ಕೇನೋಪನಿಷತ್ತು : ಸನಾತನ ಸಾಹಿತ್ಯ ~ ಮೂಲಪಾಠಗಳು #8

ಕೇನೋಪನಿಷತ್ತು ಸಾಮವೇದದ ತಲವಕಾರ ಬ್ರಾಹ್ಮಣಕ್ಕೆ ಸೇರಿದೆ. ತಲವಕಾರ ಬ್ರಾಹ್ಮಣಕ್ಕೆ “ಜೈಮಿನೀಯ ಬ್ರಾಹ್ಮಣ”ವೆಂದೂ ಹೆಸರಿದೆ. ಈ ಉಪನಿಷತ್ತಿನ ಮೊದಲ ಮಂತ್ರವು “ಕೇನ” ಎಂಬ ಪದದಿಂದ ಆರಂಭವಾಗುವದರಿಂದ ಇದಕ್ಕೆ “ಕೇನೋಪನಿಷತ್” ಎಂಬ ಹೆಸರು ಬಂದಿದೆ. ಕೇನ ಎಂದರೆ ಯಾರಿಂದ ಎಂದು ಅರ್ಥ. ಈ ಜಗತ್ತಿನ ಸೃಷ್ಟಿ ಯಾರಿಂದ ಆಯಿತು ಎಂಬ ಪ್ರಶ್ನೆಗೆ ಉತ್ತರವು ಕೇನೋಪನಿಷತ್ತಿನಲ್ಲಿದೆ. ಈ ಉಪನಿಷತ್ತಿಗೆ ಶ್ರೀ ಶಂಕರಾಚಾರ್ಯರು ಪದಭಾಷ್ಯ ಹಾಗೂ ವಾಕ್ಯಭಾಷ್ಯವೆಂಬ ಎರು ಪ್ರಸಿದ್ಧ ಭಾಷ್ಯಗಳನ್ನು ಬರೆದಿದ್ದಾರೆ. (ಎರಡನ್ನೂ ಶಂಕರರೇ ರಚಿಸಿರುವ ಬಗ್ಗೆ ಅನುಮಾನಗಳೂ ಇವೆ). ಅಧ್ಯಯನದ ಅನುಕೂಲಕ್ಕಾಗಿ ಈ […]

ಎಲ್ಲರಲ್ಲೂ ತನ್ನನ್ನು ಕಾಣುವವನೇ ಜ್ಞಾನಿ : ಈಶಾವಾಸ್ಯ ಉಪನಿಷತ್

“ಯಾರ ಬಗ್ಗೆಯೂ ಬೇಸರವನ್ನಾಗಲೀ ಮತ್ಸರವನ್ನಾಗಲೀ ಇಟ್ಟುಕೊಳ್ಳದವರು ಸಹಜವಾಗಿ ಶುದ್ಧಪ್ರೇಮ ಭಾವವನ್ನು ಹೊಂದಿರುತ್ತಾರೆ. ಇಂತಹ ಸಹಜ ಪ್ರೇಮಿಗಳೇ ನಿಜವಾದ ಜ್ಞಾನಿಗಳು” ಎನ್ನುವುದು ಈಶಾವಾಸ್ಯದ ಈ ಶ್ಲೋಕದ ಅಂತರಾರ್ಥ.  ಯಸ್ಮಿನ್ ಸರ್ವಾಣಿ ಭೂತಾನಿ, ಆತ್ಮೈ ವಾ ಭೂದ್ವಿಜಾನತಃ | ತತ್ರ ಕೋ ಮೋಹ ಕಃ ಶೋಕ ಏಕತ್ವಮನುಪಶ್ಯತಃ || “ಯಾರು ಎಲ್ಲ ಜೀವಿಗಳಲ್ಲೂ ತಮ್ಮ ಆತ್ಮವನ್ನೆ ಕಾಣುತ್ತಾರೋ ಅವರಿಗೆಂಥ ಮೋಹ? ಅವರಿಗೆಂಥ ಶೋಕ? ಅವರು ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತಾರೆ” ಎಂಬುದು ನೇರ ಅರ್ಥ. ಈ ಶ್ಲೋಕದ ಮೂಲಕ ಈಶಾವಾಸ್ಯವು ಎಲ್ಲರನ್ನೂ […]

ಉಪನಿಷತ್ತುಗಳು ಎಂದರೇನು? ಎಷ್ಟು ಸಂಖ್ಯೆಯಲ್ಲಿವೆ? : ಸನಾತನ ಸಾಹಿತ್ಯ ~ ಮೂಲಪಾಠಗಳು #3

ಯಾವುದೇ ಧರ್ಮದ ಕುರಿತು ಪ್ರಾಥಮಿಕ ಮಾಹಿತಿ ಹೊಂದಲು ನಾವು ಧಾರ್ಮಿಕ ಮನಸ್ಥಿತಿಯನ್ನು ಹೊಂದಿರಲೇಬೇಕೆಂದಿಲ್ಲ. ಆಯಾ ಧರ್ಮದ ಕುರಿತು ಗೌರವ, ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಈ ತಿಳಿವಳಿಕೆ ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಹಿಂದೂ ಧರ್ಮದ ಕುರಿತು ಕೆಲವು ಪ್ರಾಥಮಿಕ ಸಂಗತಿಗಳ ಮಾಹಿತಿ ಸರಣಿಯನ್ನು ಪ್ರಕಟಿಸುತ್ತಿದ್ದೇವೆ. ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/06/15/sanatana2/ ವೇದಗಳ ಪ್ರಮುಖ ಭಾಗವಾದ ಉಪನಿಷತ್ತುಗಳನ್ನು ‘ವೇದಾಂತ’ ಎಂದೂ ಕರೆಯುತ್ತಾರೆ. ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) = ಉಪನಿಷತ್ ಎಂದಾಗಿದೆ. ಗುರುವಿನ […]

ಆಲೋಚನೆಗಳು ಇಲ್ಲವಾದರೆ ಶಾಂತಿ : ಉಪನಿಷತ್ ವಾಕ್ಯ

“ಆಲೋಚನೆಗಳು ಮೌನ ತಾಳಿದಾಗ ಆತ್ಮವು ತನ್ನ ಮೂಲ ನೆಲೆಯಲ್ಲಿ ಶಾಂತಿಯಿಂದ ನೆಲೆಸುವುದು” ~ ಉಪನಿಷತ್ ವಾಕ್ಯ ನಮ್ಮ ಅಂತರಂಗವು ಆತ್ಮದ ಮೂಲ ನೆಲೆ. ಅಂತರಂಗವನ್ನು ಒಂದು ಕೊಳವೆಂದು ಭಾವಿಸುದರೆ, ಆಲೋಚನೆಗಳು ಆ ಕೊಳವನ್ನು ಕದಡುವ ಅಲೆಗಳು. ಅಲೆಗಳು ಕಲಕುತ್ತಿದ್ದಷ್ಟೂ ಹೊತ್ತು ಆತ್ಮದ ನೆಲೆ ವಿಚಲಿತಗೊಳ್ಳುತ್ತ ಇರುತ್ತದೆ. ಇದರಿಂದ ಆತ್ಮದ ಶಾಂತಿಯೂ ಕದಡುತ್ತದೆ. ಆತ್ಮವು ಅಶಾಂತಿಯಿಂದ ಇದ್ದರೆ ಮನುಷ್ಯರ ಬದುಕು ಹಳಿ ತಪ್ಪುತ್ತದೆ. ಆದ್ದರಿಂದ, ಆತ್ಮ ಶಾಂತವಾಗಿರಬೇಕು ಎಂದರೆ ಮೊದಲು ಆಲೋಚನಾ ತರಂಗಗಳನ್ನು ಸುಮ್ಮನಾಗಿಸಬೇಕು.  ಈ ಆಲೋಚನೆಯ ಅಲೆಗಳು […]