಾಲಕ್ಕೆ ಲಯಗೊಳಿಸಿ ಪುನರ್‍ಸೃಷ್ಟಿಯನ್ನೂ ಮಾಡುತ್ತದೆ. ಈ ಸೃಷ್ಟಿ ಕ್ರಿಯೆ ನಡೆಯುವ ಬ್ರಹ್ಮಾಂಡವನ್ನು (ಕಾಸ್ಮಿಕ್ ವೂಂಬ್) ಆದಿ ಶಕ್ತಿಯ ಗರ್ಭವೆಂದು ಹೇಳಲಾಗುತ್ತದೆ. ಗರ್ಭ ಧಾರಣೆ ಸ್ತ್ರೀವಿಶಿಷ್ಟ […]