ಶ್ರೀರಾಮ ಸೂಕ್ತಿ : ಬೆಳಗಿನ ಹೊಳಹು

ಶ್ರೀರಾಮನು ಭಕ್ತಶ್ರೇಷ್ಠನಾದ ಹನುಮನಿಗೆ ನೀಡಿದ ಉಪದೇಶಗಳು ‘ಶ್ರೀ ರಾಮ ಸೂಕ್ತಿ’ಯಲ್ಲಿ ಸಂಕಲನಗೊಂಡಿದೆ. ಅದರಿಂದ ಕೆಲವು ಹೊಳಹುಗಳು, ನಿಮಗಾಗಿ… “ಪರಮಾತ್ಮನ  ನೆರಳೇ  ಎಲ್ಲ ಜೀವಿಗಳಲ್ಲಿ ಜೀವಾತ್ಮನಾಗಿ ಪ್ರತಿಬಿಂಬಿತವಾಗಿದೆ. ವಿಶಾಲವಾದ ಆಕಾಶವೇ ಎಲ್ಲ ನದಿ, ಸರೋವರಗಳಲ್ಲಿ ಪ್ರತಿಬಿಂಬಿಸುತ್ತದೆ” ~ ಶುದ್ಧವಾದ ಜ್ಞಾನವು ಎಲ್ಲ ಆಸೆ ಮತ್ತು ಆಸಕ್ತಿಗಳನ್ನು ಕೊಲ್ಲುತ್ದೆ. ಸಕಾಮಕರ್ಮ ಯಾವುದೇ ಆಗಿರಲಿ, ಅದನ್ನು ಬಿಡಬೇಕು. ಅದು ವ್ಯಕ್ತಿಯನ್ನು ಜನನ – ಮರಣದ ಸಂಕೋಲೆಯಲ್ಲಿ ಬಂಧಿಸುತ್ತದೆ.  ನಿಜವಾದ ಜ್ಞಾನವನ್ನು ಹೊಂದಲು ಅದು ಅಡ್ಡಿಯಾಗುವುದು. ~ ಪಂಚಭೂತಗಳಿಂದ, ಅತ್ಯಂತ ಸೀಮಿತವೂ ನಾಶವುಳ್ಳದ್ದೂ […]

‘ದ’ ‘ದ’ ‘ದ’ ಎಂದು ಗುಡುಗಿದ ಮೋಡ ಹೇಳಿದ್ದೇನು? : ಒಂದು ಉಪನಿಷತ್ ಪಾಠ

ಯಾವುದೇ ಮಾತು ಅರ್ಥ ಪಡೆಯುವುದು ನಮ್ಮ ಮನಸ್ಸಿನಲ್ಲಿ. ಮಾತಿಗೆ ಅರ್ಥವಿರುವುದಿಲ್ಲ. ಅರ್ಥ ಹೊಮ್ಮುವುದು ನಮ್ಮ ಅಂತಃಸತ್ವದಲ್ಲಿ ಎಂದು ಸಾರುವ ಶುಕ್ಲಯಜುರ್ವೇದದ ಬೃಹದಾರಣ್ಯಕ ಉಪನಿಷತ್ತಿನ  ಒಂದು ಕಥೆ.  ದೇವತೆಗಳು, ಮನುಷ್ಯರು, ಅಸುರರು ಮೂವರೂ ಪ್ರಜಾಪತಿಯ ಮಕ್ಕಳು. ಅವರು ತಮ್ಮ ತಂದೆಯಿಂದ ಏನಾದರೊಂದು ಉಪದೇಶ ಬೇಕೆಂದು ಬಯಸಿದರು. ಅದರಂತೆ ಪ್ರಜಾಪತಿಯು ಮೋಡದ ರೂಪ ತಾಳಿ ‘ದ….ದ….ದ…’ ಎಂದು ಗುಡುಗಿದನು. ದೇವತೆಗಳು ‘ದ’ ಎಂದರೆ ‘ದಮ್ಯತ’ ಎಂಬುದಾಗಿ ಅರ್ಥಮಾಡಿಕೊಂಡರು. ಅವರು ಸದಾ ಸುಖಭೋಗಗಳೊಂದಿಗೆ ಸ್ವರ್ಗದಲ್ಲಿರುತ್ತಿದ್ದರು. ನಾವು ದಮನ ಮಾಡದಿದ್ದರೆ ಸ್ವರ್ಗವು ಮುಗಿದುಹೋಗುತ್ತದೆ. […]

ಧೃತರಾಷ್ಟ್ರ ವಿದುರನಿಂದ ಸಲಹೆ ಪಡೆದ 3 ಸಂದರ್ಭಗಳು; ಅದರಿಂದ ನಾವು ಕಲಿಯಬಹುದಾದ ಪಾಠ

ಮೂರು ಬಾರಿ ವಿದುರನಿಂದ ಉಪದೇಶ ಪಡೆದ ಧೃತರಾಷ್ಟ್ರ, ಮೊದಲ ಬಾರಿ ಅದನ್ನು ತಿರಸ್ಕರಿಸಿದ್ದ. ಎರಡನೆ ಬಾರಿ ಅನುಸರಿಸಲಾಗದ ಅಸಹಾಯಕತೆ ತೋರಿಕೊಂಡಿದ್ದ. ಮೂರನೆ ಬಾರಿ ಅದನ್ನು ಸ್ವೀಕರಿಸಿ, ಶಾಂತಿಯನ್ನೂ ನೆಮ್ಮದಿಯ ಅಂತ್ಯವನ್ನೂ ಪಡೆದ ~ ಸಾ. ಹಿರಣ್ಮಯಿ ಮಹಾಭಾರತದಲ್ಲಿ ವಿದುರನ ಪಾತ್ರ ಮಹತ್ವದ್ದು. ದಾಸೀಪುತ್ರನಾದ ಕಾರಣದಿಂದ ರಾಜನೆಂದು ಗುರುತಿಸಿಕೊಳ್ಳದೆ ಹೋದರೂ ಕುರುಕುಲವನ್ನು ಸಮರ್ಥವಾಗಿ ಮುನ್ನಡೆಸಲು ಮಾರ್ಗದರ್ಶನ ನೀಡುವ ಮಹತ್ತರ ಜವಾಬ್ದಾರಿ ವಿದುರನ ಮೇಲಿತ್ತು. ಧೃತರಾಷ್ಟ್ರ ಅಧಿಕಾರ ವಹಿಸಿಕೊಂಡ ಮೇಲೆ ರಾಜಕಾರ್ಯಗಳಲ್ಲದೆ ವೈಯಕ್ತಿಕವಾಗಿ ವಿದುರನಿಂದ ಸಲಹೆ ಕೇಳಿದ ಮತ್ತು ತಿರಸ್ಕರಿಸಿದ […]

ಉಪದೇಶಕ ಅಯೋಗ್ಯನಾಗಿದ್ದಾಗ ನಾವೇನು ಮಾಡಬೇಕು? : ಅರಳಿಮರ ಸಂವಾದ

ನೀವು ಕಡೆಗಣಿಸಬೇಕಿರುವುದು ಹಾಗೆ ಸ್ವತಃ ಪಾಲಿಸದೆ ಉಪದೇಶ ನೀಡುತ್ತಿರುವ ವ್ಯಕ್ತಿಯನ್ನೇ ಹೊರತು ಆತ ನೀಡುತ್ತಿರುವ ಉಪದೇಶವನ್ನಲ್ಲ! ~ ಚಿತ್ಕಲಾ ಉಪದೇಶ ಮಾಡುವವರು ಸ್ವತಃ ತಾವೇ ಅದನ್ನ ಪಾಲಿಸದೆ ಇದ್ದರೆ, ಅಂತಹ ಉಪದೇಶ ಮಾಡುವವರನ್ನು ಏನೆನ್ನಬೇಕು ? ಉಪದೇಶ ಮಾಡುವಾಗ ತೋರುವ ಒಂದು ಬೆರಳಿಗಿಂತ ಮಿಕ್ಕ ನಾಲ್ಕು ಬೆರಳು ನಮ್ಮ ಕಡೆ ತೋರುತ್ತಿವೆ ಅನ್ನೋದನ್ನೇ ಮರೆತರೆ ಹೇಗೆ?? ಇಂಥವರಿಗೆ ಏನು ಹೇಳಲು ಇಚ್ಛಿಸುತ್ತೀರಿ? – ಇದು ರಾಜ್ ಬಟಕುರ್ಕಿಯವರು ‘ಅರಳಿಮರ’ದ ಮುಂದಿಟ್ಟ ಪ್ರಶ್ನೆ. ಇದಕ್ಕೆ ಯಾರಾದರೂ ನೀಡಬಹುದಾದ ಅತ್ಯಂತ […]

ತಿಳಿವಿನ ಬೆಳಕನ್ನು ಹಂಚುವುದೇ ‘ಉಪದೇಶ’ : ಓಶೋ ಲಹರಿ

ಅಂತರಂಗದಲ್ಲಿ ಯಾವ ತಿಳಿವು ಮೂಡಿದೆಯೋ ಅದನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದು ಉಪದೇಶ. ತಿಳಿವು ಪಡೆದವರಂತೂ ಅದನ್ನು ಹಂಚಿಕೊಳ್ಳಲು ಸಿದ್ಧವಿದ್ದಾರೆ; ಅದನ್ನು ಯಾರಾದರೂ ಪಡೆಯಲು ಬಂದರೆ ಒಳ್ಳೆಯದೇ. ಯಾರೂ ಬರದೇ ಹೋದರೆ ನಷ್ಟವಂತೂ ಇಲ್ಲ. ಒಬ್ಬ ವ್ಯಕ್ತಿ ತನ್ನೊಳಗೆ ಪ್ರಕಟವಾಗಿರುವ ಜ್ಞಾನವನ್ನು ಹಂಚಿಕೊಳ್ಳುವುದೇ ಉಪದೇಶ.  “ನಾನು ಉಪದೇಶ ನೀಡುತ್ತೇನೆ, ಆದೇಶವನ್ನಲ್ಲ” ಎನ್ನುತ್ತಾನೆ ಮಹಾವೀರ. ಆದೇಶದಲ್ಲಿ ಆಗ್ರಹಪೂರ್ವಕವಾಗಿ ಮತ್ತೊಬ್ಬರ ಮೇಲೆ ಏನನ್ನೋ ಹೇರುವ ಪ್ರಯತ್ನವಿರುತ್ತದೆ. ಅದೊಂದು ಶ್ರಮ, ಅದೊಂದು ಆಯಾಸ. ಮತ್ತೊಬ್ಬರು ಅದನ್ನು ಒಪ್ಪಿಕೊಂಡರೆ ಮಾತ್ರ ಅಲ್ಲಿ ಪ್ರಸನ್ನತೆ. ಇಲ್ಲವಾದರೆ ಅಪ್ರಸನ್ನತೆ. […]